ವಿಧಾನ ಪರಿಷತ್ ಕಲಾಪದಲ್ಲಿಂದು ಹನಿಮೂನ್ ವಿಷಯ ಇಡೀ ಸದನವೇ ನಗೆಗಡಲಲ್ಲಿ ತೇಲುವಂತೆ ಮಾಡಿದೆ.
ಚರ್ಚೆಯ ವೇಳೆ ಜೆಡಿಎಸ್ನ ಶರವಣ ಸರ್ಕಾರ ಬಂದು 2 ತಿಂಗಳು ಆಗುತ್ತಿದೆ. ಹನಿಮೂನ್ ಸಮಯ ಮುಗಿದುಹೋಗಿದೆ ಎಂದರು. ಆಗ ಗೃಹ ಸಚಿವ ಪರಮೇಶ್ವರ್, ಅಯ್ಯೋ ಇನ್ನು ಇದೆ ಸ್ವಾಮಿ, ಕನಿಷ್ಠ 6 ತಿಂಗಳಾದರೂ ಹನಿಮೂನ್ ಸಮಯ ಬೇಕು ಎಂದಿದ್ದಾರೆ. ಆಗ ಶರವಣ, ಇನ್ನು 6 ತಿಂಗಳು ಬೇಕಾ? ಆಯ್ತಾ ತಗೊಳ್ಳಿ ಎಂದು ಹೇಳಿದ್ದು ಪರಿಷತ್ನಲ್ಲಿ ನೆರೆದಿದ್ದ ಎಲ್ಲರನ್ನ ನಗೆಗಡಲಲ್ಲಿ ತೇಲುವಂತೆ ಮಾಡಿದೆ.