ಬೆಂಗಳೂರು: ನೂರಕ್ಕೆ ನೂರರಷ್ಟು ನಾನೇ ವಿಪಕ್ಷ ನಾಯಕ ಆಗ್ತೀನಿ ಎಂದು ಹೇಳುವ ಮೂಲಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಚ್ಚರಿ ಮೂಡಿಸಿದ್ದಾರೆ.
ವಿಧಾನಸಭೆಯಲ್ಲಿಂದು ಯತ್ನಾಳರ ಕಾಲೆಳೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸ್ವತಃ ಯತ್ನಾಳ ಅವರೇ ನೂರಕ್ಕೆ ನೂರರಷ್ಟು ನಾನೇ ವಿಪಕ್ಷ ನಾಯಕ ಆಗ್ತೀನಿ. ನೀವು ಈ ಹಿಂದೆ ಅವರ ಅಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಎಂದಿದ್ದೀರಿ. ಆದರೆ, ಅವರೇ ಸಿಎಂ ಆದರು. ಈಗಲೂ ಅಷ್ಟೇ ನಾನು ಆಗಲ್ಲ ಅಂತೀರಿ, ಆದರೆ ನಾನೇ ಆಗ್ತೀನಿ ಎಂದು ಹೇಳಿದ್ದಾರೆ.
ಈಗಾಗಲೇ ನೀವು ವಿಪಕ್ಷ ನಾಯಕ ಸ್ಥಾನ ಕೂಡ ಅಡ್ಜಸ್ಟಮೆಂಟ್ ಮಾಡಿಕೊಂಡಿದ್ದೀರಾ..? ಎಂದು ಪ್ರಶ್ನಿಸಿದ ಅವರು, ನೀವೆಷ್ಟೇ ಬೆಂಕಿ ಹಚ್ಚಿದ್ರೂ ಹಚ್ಕೊಳ್ಳಲ್ಲ. ನೀವು ನನಗೆ ಪದೇ ಪದೇ ವಿಪಕ್ಷ ನಾಯಕ ಆಗಲ್ಲ ಅಂತಿದ್ರೆ ನೀವು ಯಾರ ಜತೆಗೋ ಅಡ್ಜಸ್ಟ್‌ಮೆಂಟ್ ಮಾಡ್ಕೊಂಡಿದ್ದೀರಾ ಅಂತಾಯ್ತು ಎಂದರು.