ದೇಶದ್ರೋಹದ ಮನಸ್ಥಿತಿಯನ್ನು ಬೆಳೆಸುತ್ತಿರುವುದು ಅಪಾಯಕಾರಿ

0
17

ಬೆಂಗಳೂರು: ಯಲಹಂಕ ಬಳಿಯ ಸ್ವಾತಂತ್ರ್ಯ ವೀರ ವಿಡಿ ಸಾವರ್ಕರ್‌ ಮೇಲ್ಸೇತುವೆಗೆ ಮಸಿ ಬಳಿಯುವ ಮೂಲಕ ಕಾಂಗ್ರೆಸ್‌ ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐ ಕಾರ್ಯಕರ್ತರು ವಿಕೃತಿ ಮೆರೆದಿದ್ದಾರೆ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಮುಖಂಡ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಪೋಸ್ಟ್‌ ಮಾಡಿದ್ದು ದೇಶದ್ರೋಹಿಗಳಿಗೆ ಸದಾ ಕುಮ್ಮಕ್ಕು ನೀಡುವ ಕಾಂಗ್ರೆಸ್‌ ಪಕ್ಷ ವಿದ್ಯಾರ್ಥಿಗಳಲ್ಲಿಯೂ ದೇಶದ್ರೋಹದ ಮನಸ್ಥಿತಿಯನ್ನು ಬೆಳೆಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟ ಮಹಾನ್‌ ಸ್ವಾತಂತ್ರ್ಯ ಹೋರಾಟಗಾರನಿಗೆ ಈ ರೀತಿ ಅಪಮಾನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ.

ತುಷ್ಟೀಕರಣ ರಾಜಕಾರಣಕ್ಕೆ ಜೋತು ಬಿದ್ದಿರುವ ಕಾಂಗ್ರೆಸ್ ಸರ್ಕಾರ ಇಂತಹ ಕುಕೃತ್ಯಗಳಿಗೆ ಪ್ರಚೋದನೆ ನೀಡುತ್ತಿರುವುದು ಖಂಡನೀಯ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವೀರ ಸಾವರ್ಕರ್‌ ಅವರು ಅನುಭವಿಸಿದ ನರಕ ಯಾತನೆ ಹಾಗೂ ಅಸ್ಪ್ರಶ್ಯತೆಯ ನಿವಾರಣೆಗಾಗಿ ಶ್ರಮಿಸುವ ಜತೆ ಹಿಂದೂಗಳ ಒಗ್ಗೂಡುವಿಕೆಗಾಗಿ ಪಟ್ಟ ಶ್ರಮವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸ್ವತಃ ಇಂದಿರಾ ಗಾಂಧಿ ಅವರೇ ವೀರ ಸಾವರ್ಕರ್‌ ಅವರ ಕುರಿತು ಪ್ರಶಂಸೆಯ ಮಾತನ್ನಾಡಿದ್ದನ್ನು ಕಾಂಗ್ರೆಸ್ಸಿಗರು ಮರೆತಿರಬಹುದು.

ವೀರ ಸಾವರ್ಕರ್‌ ಅವರನ್ನು ಕಾಂಗ್ರೆಸ್ಸಿಗರು ದ್ವೇಷಿಸಬಹುದು. ಆದರೆ, ಅವರನ್ನು ಪ್ರೀತಿಸುವ ಕೋಟ್ಯಂತರ ಜನರು, ಅವರನ್ನು ಪ್ರೇರಣೆಯಾಗಿಸಿಕೊಂಡಿರುವ ಅಸಂಖ್ಯ ಯುವಕರು ಭಾರತದಲ್ಲಿದ್ದಾರೆ.

ಇಂತಹ ದೇಶದ್ರೋಹದ ಕೆಲಸಕ್ಕೆ ಕೈ ಹಾಕುವುದನ್ನು ಕಾಂಗ್ರೆಸ್ ಪಕ್ಷ ಕೂಡಲೇ ನಿಲ್ಲಿಸಬೇಕು ಎಂದಿದ್ದಾರೆ.

Previous articleಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ ಸಿಐಡಿ ತನಿಖೆಗೆ
Next articleಪೋಕ್ಸೋ ಪ್ರಕರಣ: ಮುರುಘಾಶರಣರ ಪ್ರಕರಣಕ್ಕೆ ಹೊಸ ತಿರುವು