ಟ್ವೀಟ್‌ ವಿಥ್‌ ಡ್ರಾ ಮಾಡಿಸಿದ್ದೇನೆ

0
19

ಬೆಂಗಳೂರು: ಬಿಬಿಎಂಪಿ ಬೆಂಕಿ ಆಕಸ್ಮಿಕ ಅಲ್ಲ, ಷಡ್ಯಂತ್ರ ಎಂದು ಕರ್ನಾಟಕ ಕಾಂಗ್ರೆಸ್‌ ಮಾಡಿದ್ದ ಟ್ವೀಟ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ ಪ್ರತಿಕ್ರಿಯಿಸಿದ್ದು, ನಾನು ಟ್ವೀಟ್ ನೋಡುತ್ತಿದ್ದೆ. ಸದ್ಯಕ್ಕೆ ಯಾರ ಮೇಲೂ ಆರೋಪ ಮಾಡುವುದಿಲ್ಲ. ಆ ಟ್ವೀಟ್‌ ಒಪ್ಪಲು ಸಾಧ್ಯವಿಲ್ಲ. ನನಗೆ ಗೊತ್ತಾದ ತಕ್ಷಣ ಟ್ವೀಟ್‌ ವಿಥ್‌ ಡ್ರಾ ಮಾಡಿಸಿದ್ದೇನೆ. ಯಾರೋ ಹುಡುಗರು ಮಾಡಿದ್ದಾರೆ. ನೋಡಿದ ತಕ್ಷಣ ನಾವು ಆ ಟ್ವೀಟ್‌ ಅನ್ನು ಹಿಂದಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ತಾನು ಮಾಡಿದ ಭ್ರಷ್ಟಾಚಾರದ ಸಾಕ್ಷ್ಯಗಳಿಗೆ ಬೆಂಕಿ ಇಟ್ಟು ಬಚಾವಾಗಿಬಿಡುವ ಹುನ್ನಾರ ನಡೆಸಿದೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿತ್ತು.

Previous articleಕಾರು-ಬಸ್ ನಡುವೆ ಭೀಕರ ಅಪಘಾತ: ತಾಯಿ ಮಗ ಸ್ಥಳದಲ್ಲೇ ಸಾವು
Next articleರಜೆ ದಿನವೂ ಪಾಲಿಕೆ ಆಯುಕ್ತರ ಸಿಟಿ ರೌಂಡ್ಸ್