ಜನವರಿಯಲ್ಲಿ ಸರಕಾರಿ ನೌಕರರಿಗೆ ಪರಿಷ್ಕೃತ ವೇತನ: ಷಡಕ್ಷರಿ

0
35
7ನೇ ವೇತನ

ಕುಷ್ಟಗಿ: 7ನೇ ವೇತನ ನೀಡುವ ಬಗ್ಗೆ ಆಯೋಗ ರಚನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ಜನವರಿಯಲ್ಲಿ ಆದೇಶದ ಮೂಲಕ ಪರಿಷ್ಕೃತ ವೇತನ ಸರಕಾರಿ ನೌಕರರಿಗೆ ಸಿಗಲಿದೆ ಸರ್ಕಾರಿ ನೌಕರರ ಸಂಘ ಸರ್ಕಾರ ಜೊತೆಗೆ ಯಾವುದೇ ಸಂಘರ್ಷಕ್ಕೆ ಇಳಿಯದೆ ನಮ್ಮ ಹಕ್ಕನ್ನು ಪಡೆದುಕೊಳ್ಳುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.
ಪಟ್ಟಣದ ಮುಖಾಂತರ ಬಾಗಲಕೋಟೆಗೆ ತೆರಳುವ ರಸ್ತೆ ಮಧ್ಯದಲ್ಲಿ ತಾಲೂಕು ನೌಕರರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು, ಕೇಂದ್ರ ಸಮಾನ ವೇತನ, ವೇತನ ಆಯೋಗ ಶೀಘ್ರ ರಚನೆಯಾಗಲ್ಲಿದೆ. ಆದಷ್ಟು ಬೇಗನೆ ಜಾರಿಗೆ ತರಲು ಶತಸಿದ್ಧ. ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಜಾರಿಯು ಸಂಘದ ಮುಖ್ಯ ಗುರಿಯಾಗಿದ್ದು, ರಾಜ್ಯದ 6 ಲಕ್ಷ ನೌಕರರ ನಂಬಿಕೆಗೆ ದ್ರೋಹ ಬಗೆಯದೆ ಬದ್ಧತೆಯಿಂದ ಕೆಲಸ ಮಾಡುತ್ತೇವೆ ಎಂದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ್, ತಾಲೂಕು ಅಧ್ಯಕ್ಷ ಬಾಲಾಜಿ ಬಳಿಗಾರ, ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ನಾಯಕ, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಶರಣಯ್ಯ ನಿಡಗುಂದಿಮಠ, ಸೋಮಶೇಖರ ಮೇಟಿ, ಪರಶುರಾಮ, ಶಿವಪ್ಪ ವಾಗ್ಮೋರೆ, ಅಹ್ಮದ್ ಹುಸೇನ, ಕಾಶೀಮಸಾಬ ಕಲಕಬಂಡಿ, ಜಗದೀಶ, ಗಿರೀಶ ಕುಂಬಾರ, ಸಿ.ಕೆ.ಸಂತೋಷ, ಅಜಯ್ಯ ಸೇರಿದಂತೆ ಅನೇಕರು ಇದ್ದರು.

Previous articleಸರ್ವಪಿತೃ ಅಮಾವಾಸ್ಯೆ: ಅಪರಕರ್ಮ ನೆರವೇರಿಸಿದ ಭಕ್ತರು
Next articleಪಂಡಿತ್ ದೀನ್ ದಯಾಳ ಉಪಾಧ್ಯಾಯ ದೇಶ ಕಂಡ ಅಪರೂಪದ ದೇಶಪ್ರೇಮಿ: ಸಿಎಂ ಬೊಮ್ಮಾಯಿ