ಗ್ರಾಮದಲ್ಲಿ ಚಿರತೆ ಹೆಜ್ಜೆ ಪತ್ತೆ

0
27

ರಾಯಚೂರು: ಚಿರತೆ ಹೆಜ್ಜೆಗಳ ಗುರುತು ಪತ್ತೆಯಾಗಿದ್ದು ಒಂದು ಹಸುವಿನ ಮೇಲೆ ದಾಳಿ ಮಾಡಿ ಕೊಂದಿರುವ ಘಟನೆ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದ ಕಲ್ಮಲಾ ರಸ್ತೆಯಲ್ಲಿ ನಡೆದಿದೆ.
ಕಲ್ಲೂರು ಗ್ರಾಮದ
ಹನುಮಂತಪ್ಪ ಎಂಬುವವರ ಹಸು ಮೇಲೆ ಚಿರತೆ ದಾಳಿಯಾಗಿದೆ ಎಂದು ಗುರುತಿಸಲಾಗಿದೆ. ಕೆಲ ದಿನಗಳಿಂದ ಚಿರತೆ ಬಂದಿದೆಯೆಂದು ಅರಣ್ಯ ಇಲಾಖೆಯವರು ಬಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಹೋಗಿದ್ದಾರೆ. ಆದರೆ. ಆಗ ಯಾವುದೇ ಸುಳಿವು ದೊರಕಿಲ್ಲ. ಕಳೆದ ಎರಡು ದಿನಗಳ ಹಿಂದೆ ಮಳೆ ಸುರಿದ ಹಿನ್ನೆಲೆಯಲ್ಲಿ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಕಂಡುಬಂದಿವೆ.
ಚಿರತೆ ಹೆಜ್ಜೆಗಳ ಗುರುತುಗಳು ಪತ್ತೆಯಾದ ಕಾರಣ ಗ್ರಾಮಸ್ಥರು ಆತಂಕಗೊಂಡಿದ್ದಾರೆ ಎಂದು ಗ್ರಾಮದ ಮುಖಂಡ ಶಿವಪ್ಪಗೌಡ ಹೊಸೂರು ತಿಳಿಸಿದ್ದಾರೆ.

Previous articleಅಲೌಕಿಕ ವಿದ್ಯೆ ಸಂಪಾದನೆಯಿಂದ ನೆಮ್ಮದಿ
Next articleಕಾಡಾನೆಗಳ ತುಳಿತಕ್ಕೆ ಕಾರ್ಮಿಕ ಮಹಿಳೆ ಸಾವು