ಕ್ಷೇತ್ರ ಆಯ್ಕೆ ಪಕ್ಷಕ್ಕೆ ಬಿಟ್ಟ ವಿಚಾರ: ಎಸ್ಸಾರ್

0
15
S R Patil

ಬಾಗಲಕೋಟೆ: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೆವಾಲಾ ಅವರ ಸೂಚನೆ ಮೇರಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ನಾನು ಅರ್ಜಿ ಸಲ್ಲಿಸಿರುವೆ. ಅರ್ಜಿಯಲ್ಲಿ ಹೈಕಮಾಂಡ್ ಸೂಚಿಸುವ ಕಡೆಗೆ ನನ್ನ ಸ್ಪರ್ಧೆ ಎಂದು ಉಲ್ಲೇಖಿಸಿರುವುದಾಗಿ ಮಾಜಿ ಸಚಿವ ಎಸ್.ಆರ್. ಪಾಟೀಲ ತಿಳಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಬೀಳಗಿ ಅಥವಾ ದೇವರಹಿಪ್ಪರಗಿ ಕ್ಷೇತ್ರ ಎಂಬುದೆಲ್ಲ ಮಾಧ್ಯಮಗಳ ಸೃಷ್ಟಿ. ಪಕ್ಷ ಸೂಚಿಸುವ ಕಡೆ ನನ್ನ ಸ್ಪರ್ಧೆ. ಆದರೆ ಕ್ಷೇತ್ರವನ್ನು ಹೈಕಮಾಂಡ್ ಸೂಚಿಸಿದಾಗ ನನ್ನ ಜತೆಗೆ ಚರ್ಚಿಸಿ ನಂತರ ಪ್ರಕಟಿಸಬೇಕೆಂಬುದನ್ನು ಬರೆದಿದ್ದೇನೆ. ಸ್ಪರ್ಧಿಸುವ ಅವಕಾಶ ಸಿಕ್ಕರೆ ನಿಲ್ಲುತ್ತೇನೆ. ಇಲ್ಲವಾದಲ್ಲಿ ಪಕ್ಷದ ಗೆಲುವಿಗಾಗಿ ಓಡಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

Previous articleಗಣರಾಜ್ಯೋತ್ಸವ ನೌಕಾಪಡೆಯ ತುಕಡಿ ಮುನ್ನಡೆಸಲಿರುವ ಕನ್ನಡದ ಕುವರಿ
Next articleಕಾಂಗ್ರೆಸ್ಸೇ ಏಕಾಂಗಿಯಾಗಿ ಸರ್ಕಾರ ರಚಿಸಲಿದೆ: ಪರಮೇಶ್ವರ್