ಕ್ಯೂಆರ್‌ ಕೋಡ್‌ನಲ್ಲಿ ರಾಹುಲ್‌‌ ಗಾಂಧಿ ಫೋಟೋ ಹಾಕಿ ಭಿಕ್ಷೆ ಬೇಡಬಹುದಲ್ಲವೇ?: ಬಿಜೆಪಿ

0
28
QR Code

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವುಳ್ಳ QR ಕೋಡ್‌ ಪೋಸ್ಟರ್‌ ಮುದ್ರಿಸಿ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಅಂಟಿಸಿ ಗೇಲಿ ಮಾಡಿದ್ದ ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್‌ ಕೊಟ್ಟಿದೆ.
ರಾಜ್ಯವನ್ನು ಲೂಟಿ ಮಾಡಿ ಹಾಳು ಮಾಡಿರುವ ಈ ಭ್ರಷ್ಟ ಜೋಡಿಯನ್ನು ರಾಜ್ಯದಿಂದ ಕಿತ್ತೆಸೆಯಲು ಇದನ್ನು ಸ್ಕ್ಯಾನ್‌ ಮಾಡಿ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಭಾವಚಿತ್ರವುಳ್ಳ QR ಕೋಡ್‌ವೊಂದನ್ನು ಬಿಜೆಪಿ ಬಿಡುಗಡೆ ಮಾಡಿದೆ. ರಾಜ್ಯವನ್ನು ಹಾಳು ಮಾಡುವುದು ಹೇಗೆ, ಸುಳ್ಳು ಸುದ್ದಿ, ಅಶಾಂತಿ ಹೇಗೆ ಹರಡಿಸಬೇಕೆಂದು ಗಹನ ಚರ್ಚೆಯಲ್ಲಿರುವ ರಿಡೂ ಸಿದ್ದರಾಮಯ್ಯ, ಇಡಿ ಡಿಕೆಶಿ ಎಂದು ಬಿಜೆಪಿ ಕಿಡಿಕಾರಿದೆ.

QR Code

ಭಾರತ್‌ ಜೋಡೋ ಯಾತ್ರೆಗಾಗಿ ಕೇರಳದ ಕೊಲ್ಲಂನಲ್ಲಿ ತರಕಾರಿ ಮಾರುವವರನ್ನು ಕಾಂಗ್ರೆಸ್‌ ಕಾರ್ಯಕರ್ತರು ದೋಚಿದ ಪ್ರಕರಣ ಬೆಳಕಿಗೆ ಬಂದಿತ್ತು. ಕಾಂಗ್ರೆಸ್ಸಿಗರೇ, ಯಾತ್ರೆಗಾಗಿ ರಾಹುಲ್‌ ಗಾಂಧಿ ಅವರ ಫೋಟೋ ಹಾಕಿ, ಕ್ಯುಆರ್‌ ಕೋಡ್‌ ಸೃಷ್ಟಿಸಿ ಭಿಕ್ಷೆ ಬೇಡಬಹುದಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.

Previous articleಗಲ್ಲಿ ಗಲ್ಲಿಯಲ್ಲಿ Pay CM ಪೋಸ್ಟರ್‌
Next articleಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ