ಕನ್ನಡಿಗರ ಹಣ ಕೈ ಹೈಕಮಾಂಡ್ ಗೆ ಟಕಾಟಕ್ ವರ್ಗಾವಣೆ

0
12

ಬೆಂಗಳೂರು: ಕನ್ನಡಿಗರ ಹಣವನ್ನ ಯದ್ವಾತದ್ವಾ ಲೂಟಿ ಮಾಡಿ ಹೈಕಮಾಂಡ್ ಗೆ ಸಾಗಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕರ್ನಾಟಕದಲ್ಲಿರುವ ಕಾಂಗ್ರೆಸ್‌ ಸರ್ಕಾರ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ #ATMSarkara ಆಗಿದೆ ಅನ್ನುವುದಕ್ಕೆ ವಾಲ್ಮೀಕಿ ನಿಗಮದ ಭ್ರಷ್ಟಾಚಾರದ ಹಣ ಟಕಾಟಕ್ ಅಂತ ತೆಲಂಗಾಣಕ್ಕೆ ವರ್ಗಾವಣೆ ಆಗಿರುವುದೇ ಸಾಕ್ಷಿ.
ಕುರ್ಚಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ, ಕುರ್ಚಿ ದಕ್ಕಿಸಿಕೊಳ್ಳಲು ಡಿಸಿಎಂ ಡಿ. ಕೆ. ಶಿವಕುಮಾರ, ಇಬ್ಬರೂ ಪೈಪೋಟಿಗೆ ಬಿದ್ದಂತೆ ಕನ್ನಡಿಗರ ಹಣವನ್ನ ಯದ್ವಾತದ್ವಾ ಲೂಟಿ ಮಾಡಿ ಹೈಕಮಾಂಡ್ ಗೆ ಸಾಗಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಕಳ್ಳ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿಯಿಲ್ಲ ಎಂದಿದ್ದಾರೆ.

Previous articleರವಿಚಂದ್ರನ್ ಬರ್ತ್ ಡೇ ಸ್ಪೆಷಲ್ ಗಿಫ್ಟ್: 90 ರೂಪಾಯಿಗೆ ದಿ ಜಡ್ಜಮೆಂಟ್ ಸಿನಿಮಾ ನೋಡಿ!
Next article‘ಟಕಾಟಕ್’ ಡೋಂಗಿ ಡೈಲಾಗ್ ನಂಬಿ…