ಬೆಂಗಳೂರು: ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸದೇ ಗ್ಯಾರಂಟಿ ಈಡೇರಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೊದಲ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಷ್ಟೇ ತೊಂದರೆಯಾದರೂ ಗ್ಯಾರಂಟಿ ಈಡೇರಿಕೆ ಮಾಡುವುದು ಖಚಿತ ಎಂದ ಅವರು. ಮುಂದಿನ ಸಚಿವ ಸಂಪುಟ ಸಭೆ ಬಳಿಕ ಜಾರಿಯಾಗಲಿವೆ ಎಂದರು.
5 ಗ್ಯಾರಂಟಿ ಪೈಕಿ 200 ಯುನಿಟ್ ಎಲ್ಲರಿಗೂ ಫ್ರೀ ಅದು ಸುಮಾರು ಒಂದು ತಿಂಗಳಿಗೆ 1,200 ಕೋಟಿ ರೂ. ಆಗಬಹುದು. ಗೃಹಲಕ್ಷ್ಮೀ ಯೋಜನೆಯಲ್ಲಿ ಪ್ರತಿ ಮನೆ ಯಜಮಾನಿಗೆ ತಿಂಗಳಿಗೆ 2,000 ರೂ. ಅವರ ಖಾತೆಗೆ ಪ್ರತಿ ತಿಂಗಳು ಹಾಕಲಾಗುವುದು. ಅನ್ನಭಾಗ್ಯ ಯೋಜನೆಯಡಿ ಹಿಂದೆ 7ಕೆಜಿ ಕೊಡುತ್ತಿದ್ದೇವು ಈಗ 10 ಕೆಜಿ ಮಾಡುತ್ತೇವೆ. ನಿರುದ್ಯೋಗ ಪದವೀಧರರಿಗೆ ಈ ವರ್ಷದಿಂದ ಎರಡು ವರ್ಷದ ವರೆಗೆ ಯುವ ನಿಧಿ ಅಡಿಯಲ್ಲಿ 3000 ಕೊಡುತ್ತೇವೆ ಪ್ರತಿ ತಿಂಗಳು. ಮತ್ತು ಡಿಪ್ಲೋಮ ಮಾಡಿದವರಿಗೆ 1,500 ನೀಡಲಾಗುವುದು.
ಸರ್ಕಾರಿ ಬಸ್‌ನಲ್ಲಿ ಓಡಾಡುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಅದು ಕರ್ನಾಟಕದ ಮಹಿಳೆಯಾಗಿರಬೇಕು ಎಂದರು.