ಬೆಂಗಳೂರು: ಎನ್ಆರ್ಐಗಳಿಗಾಗಿ ಒಂದು ಪ್ರತ್ಯೇಕ ಇಲಾಖೆ ತೆರೆಯಲು ನಾವು ಸಿದ್ಧರಾಗಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ. ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು ದೇಶದಲ್ಲಿ ಬೆಂಗಳೂರಿಗೆ ತನ್ನದೆ ಆದ ಇತಿಹಾಸವಿದೆ. ಬೆಂಗಳೂರು ಬೆಳೆಯಲು ರಾಜಕೀಯ ನಾಯಕರು, ಉದ್ಯಮದಾರರ ಪಾತ್ರ ದೊಡ್ಡದಿದೆ. ಬೇರೆ ರಾಜ್ಯಗಳಿಗಿಂತ ವಿವಿಧ ಕಂಪನಿಗಳನ್ನು ಸ್ಥಾಪಿಸಲು ಕರ್ನಾಟಕದಲ್ಲಿ ಉತ್ತಮ ಅವಕಾಶಗಳಿವೆ. ಎನ್ಆರ್ಐಗಳಿಗಾಗಿ ಒಂದು ಪ್ರತ್ಯೇಕ ಇಲಾಖೆ ತೆರೆಯಲು ನಾವು ಸಿದ್ಧರಾಗಿದ್ದೇವೆ.
ಯುವಜನತೆಗಾಗಿ ಉದ್ಯೋಗ ಸೃಷ್ಟಿ ಮಾಡಬೇಕು ಅನ್ನುವುದು ನಮ್ಮ ಉದ್ದೇಶ. ನಮ್ಮ ಸರ್ಕಾರ ನಿಮ್ಮೊಂದಿಗೆ ಇರುತ್ತದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಬೆಂಗಳೂರನ್ನು ‘ಬ್ರಾಂಡ್ ಬೆಂಗಳೂರು’ ಮಾಡೋಣ. ಉದ್ಯಮಿಗಳು ದೇಶದ ಆಸ್ತಿ. ಉದ್ಯೋಗ ಸೃಷಿಗೆ ನೀವು ಆಲೋಚನೆ ಮಾಡಬೇಕು. ಗ್ರಾಮೀಣ ಭಾಗದ ಮಕ್ಕಳು ಬಹಳ ಬುದ್ದಿವಂತರಿದ್ದಾರೆ. ಹಳ್ಳಿಯ ಯುವಕರಿಗೆ ಉದ್ಯೋಗ ಸಿಗಲಿ. ನಗರ ಪ್ರದೇಶದ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಉದ್ಯೋಗ ಸೃಷ್ಟಿ ಆಗಬೇಕು ಎಂದರು.