ದಾಂಡೇಲಿ: ಮಕ್ಕಳಿಗೆ ಉಚಿತ ಹೃದಯ ತಪಾಸಣೆ ಚಿಕಿತ್ಸೆ

ದಾಂಡೇಲಿ: ಹೃದ್ರೋಗ ತಜ್ಞರಾದ ಹಿರಿಯ ವೈದ್ಯ ಡಾ.ಜಿ.ವಿ.ಭಟ್ ಅವರು ತಮ್ಮ ಹಾಸ್ಪಿಟಲ್‌ನಲ್ಲಿ 15 ವರ್ಷದೊಳಗಿನ ದಾಂಡೇಲಿ ಸುತ್ತಮುತ್ತಲಿನ ಮಕ್ಕಳಿಗೆ ಉಚಿತ ಹೃದಯ ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆ ಮಾಡಲಾಗುವುದೆಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಎಳೆಯ ವಯಸ್ಸಿನ ಮಕ್ಕಳು, ಯುವ ಜನರು ಹಾರ್ಟ್ ಅಟ್ಯಾಕ್‌ನಿಂದ ಮೃತರಾಗುತ್ತಿರುವದು ನೋವಿನ ಸಂಗತಿಯಾಗಿದೆ. 15 ವರ್ಷದೊಳಗಿನ ಮಕ್ಕಳು ನಾನಾ ದುಶ್ಚಟಗಳನ್ನು ಅಂಟಿಸಿಕೊಂಡಿದ್ದು ಅವರ ಆರೋಗ್ಯ ಹದಗೆಡುತ್ತಿದೆ. ಅವರ ಬಗ್ಗೆ ಕೇರ್ ಅಗತ್ಯ. ಈ ಹಿನ್ನಲೆಯಲ್ಲಿ ಈ ಭಾಗದ ಬಾಲಕ, ಬಾಲಕಿಯರು ಯಾವುದೇ ಸಂಕೋಚವಿಲ್ಲದೆ ಹಾಸ್ಪಿಟಲ್‌ಗೆ ಬಂದು ಉಚಿತ ಹೃದಯ ತಪಾಸಣೆ ಮತ್ತು ಸೂಕ್ತ ಪಡೆಯಬೇಕು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಸಂಜೆ 5.30 ರಿಂದ 8 ಗಂಟೆಯವರೆಗೆ ಬಂದು ಹೃದಯ ತಪಾಸಣೆ ಮಾಡಿಕೊಳ್ಳಬಹುದು. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.