ದುಬೈನಲ್ಲಿ ‘ವೈಲ್ಡ್ ಟೈಗರ್ ಸಫಾರಿ’ ಝಲಕ್ ಅದ್ಧೂರಿ ಅನಾವರಣ

0
5

ಬೆಂಗಳೂರು/ದುಬೈ: ಯಶ್ ನಟನೆಯ ಮೆಗಾ ಹಿಟ್ ‘KGF’ ಚಿತ್ರಕ್ಕೆ ಸಂಭಾಷಣೆ ಬರೆದು ಹೆಸರು ಮಾಡಿದ ಚಂದ್ರಮೌಳಿ ಇದೀಗ ನಿರ್ದೇಶಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅವರ ನಿರ್ದೇಶನದ ಮೊದಲ ಚಿತ್ರ ‘ವೈಲ್ಡ್ ಟೈಗರ್ ಸಫಾರಿ’ ಈಗಾಗಲೇ ಸಿನಿರಸಿಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗಪ್ಪಳಿಸಲು ಸಜ್ಜಾಗಿರುವ ಈ ಚಿತ್ರಕ್ಕೆ ಇತ್ತೀಚೆಗೆ ದುಬೈನಲ್ಲಿ ಅದ್ಧೂರಿಯಾಗಿ ಟೀಸರ್ ಲಾಂಚ್ ಮಾಡಲಾಗಿದೆ.

ದುಬೈನ ಪ್ರಸಿದ್ಧ ಗ್ಲೋಬಲ್ ವಿಲೇಜ್ನಲ್ಲಿ ನಡೆದ ಈ ಟೀಸರ್ ಬಿಡುಗಡೆ ಕಾರ್ಯಕ್ರಮ ವಿಶೇಷ ಗಮನ ಸೆಳೆದಿದೆ. ಈ ಸ್ಥಳದಲ್ಲಿ ಯಾವುದೇ ಬಾಲಿವುಡ್ ಸ್ಟಾರ್ ಸಿನಿಮಾಗೂ ಈವರೆಗೆ ಟೀಸರ್ ಲಾಂಚ್ ಆಗಿರಲಿಲ್ಲ ಎನ್ನುವುದು ಗಮನಾರ್ಹ. ಆ ಮೂಲಕ ಕನ್ನಡದ ‘ವೈಲ್ಡ್ ಟೈಗರ್ ಸಫಾರಿ’ ಚಿತ್ರ ಇತಿಹಾಸ ನಿರ್ಮಿಸಿದೆ.

ಇದನ್ನೂ ಓದಿ:  ಬಳ್ಳಾರಿ: CID ತನಿಖೆ ಸ್ವಾಗತ, ನಿಷ್ಪಕ್ಷಪಾತ ತನಿಖೆ ಆಗದಿದ್ದರೆ CBIಗೆ

ಶಿಥಿಲ್ ಪೂಜಾರಿ ಮಾಸ್ ಅವತಾರ: ಚಿತ್ರದಲ್ಲಿ ಶಿಥಿಲ್ ಪೂಜಾರಿ ನಾಯಕನಾಗಿ ಭರ್ಜರಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾ. ಟೀಸರ್‌ನಲ್ಲೇ ಆಕ್ಷನ್, ಸ್ಟೈಲ್ ಹಾಗೂ ಇಂಟೆನ್ಸ್ ಲುಕ್‌ಗಳ ಮೂಲಕ ಶಿಥಿಲ್ ಗಮನ ಸೆಳೆಯುತ್ತಾರೆ. ಇದು ಪಕ್ಕಾ ಆಕ್ಷನ್ ಎಂಟರ್‌ಟೈನರ್ ಎನ್ನುವುದು ಟೀಸರ್ ನೋಡುತ್ತಿದ್ದಂತೆಯೇ ಸ್ಪಷ್ಟವಾಗುತ್ತದೆ. ನಾಯಕಿಯಾಗಿ ‘ಶೇಕ್ ಇಟ್ ಪುಷ್ಪಾವತಿ’ ಖ್ಯಾತಿಯ ನಟಿ ನಿಮಿಕಾ ರತ್ಮಾಕರ್ ಮಿಂಚಿದ್ದಾರೆ. ಇವರ ಜೋಡಿ ತೆರೆ ಮೇಲೆ ಹೊಸ ಫ್ರೆಶ್ ಎನರ್ಜಿ ತರುವ ನಿರೀಕ್ಷೆ ಇದೆ.

ಆಕ್ಷನ್–ರಿವೇಂಜ್ ಕಥೆ, ಮಾನವ ಕಳ್ಳಸಾಗಣೆ ಎಳೆ: ‘ವೈಲ್ಡ್ ಟೈಗರ್ ಸಫಾರಿ’ ಒಂದು ಆಕ್ಷನ್–ರಿವೇಂಜ್ ಕಥಾಹಂದರ ಹೊಂದಿರುವ ಸಿನಿಮಾ. ಜೊತೆಗೆ ಮಾನವ ಕಳ್ಳಸಾಗಣೆ (ಹ್ಯೂಮನ್ ಟ್ರಾಫಿಕಿಂಗ್) ಎಂಬ ಗಂಭೀರ ಸಾಮಾಜಿಕ ವಿಷಯವನ್ನೂ ಚಿತ್ರ ಒಳಗೊಂಡಿದೆ. ಮನರಂಜನೆಯ ಜೊತೆಗೆ ಸಾಮಾಜಿಕ ಸಂದೇಶ ನೀಡುವ ಪ್ರಯತ್ನ ಚಿತ್ರದಲ್ಲಿದೆ.

ಇದನ್ನೂ ಓದಿ:  ಬಳ್ಳಾರಿ ಗಲಭೆ ಪ್ರಕರಣ: CID ತನಿಖೆ ಸ್ವಾಗತ, ಪಾರದರ್ಶಕ ತನಿಖೆ ಅಗತ್ಯ

ಸ್ಟಾರ್ ಕಲಾವಿದರ ಭರ್ಜರಿ ಬಳಗ: ‘KGF’ ಖ್ಯಾತಿಯ ಅವಿನಾಶ್ ಹಾಗೂ ಅಚ್ಯುತ್ ಕುಮಾರ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಬಾಲಿವುಡ್ ಕಲಾವಿದರಾದ ಧರ್ಮೇಶ್ ಮತ್ತು ಸುಶಾಂತ್ ಪೂಜಾರಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೂಪರ್ ಹಿಟ್ ‘ABCD’ ಚಿತ್ರದಲ್ಲಿ ನಟಿಸಿದ್ದ ಕೆಲ ಕಲಾವಿದರು ಸಹ ಈ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ರೆಮೋ ಡಿ ಸೋಜಾ ಮೆಚ್ಚುಗೆ: ‘ವೈಲ್ಡ್ ಟೈಗರ್ ಸಫಾರಿ’ ಟೀಸರ್ ನೋಡಿ ಖ್ಯಾತ ಕೊರಿಯೋಗ್ರಾಫರ್ ರೆಮೋ ಡಿ ಸೋಜಾ ಫಿದಾ ಆಗಿದ್ದು, ಸ್ವತಃ ಟೀಸರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದು ಚಿತ್ರತಂಡಕ್ಕೆ ಮತ್ತಷ್ಟು ಬಲ ತುಂಬಿದೆ.

ಇದನ್ನೂ ಓದಿ:  ಖ್ಯಾತ ಲೇಖಕಿ ಆಶಾ ರಘು ನಿಧನ

ತಾಂತ್ರಿಕವಾಗಿ ಬಲಿಷ್ಠ ಚಿತ್ರ: ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಆಕ್ಷನ್ ದೃಶ್ಯಗಳಿಗೆ ಕೇಚಾ ಖಂಫಕ್ಡೀ ಮತ್ತು ಮಾಸ್ ಮಾದ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ. ಹಾಡುಗಳಿಗೆ ಗಣೇಶ್ ಆಚಾರ್ಯ, ಇಮ್ರಾನ್ ಸರ್ಧಾರಿಯಾ ಹಾಗೂ ಎ. ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ. ಸೆಟ್‌ಗಳನ್ನು ಮೋಹನ್ ಬಿ. ಕೆರೆ ಮತ್ತು ಸಂದೀಪ್ ಜಿ. ಶರ್ಮಾ ನಿರ್ಮಿಸಿದ್ದಾರೆ. ಪ್ರಸ್ತುತ ‘ಟಾಕ್ಸಿಕ್’ ಚಿತ್ರಕ್ಕೂ ಛಾಯಾಗ್ರಹಣ ಮಾಡುತ್ತಿರುವ ಖ್ಯಾತ ಕ್ಯಾಮರಾಮ್ಯಾನ್ ರಾಜೀವ್ ರವಿ ಈ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಚಿತ್ರದ ಸಂಭಾಷಣೆಯನ್ನು ರಾಘವ್ ವಿನಯ್ ಬರೆದಿದ್ದಾರೆ.

VKF ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣ: ‘ವೈಲ್ಡ್ ಟೈಗರ್ ಸಫಾರಿ’ ಚಿತ್ರವನ್ನು ವಿಕೆಎಫ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಿಸಲಾಗಿದೆ. ದುಬೈನಲ್ಲಿ ನೆಲೆಸಿರುವ ವಿನೋದ್ ಕುಮಾರ್, ಕಿಶೋರ್ ಕುಮಾರ್, ಪ್ರಸನ್ನ ಕುಮಾರ್ ಹಾಗೂ ಗುರುದತ್ ಗಾಣಿಗ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:  ಹುಬ್ಬಳ್ಳಿಗೆ CID ತಂಡ: ವಿವಸ್ತ್ರ–ಹಲ್ಲೆ ಪ್ರಕರಣದ ತನಿಖೆ ಚುರುಕು

ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ಹೊಸ ವರ್ಷದ ಬೆನ್ನಲ್ಲೇ ಆರಂಭವಾದ ಪ್ರಚಾರ ಕಾರ್ಯಗಳು, ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿವೆ. ದೊಡ್ಡ ಮಟ್ಟದಲ್ಲಿ ರಿಲೀಸ್ ಪ್ಲ್ಯಾನ್ ಮಾಡಿರುವ ಚಿತ್ರತಂಡ, ಶೀಘ್ರದಲ್ಲೇ ‘ವೈಲ್ಡ್ ಟೈಗರ್ ಸಫಾರಿ’ಯನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ.

ಆಕ್ಷನ್ ಪ್ರಿಯರಿಗೆ ಈ ಸಿನಿಮಾ ಭರ್ಜರಿ ಮನರಂಜನೆ ನೀಡಲಿದೆ ಎಂಬ ಭರವಸೆಯನ್ನು ಟೀಸರ್ ಈಗಾಗಲೇ ಮೂಡಿಸಿದೆ.

Previous articleಬಳ್ಳಾರಿ: CID ತನಿಖೆ ಸ್ವಾಗತ, ನಿಷ್ಪಕ್ಷಪಾತ ತನಿಖೆ ಆಗದಿದ್ದರೆ CBIಗೆ