ವಿನಯ್ ರಾಜ್‌ಕುಮಾರ್ ಮತ್ತು ನಟಿ ರಮ್ಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಜನರ ಹಲವಾರು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ ರಮ್ಯಾ ಇನ್‌ಸ್ಟಾಗ್ರಾಮ್ ಸ್ಟೇಟಸ್ ಹಾಕುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ರಮ್ಯಾ ವಿನಯ್ ರಾಜ್‌ಕುಮಾರ್ “ನನ್ನ ತಮ್ಮನಿದ್ದಂತೆ” ಎಂದು ಹೇಳಿದ್ದಾರೆ. ವಿನಯ್ ಜೊತೆ ರಮ್ಯಾ ವಿದೇಶದಲ್ಲಿ ಸುತ್ತಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಫೋಟೋಗಳನ್ನು ರಮ್ಯಾ ಅವರೇ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಮತ್ತು ವಿನಯ್‌ಗೂ ಟ್ಯಾಗ್ ಮಾಡಿದ್ದರು.
ಇದರಿಂದಾಗಿ ನೆಟ್ಟಿಗರು ಇಬ್ಬರ ನಡುವಿನ ಸಂಬಂಧದ ಬಗ್ಗೆ ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದರು. ಈ ಕುರಿತು ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ “ವಿನಯ್ ರಾಜ್‌ಕುಮಾರ್ ನನಗೆ ತಮ್ಮನಿದ್ದಂತೆ” ಎಂದು ಪೋಸ್ಟ್ ಮಾಡಿದ್ದಾರೆ.
ರಮ್ಯಾ ವಿದೇಶದಲ್ಲಿ ಮೇಕಪ್ ಮಾಡಿಸಿಕೊಳ್ಳುತ್ತಿರುವ ಚಿತ್ರ ಮತ್ತು ವಿನಯ್ ರಾಜ್‌ಕುಮಾರ್ ಜೊತೆಯಲ್ಲಿ ಓಡಾಡುತ್ತಿರುವ ಚಿತ್ರ ಹಾಗೂ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ದೇಶ-ವಿದೇಶಗಳಿಗೆ ಪ್ರಯಾಣಿಸುವುದು ರಮ್ಯಾ ಅವರಿಗೆ ಹೊಸದೇನಲ್ಲ. ಅವರು ಆಗಾಗ ತಾವು ಭೇಟಿ ನೀಡಿದ ಸ್ಥಳಗಳ ಪ್ರಕೃತಿ ಸೌಂದರ್ಯದ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ, ಇದಕ್ಕೆ ಅವರ ಅಭಿಮಾನಿಗಳು ಸಾಕಷ್ಟು ಕಾಮೆಂಟ್‌ಗಳನ್ನು ಹಾಕುತ್ತಾರೆ.
ದರ್ಶನ್ ಕೇಸ್‌ನಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪರವಾಗಿ ಪೋಸ್ಟ್ ಮಾಡಿದ್ದ ಅವರು ಇತ್ತೀಚೆಗೆ ಬಹಳಷ್ಟು ಸುದ್ದಿಯಾಗಿದ್ದರು. ಅದಕ್ಕೆ ಕೆರಳಿದ ನಟ ದರ್ಶನ್ ಅಭಿಮಾನಿಗಳು ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್ ಹಾಕಿದ್ದರು.
ಬಳಿಕ ರಮ್ಯಾ ಕೇಸ್ ದಾಖಲಿಸಿ ಕಾನೂನು ಹೋರಾಟ ಆರಂಭಿಸಿದ್ದರು. ಪೊಲೀಸರು ತನಿಖೆ ಕೈಗೊಂಡು ಅವರಲ್ಲಿ ಸಾಕಷ್ಟು ಜನರನ್ನು ಬಂಧಿಸಿದ್ದಾರೆ.