Home ಸಿನಿ ಮಿಲ್ಸ್ ಧೂಳೆಬ್ಬಿಸಿದ ಟಾಕ್ಸಿಕ್‍: ಟೀಸರ್‌ನಲ್ಲಿ ಈ ಸೀನ್ ಬೇಕಿತ್ತಾ?

ಧೂಳೆಬ್ಬಿಸಿದ ಟಾಕ್ಸಿಕ್‍: ಟೀಸರ್‌ನಲ್ಲಿ ಈ ಸೀನ್ ಬೇಕಿತ್ತಾ?

0
25

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಅವರ ಟಾಕ್ಸಿಕ್ ಸಿನಿಮಾದ ಟೀಸರ್‌ ಇಂದು ಬಿಡುಗಡೆಯಾಗುತ್ತಿದ್ದಂತೆ ಎಲ್ಲಡೆ ಅದರ ಕುರಿತಂತೆ ಚರ್ಚೆಗಳು ಆರಂಭಗೊಂಡಿವೆ.

ಹಾಲಿವುಡ್‌ ಮಟ್ಟದ ಸಿನಿಮಾ ಮಾಡುವುದಾಗಿ ಹೇಳಿದ್ದ ಯಶ್‌ ಟೀಸರ್‌ನಲ್ಲಿಯೇ ಸಿನಿಮಾ ಕ್ವಾಲಿಟಿ ಹೇಗಿದೆ ಎನ್ನುವುದನ್ನೂ ಅತ್ಯಂತ ಅಚ್ಚುಕಟ್ಟಾಗಿ ತೋರಿಸಿದ್ದಾರೆ.

ಮುಂಜಾನೆ 10 ಗಂಟೆ 10 ನಿಮಿಷಕ್ಕೆ ಬಿಡುಗಡೆಯಾಗಿರುವ ಟೀಸರ್‌ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ವಿಭಿನ್ನ ಲುಕ್‌ನಲ್ಲಿ ಯಶ್‌ ಕಾಣಿಸಿಕೊಂಡಿದ್ದಾರೆ.

ಡಿಫರೆಂಟ್‌ ಎಂಟ್ರಿ ಕೊಟ್ಟಿರುವ ಯಶ್‌ನನ್ನು ನೋಡಿ ಎಲ್ಲರೂ ಖುಷಿ ಆಗಿದ್ದು ಒಂದಡೆಯಾದರೆ, ಅವರೊಂದಿಗೆ ಕಾರಿನಲ್ಲಿ ಇದ್ದವರ್ಯಾರು ಎನ್ನುವುದು ಈಗ ದೊಡ್ಡ ಪ್ರಶ್ನೆಯಾಗಿದೆ.

ನಟಿಗಾಗಿ ಹುಡುಕಾಟ: ಟೀಸರ್​ನ ಓಪನಿಂಗ್​ ಸೀನ್​ನಲ್ಲಿ ಯಶ್​ ಜತೆಗೆ ಕಾರಿನಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ನಟಿ ಯಾರು? ಇಂತಹ ಸೀನ್‌ ಮಾಡಿರುವ ಚೆಲುವೆ ಯಾರಿರಬಹುದು? ಎನ್ನುವ ಪ್ರಶ್ನೆ ಬಹಳಷ್ಟು ಜನರಲ್ಲಿ ಕಾಡಿದಂತೂ ನಿಜ. ಹೀಗಾಗಿ ಈ ಪ್ರಶ್ನೆಗೆ ಅನೇಕ ಚಿತ್ರರಸಿಕರು ಜಾಲತಾಣದಲ್ಲಿ ನಟಿಗಾಗಿ ಹುಡುಕಾಡಿದ್ದಾರೆ.

ಮೂಲತಃ ಹಾಲಿವುಡ್​ ನಟಿಯಾಗಿರು ನಟಾಲಿಯಾ ಬರ್ನ್ ಈ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಯುಕ್ರೇನಿಯನ್-ಅಮೇರಿಕನ್ ನಟಿ ಹಾಗೂ ನಿರ್ಮಾಪಕಿ ಆಗಿರುವ ಅವರು ಸಖತ್‌ ಹಾಟ್‌ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಅನೇಕರ ನಿದ್ದೆಗೆಡಿಸಿದೆ.

ಹಸಿಬಿಸಿ ದೃಶ್ಯದ್ದೇ ಚರ್ಚೆ: ಇನ್ನೊಂದಡೆ ಹಸಿಬಿಸಿ ದೃಶ್ಯಕ್ಕೆ ಟೀಕೆಗಳು ವ್ಯಕ್ತವಾಗಿವೆ. ಇನ್ನೂ ಕೆಲವರು ಈ ಚಿತ್ರದಲ್ಲಿನ ಇಂತಹ​ ದೃಶ್ಯಗಳ ಅವಶ್ಯಕತೆ ಇದೆಯೇ? ಎಂದೂ ಪ್ರಶ್ನಿಸಿದ್ದಾರೆ. ವಯಸ್ಕ – ಆಧಾರಿತ ದೃಶ್ಯಗಳಿಂದಾಗಿ ಕೆಲವರು ತೀವ್ರ ಅಸಮಾಧಾನಗೊಂಡಿದ್ದರೆ, ಕೆಲವರು ಇದು ಯಶ್‌ಗೆ ಬೇಡವಾಗಿತ್ತು ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಯಶ್‌ ಅಭಿಮಾನಿಗಳಿಗೆ ಒಳ್ಳೆಯ ಟೀಸರ್‌ ಹೊರಬಂದಿದ್ದು, ಒಂದೇ ಒಂದು ದೃಶ್ಯ ಮಾತ್ರ ಅತೀ ಹೆಚ್ಚು ಚರ್ಚೆಗೆ ಒಳಗಾಗಿದ್ದು, ಇದನ್ನೇ ಜನರು ಜಾಲತಾಣಗಳಲ್ಲಿ ಹೆಚ್ಚಾಗಿ ಸರ್ಚ್ ಮಾಡುವಂತಾಗಿದ್ದು, ಚಿತ್ರದಲ್ಲಿ ಇನ್ನೂ ಏನೇನಿರಬಹುದು ಎನ್ನುವ ಕುತೂಹಲವನ್ನು ದುಪ್ಪಟ್ಟು ಮಾಡಿದೆ.