ಭಾರತದ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ ಮತ್ತು ಜನಪ್ರಿಯ ಗಾಯಕ ಪಲಾಶ್ ಮುಚ್ಚಲ್ ಅವರ ವಿವಾಹ ಮುಂದೂಡಲ್ಪಟ್ಟಿತ್ತು. ಜೊತೆಗೆ ಇದೇ ವಿಚಾರವಾಗಿ ಸಾಮಾಜೀಕ ಜಾಲ ತಾಣಗಳಲ್ಲಿ ಹಲವಾರು ಊಹಾಪೋಹಗಳು ಸಹ ಹರಿದಾಡುತ್ತಿದವು. ಹಾಗೆ ನಂತರದ ವಿವಾದಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಇತ್ತೀಚಿನ ಬೆಳವಣಿಗೆಯಲ್ಲಿ, ಈ ಇಬ್ಬರು ಸೆಲೆಬ್ರಿಟಿಗಳು ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಬಯೋದಲ್ಲಿ ಒಂದೇ ರೀತಿಯ ‘ಎವಿಲ್ ಐ’ ಎಮೋಜಿಯನ್ನು ಸೇರಿಸಿರುವುದು ಊಹಾಪೋಹಗಳಿಗೆ ಮತ್ತಷ್ಟು ಕಾರಣವಾಗಿದೆ.
ಈ ಎಮೋಜಿಯನ್ನು ಹಂಚಿಕೊಳ್ಳುವ ಮೂಲಕ, ಇಬ್ಬರೂ ತಮ್ಮ ಸಂಬಂಧದ ಮೇಲೆ ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಿ ಎಂಬ ಸಂದೇಶವನ್ನು ನೀಡುತ್ತಿದ್ದಾರೆಯೇ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಮೂಲಕ ಎಲ್ಲಾ ಗೊಂದಲಗಳ ನಡುವೆಯೂ ಇಬ್ಬರೂ ತಮ್ಮ ಸಂಬಂಧದಲ್ಲಿ ಮುಂದುವರೆಯುವ ಬಗ್ಗೆ ಯೋಚಿಸುತ್ತಿದ್ದಾರೆ ಎಂಬ ಸೂಚನೆಯನ್ನು ನೀಡಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ.
ಮಂದಾನ ಮತ್ತು ಪಲಾಶ್ ಅವರ ವಿವಾಹವು ನವೆಂಬರ್ 23 ರಂದು ಎಂದು ಖಾತ್ರಿಯಾಗಿತ್ತು. ಆದರೆ ಮದುವೆಯ ದಿನ ಮಂದಾನ ಅವರ ತಂದೆ ಶ್ರೀನಿವಾಸ್ ಅವರಿಗೆ ಹೃದಯಾಘಾತವಾದ ಕಾರಣ ವಿವಾಹವನ್ನು ಮುಂದೂಡಲಾಯಿತು. ಇದರ ಬೆನ್ನಲ್ಲೇ, ಮರುದಿನವೇ ಪಲಾಶ್ ಕೂಡ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ನಂತರ ಒಂದಾದ ಮೇಲೂಂದು ಸಮಸ್ಯಗಳಿಂದ ಮನನೂಂದು ಸ್ಮೃತಿ ಮಂದಾನ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ವಿವಾಹ ಪೂರ್ವ ಸಂಭ್ರಮದ ಎಲ್ಲಾ ಫೋಟೋ ಮತ್ತು ವಿಡಿಯೋಗಳನ್ನು ಅಳಿಸಿ ಹಾಕಿದ್ದರು. ಇದು ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ದೊಡ್ಡ ಚರ್ಚೆಗೆ ಕಾರಣವಾಯಿತು.
ಅಷ್ಟೇ ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಯುವತಿಯೊಬ್ಬರ ಜೊತೆ ಪಲಾಶ್ ಸಂಬಂಧದಲ್ಲಿ ಇದ್ದರು ಎನ್ನಲಾದ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳು ಕೂಡ ಹರಿದಾಡಿದ್ದವು.
ಸದ್ಯ, ಎಲ್ಲಾ ವಿವಾದಗಳು ಮತ್ತು ಗೊಂದಲಗಳ ನಂತರ, ಇಬ್ಬರೂ ಒಂದೇ ‘ಎವಿಲ್ ಐ’ ಎಮೋಜಿಯನ್ನು ಹಂಚಿಕೊಂಡಿರುವುದು ಅವರ ಸಂಬಂಧದ ಭವಿಷ್ಯದ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ.
























Needed the APK for ag999game and ag999gameapk had it. Worked flawlessly, no problems at all. Solid source. Grab your APK at ag999gameapk