ರಣವೀರ್ ಸಿಂಗ್ ‘ಧುರಂಧರ್’ ಬ್ಲಾಕ್‌ಬಸ್ಟರ್; ಕ್ರೆಡಿಟ್‌ಗಳಲ್ಲಿ ರಾಹುಲ್ ಗಾಂಧಿ ಹೆಸರು ಕಂಡು ಪ್ರೇಕ್ಷಕರಲ್ಲಿ ಅಚ್ಚರಿ
ಬಾಲಿವುಡ್ ಸೂಪರ್‌ಸ್ಟಾರ್ ರಣವೀರ್ ಸಿಂಗ್ ಅಭಿನಯದ ಬಹು ನಿರೀಕ್ಷಿತ ಸ್ಪೈ ಥ್ರಿಲ್ಲರ್ ಸಿನಿಮಾ ‘ಧುರಂಧರ್’ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದು, ಬಿಡುಗಡೆಯಾದ ಕೇವಲ 10 ದಿನಗಳಲ್ಲಿ ಭಾರತದಲ್ಲಿ 350 ಕೋಟಿ ರೂಪಾಯಿಗೂ ಅಧಿಕ ಹಾಗೂ ವಿಶ್ವದಾದ್ಯಂತ 500 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿ ಭರ್ಜರಿ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದೆ.
ರಣವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಆರ್. ಮಾಧವನ್, ಸಂಜಯ್ ದತ್ ಹಾಗೂ ಬಾಲನಟಿ ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ನಿರ್ದೇಶಕ ಆದಿತ್ಯ ಧಾರ್ ನಿರ್ದೇಶಿಸಿದ್ದು, ಕಥೆ, ದೃಶ್ಯ ವೈಭವ, ಪಾತ್ರಗಳ ನಿರೂಪಣೆ ಹಾಗೂ ತೀವ್ರತೆಯ ಸ್ಪೈ ಕಥಾನಕಕ್ಕಾಗಿ ಪ್ರೇಕ್ಷಕರಿಂದಲೂ ವಿಮರ್ಶಕರಿಂದಲೂ ಭಾರೀ ಮೆಚ್ಚುಗೆ ಪಡೆದಿದೆ.
ಇದನ್ನೂ ಓದಿ: ಮಾರ್ಕ್ ಚಿತ್ರದ ‘ಮಸ್ತ್ ಮಲೈಕಾ’ ಹಾಡು ರಿಲೀಸ್
ಆದರೆ ಚಿತ್ರ ಯಶಸ್ಸಿನ ನಡುವೆ ಒಂದು ಅಚ್ಚರಿಯ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚಿತ್ರದ ಆರಂಭಿಕ ಕ್ರೆಡಿಟ್‌ಗಳಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ‘ರಾಹುಲ್ ಗಾಂಧಿ’ ಎಂಬ ಹೆಸರು ಕಾಣಿಸಿಕೊಂಡಿರುವುದು ಪ್ರೇಕ್ಷಕರಲ್ಲಿ ಗೊಂದಲ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಈ ದೃಶ್ಯದ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೇ ಈ ಚಿತ್ರದ ನಿರ್ಮಾಪಕರೇ?’ ಎಂಬ ಪ್ರಶ್ನೆಗಳು ಎದ್ದಿವೆ.
ಕೆಲವು ನೆಟ್ಟಿಗರು ಹಾಸ್ಯಭರಿತವಾಗಿ, “ಚುನಾವಣೆಯಲ್ಲಿ ಸೋತ ನಂತರ ರಾಹುಲ್ ಗಾಂಧಿ ವೃತ್ತಿಜೀವನವೇ ಬದಲಾಯಿಸಿದ್ದಾರೆ”, “ಈಗ ಬಾಲಿವುಡ್ ನಿರ್ಮಾಪಕರಾಗಿದ್ದಾರಾ?” ಎಂದು ವ್ಯಂಗ್ಯವಾಡಿದ್ದಾರೆ. ಆದರೆ ಈ ಚರ್ಚೆಯ ಹಿಂದಿನ ಸತ್ಯವೇ ಬೇರೆ.
ಚಿತ್ರದ ಕ್ರೆಡಿಟ್‌ಗಳಲ್ಲಿ ಕಾಣಿಸಿಕೊಂಡಿರುವ ರಾಹುಲ್ ಗಾಂಧಿಗೆ ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ. ಅವರು ಬಾಲಿವುಡ್ ಹಾಗೂ ಡಿಜಿಟಲ್ ಎಂಟರ್‌ಟೈನ್‌ಮೆಂಟ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹಿರಿಯ ನಿರ್ಮಾಪಕ. ಹಲವು ವರ್ಷಗಳಿಂದ ಚಿತ್ರೋದ್ಯಮದಲ್ಲಿ ಸಕ್ರಿಯರಾಗಿರುವ ಅವರು, ಈ ಹಿಂದೆ ‘ರುಸ್ತುಂ’, ‘ಮುಂಬೈ ಡೈರೀಸ್’, ‘ರಾಕೆಟ್ ಬಾಯ್ಸ್’, ‘ಫರ್ಜೀ’, ‘ದಿ ಫ್ಯಾಮಿಲಿ ಮ್ಯಾನ್’, ‘ಲಕ್ಕಿ ಭಾಸ್ಕರ್’ ಸೇರಿದಂತೆ ಅನೇಕ ಹಿಟ್ ಸಿನಿಮಾಗಳು ಮತ್ತು ವೆಬ್ ಸರಣಿಗಳನ್ನು ನಿರ್ಮಿಸಿರುವ ಅನುಭವ ಹೊಂದಿದ್ದಾರೆ.
ಇದನ್ನೂ ಓದಿ: ʻ45′ ಸಿನಿಮಾ ಟ್ರೇಲರ್ ಬಿಡುಗಡೆಗೆ 7 ಕಡೆ ಸ್ಥಳ ನಿಗದಿ
‘ಧುರಂಧರ್’ ಚಿತ್ರವು ಬಹುತಾರಾಗಣ ಹೊಂದಿದ್ದರೂ, ಪ್ರತಿಯೊಂದು ಪಾತ್ರಕ್ಕೂ ಸಮಾನ ಮಹತ್ವ ನೀಡಿರುವುದು ಚಿತ್ರದ ಮತ್ತೊಂದು ಶಕ್ತಿಯಾಗಿದೆ. ರಣವೀರ್ ಸಿಂಗ್ ಅವರ ಶಕ್ತಿಶಾಲಿ ಅಭಿನಯದ ಜೊತೆಗೆ ಇತರ ಕಲಾವಿದರ ಪ್ರದರ್ಶನವೂ ಚಿತ್ರಕ್ಕೆ ಹೆಚ್ಚುವರಿ ಬಲ ನೀಡಿದೆ.
ಇದೀಗ ಚಿತ್ರದ ಯಶಸ್ಸಿನ ಹಾದಿ ಮುಂದುವರಿಯುತ್ತಿರುವಾಗಲೇ, ಅದರ ಎರಡನೇ ಭಾಗವಾದ ‘ಧುರಂಧರ್ 2: ದಿ ರಿವೆಂಜ್’ ಅನ್ನು ಮುಂದಿನ ವರ್ಷ ಈದ್ ಹಬ್ಬದ ಸಂದರ್ಭವಾದ ಮಾರ್ಚ್ 19ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಮೊದಲ ಭಾಗದ ಅಪಾರ ಯಶಸ್ಸಿನಿಂದಾಗಿ, ಎರಡನೇ ಭಾಗದ ಮೇಲೂ ಸಿನಿಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿದೆ.
ಒಟ್ಟಿನಲ್ಲಿ, ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ‘ಧುರಂಧರ್’ ಸಿನಿಮಾ, ಕ್ರೆಡಿಟ್‌ಗಳಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ ಹೆಸರಿನ ಮೂಲಕವೂ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿ ಸುದ್ದಿಯಲ್ಲಿದೆ.























