Home Advertisement
Home ಸಿನಿ ಮಿಲ್ಸ್ ತುಳುನಾಡಿನ ನೆಲೆಯ ‘ರಾಜ‌ನಿವಾಸ’: ಕಾಂತಾರ ಹೋಲಿಕೆಗೂ ನಿರ್ದೇಶಕರ ಉತ್ತರ

ತುಳುನಾಡಿನ ನೆಲೆಯ ‘ರಾಜ‌ನಿವಾಸ’: ಕಾಂತಾರ ಹೋಲಿಕೆಗೂ ನಿರ್ದೇಶಕರ ಉತ್ತರ

0
36

ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ: ಕುತೂಹಲ ಹೆಚ್ಚಿಸಿದ ‘ರಾಜ‌ನಿವಾಸ’

ಬೆಂಗಳೂರು: ‘ರಾಜ‌ನಿವಾಸ’ ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆಯೇ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಟ್ರೇಲರ್ ನೋಡಿದ ಕೆಲವರಿಗೆ ಕಾಂತಾರ ಚಿತ್ರದ ಝಲಕ್ ಕಂಡಂತೆ ಅನಿಸಬಹುದು. ಆದರೆ ನಿರ್ದೇಶಕ ಮಿಥುನ್ ಸುವರ್ಣ ಅವರ ಪ್ರಕಾರ, ಈ ಕಥಾವಸ್ತು ಕಾಂತಾರಕ್ಕಿಂತಲೂ ಮೊದಲು ರೂಪುಗೊಂಡದ್ದು.

“ಕಾಂತಾರ ಬಿಡುಗಡೆಯಾದ ಬಳಿಕ ಹೋಲಿಕೆಯ ಆರೋಪ ಎದುರಾಗಬಹುದು ಎಂಬ ಕಾರಣದಿಂದ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಆದರೆ ಇದು ತುಳುನಾಡು ಭಾಗದ ನೆಲೆಯ ಕಥೆಯಾಗಿರುವುದರಿಂದ ಸ್ವಾಭಾವಿಕವಾಗಿ ಕೆಲವು ಸಾಮ್ಯತೆಗಳು ಕಾಣಬಹುದು. ಆದರೂ ‘ರಾಜ‌ನಿವಾಸ’ ಸಂಪೂರ್ಣ ವಿಭಿನ್ನ ಕಥೆಯೊಂದಿಗೆ ಬರುತ್ತಿದೆ,” ಎಂದು ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ

ರಾಘವ್ ರಾಜನಂತೆ ಮೆರೆದಾಡಿದ ನಾಯಕ: ಚಿತ್ರದಲ್ಲಿ ನಾಯಕ ಪಾತ್ರವನ್ನು ರಾಘವ್ ನಿರ್ವಹಿಸಿದ್ದು, ಟ್ರೇಲರ್‌ನಲ್ಲಿ ಅವರ ಲುಕ್ ಮತ್ತು ಮಾಸ್ ಅಂಶಗಳು ಗಮನ ಸೆಳೆದಿವೆ. ಹಾಡು ಮತ್ತು ಹೊಡೆದಾಟದ ಗ್ಲಿಂಪ್ಸ್ ನೋಡಿದವರಿಗೆ ಇದು ಪಕ್ಕಾ ಮಾಸ್ ಎಂಟರ್ಟೈನರ್ ಆಗಲಿದೆ ಎನ್ನುವ ಭರವಸೆ ಮೂಡಿಸಿದೆ.

ನಾಯಕಿಯಾಗಿ ಕೃತ್ತಿಕಾ ಅಭಿನಯಿಸಿದ್ದು, ತಮ್ಮ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಗಮನ ಸೆಳೆದಿದ್ದಾರೆ. ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು ಚಿತ್ರಕ್ಕೆ ಮತ್ತಷ್ಟು ತೂಕ ನೀಡಿದೆ.

ಇದನ್ನೂ ಓದಿ: ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿಗೆ ಕಲ್ಲುತೂರಾಟ

ನಾಲ್ಕು ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆ: ‘ರಾಜ‌ನಿವಾಸ’ ಚಿತ್ರದ ಟ್ರೇಲರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಬಿಡುಗಡೆಗೊಂಡ ಮೂರು ಹಾಡುಗಳು ಸಿನಿ ಪ್ರಿಯರ ಮನ ಗೆದ್ದಿವೆ. ಸಿನಿಮಾರಂಗದ ಅನೇಕರು ‘ರಾಜ‌ನಿವಾಸ’ ಈ ವರ್ಷದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರಕ್ಕೆ ಇದೇ ತಿಂಗಳ ಅಂತ್ಯದಲ್ಲಿ ಬಿಡುಗಡೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.

ದೊಡ್ಡ ವಿತರಕರ ಕಣ್ಣು ‘ರಾಜ‌ನಿವಾಸ’ದ ಮೇಲೆ: ಕನ್ನಡದ ಪ್ರಮುಖ ವಿತರಕ ಸಂಸ್ಥೆಗಳು ಚಿತ್ರದ ಬಿಡುಗಡೆ ಹಕ್ಕುಗಳಿಗಾಗಿ ಮುಂದೆ ಬಂದಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಜೊತೆಗೆ ತಮಿಳು ಹಾಗೂ ತೆಲುಗು ಭಾಷೆಗಳಲ್ಲೂ ಚಿತ್ರದ ಬೇಡಿಕೆ ಹೆಚ್ಚುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ಶಿವಾಜಿ ಮೆರವಣಿಗೆ ವೇಳೆ ಕಲ್ಲುತೂರಾಟ – 8 ಮಂದಿ ಬಂಧನ

ನಿರ್ಮಾಣ ತಂಡ: ‘ರಾಜ‌ನಿವಾಸ’ ಚಿತ್ರವನ್ನು ಡಿಎಎಂ36 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ನಿರ್ಮಾಪಕರಾಗಿ ದಾ. ಪಿ. ಆಂಜನಪ್ಪ ಹಾಗೂ ಸಹ ನಿರ್ಮಾಪಕರಾಗಿ ಲೋಕೇಶ್ ಗೌಡ ಕಾರ್ಯನಿರ್ವಹಿಸಿದ್ದಾರೆ. ಚಿತ್ರದಲ್ಲಿ ಬಲ ರಾಜ್ವಾಡಿ, ಯಮುನಾ ಶ್ರೀನಿಧಿ, ನೀನಾಸಂ ಅಶ್ವಥ್, ಸಹನ, ಪ್ರಶಾಂತ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶನವನ್ನು ವಿಜಯ್ ಯಾರ್ಡ್ಲಿ ವಹಿಸಿಕೊಂಡಿದ್ದು, ಛಾಯಾಗ್ರಹಣವನ್ನು ರಮೇಶ್ ರಾಜ್ ನಿರ್ವಹಿಸಿದ್ದಾರೆ.

Previous article“ಯಾರು ಆ ‘ಡ್ಯಾಡಿ’..? ‘ಟಾಕ್ಸಿಕ್’ ಟೀಸರ್‌ನಲ್ಲಿ ಅಡಗಿರುವ ಟಾಪ್ ಸೀಕ್ರೆಟ್‌ಗಳು ಇಲ್ಲಿವೆ ನೋಡಿ!”
Next articleಪೆಟ್ರೋಲ್ ಪಂಪ್‌ನಲ್ಲಿ ಸ್ಮೋಕ್ ಮಾಡ್ಬೇಡ ಎಂದಿದ್ದಕ್ಕೆ ಸ್ನೇಹಿತನ ಬೈಕಿಗೆ ಬೆಂಕಿ ಇಟ್ಟ