Home Advertisement
Home ಸಿನಿ ಮಿಲ್ಸ್ ಬಾಲಕನ ನೃತ್ಯಕ್ಕೆ ‘ಮೋನಿಕಾ’ ಫಿದಾ: ವಿಡಿಯೋ ವೈರಲ್

ಬಾಲಕನ ನೃತ್ಯಕ್ಕೆ ‘ಮೋನಿಕಾ’ ಫಿದಾ: ವಿಡಿಯೋ ವೈರಲ್

0
95

ಪುಟ್ಟ ಸ್ಟಾರ್ ಮುಂದೆ ಸುಸ್ತಾದ ಪೂಜಾ ಹೆಗ್ಡೆ: ಬಾಲಕನ ಡ್ಯಾನ್ಸ್ ಕೂಡ ಈಗ ಟ್ರೆಂಡ್‌

ಬೆಂಗಳೂರು: ಮಲಯಾಳಂ ನಟ ಸೌಬಿನ್ ಶಾಹಿರ್ ಮತ್ತು ನಟಿ ಪೂಜಾ ಹೆಗ್ಡೆ ಅಭಿನಯದ ‘ಮೋನಿಕಾ’ ಹಾಡು ಬಿಡುಗಡೆಯಾದಾಗಿನಿಂದಲೇ ಭಾರೀ ಜನಪ್ರಿಯತೆ ಗಳಿಸಿತ್ತು. ನೂರಾರು ಡ್ಯಾನ್ಸರ್ಸ್ ಜೊತೆ ಈ ಹಾಡಿಗೆ ಪೂಜಾ ಹೆಗ್ಡೆ ಮತ್ತು ಸೌಬಿನ್ ಶಾಹಿರ್ ಕುಣಿದು ರಂಗೇರಿಸಿದ್ದ ದೃಶ್ಯಗಳು ಸಿನಿರಸಿಕರನ್ನು ಮೋಡಿ ಮಾಡಿದ್ದವು.

ಎಲ್ಲರೂ ಈ ಹಾಡಿಗೆ ಹೆಜ್ಜೆ ಹಾಕಿದ್ದರೆ, ಇದೀಗ ಕೇವಲ 5 ವರ್ಷದ ಪುಟ್ಟ ಬಾಲಕನೊಬ್ಬ ‘ಮೋನಿಕಾ’ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ʼರಕ್ಕಸಪುರದೋಳ್ʼ: ರಕ್ಕಸನ ಜಾಡು ಹಿಡಿದು…

ಪುಟ್ಟ ಸ್ಟಾರ್ ಮುಂದೆ ಸುಸ್ತಾದ ಪೂಜಾ ಹೆಗ್ಡೆ: ಕಾರ್ಯಕ್ರಮವೊಂದರಲ್ಲಿ ಪೂಜಾ ಹೆಗ್ಡೆ ಜೊತೆ ಈ ಪುಟ್ಟ ಬಾಲಕ ವೇದಿಕೆ ಏರಿ ಡ್ಯಾನ್ಸ್ ಮಾಡಲು ಮುಂದಾಗಿದ್ದಾನೆ. ಆದರೆ ಬಾಲಕನ ಎನರ್ಜಿ, ಗ್ರೇಸ್ ಮತ್ತು ವೇಗದ ಮೂವ್ಸ್ ನೋಡಿ ಸ್ವತಃ ಪೂಜಾ ಹೆಗ್ಡೆ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆತನ ಸರಿಸಮಕ್ಕೆ ಹೆಜ್ಜೆ ಹಾಕಲು ಸಾಧ್ಯವಾಗದೇ, ಕೆಲ ಕ್ಷಣಗಳ ಕಾಲ ಆಕೆ ಸೈಲೆಂಟ್ ಆಗಿರುವ ದೃಶ್ಯಗಳು ಅಭಿಮಾನಿಗಳ ಮನಸೆಳೆದಿವೆ. ಈ ಕ್ಷಣದ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಹಲ್‌ಚಲ್ ಎಬ್ಬಿಸಿದೆ.

ಯೂಟ್ಯೂಬ್‌ನಲ್ಲೂ ಕೋಟಿ ವೀಕ್ಷಣೆ: ‘ಮೋನಿಕಾ’ ಹಾಡು ಯೂಟ್ಯೂಬ್‌ನಲ್ಲಿ ಈಗಾಗಲೇ ಕೋಟಿ ಕೋಟಿ ವೀಕ್ಷಣೆ ಮತ್ತು ಲೈಕ್ಸ್ ಗಳಿಸಿದ್ದು, ರೀಲ್ಸ್ ರೂಪದಲ್ಲೂ ಭಾರೀ ಸದ್ದು ಮಾಡಿದೆ. ಯುವಜನತೆಯಿಂದ ಹಿಡಿದು ಹಿರಿಯರವರೆಗೂ ಈ ಹಾಡಿಗೆ ಹೆಜ್ಜೆ ಹಾಕುತ್ತಿರುವ ವೀಡಿಯೋಗಳು ಹರಿದಾಡುತ್ತಿವೆ.

ಇದನ್ನೂ ಓದಿ: ಉತ್ತರಕರ್ನಾಟಕದ ಮೊದಲ WebSeries – OTTಯಲ್ಲಿ ಹೊಸ ಮಿಂಚು

ಪುಟ್ಟ ಬಾಲಕನ ಡ್ಯಾನ್ಸ್ ಕೂಡ ಈಗ ಟ್ರೆಂಡ್‌ಗೆ: ಪುಟ್ಟ ಬಾಲಕನ ಡ್ಯಾನ್ಸ್ ‘ಮೋನಿಕಾ’ ಹಾಡಿಗೆ ಹೊಸ ಆಯಾಮ ನೀಡಿದೆ. ಸ್ಯಾಂಡಿ ಮಾಸ್ಟರ್ ಕೊರಿಯೋಗ್ರಫಿಯ ಮೆರುಗು ಪ್ರಖ್ಯಾತ ಕೊರಿಯೋಗ್ರಾಫರ್ ಸ್ಯಾಂಡಿ ಮಾಸ್ಟರ್ ಅವರ ಮಾರ್ಗದರ್ಶನದಲ್ಲಿ ‘ಮೋನಿಕಾ’ ಹಾಡಿನ ಸ್ಟೆಪ್ಸ್ ರೂಪುಗೊಂಡಿದ್ದು, ಅದಕ್ಕೆ ಸಿನಿರಸಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಾಡಿನಲ್ಲಿ ಪೂಜಾಗಿಂತಲೂ ಮಲಯಾಳಂ ನಟ ಸೌಬಿನ್ ಶಾಹಿರ್ ಅವರ ಸ್ಟೆಪ್ಸ್ ಹೆಚ್ಚು ಗಮನ ಸೆಳೆದಿದ್ದವು. ಇದೀಗ ಅದೇ ಹಾಡಿಗೆ ಪುಟ್ಟ ಬಾಲಕ ತೋರಿದ ಪ್ರತಿಭೆ ಎಲ್ಲರ ಮನ ಗೆದ್ದಿದೆ.

ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರ: ಪುಟ್ಟ ಬಾಲಕನ ಡ್ಯಾನ್ಸ್, ಆತ್ಮವಿಶ್ವಾಸ ಮತ್ತು ಎನರ್ಜಿ ನೋಡಿ ಸಿನಿಪ್ರೇಮಿಗಳು ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪೂಜಾ ಹೆಗ್ಡೆ ಅಭಿಮಾನಿಗಳು ಈ ವೀಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದು, “ಪುಟ್ಟ ಸ್ಟಾರ್ ಭವಿಷ್ಯದ ದೊಡ್ಡ ಡ್ಯಾನ್ಸರ್” ಎಂದು ಕೊಂಡಾಡುತ್ತಿದ್ದಾರೆ.

ಈ ವೀಡಿಯೋ ಇದೀಗ ಮನರಂಜನೆಯ ಜೊತೆಗೆ ಪ್ರೇರಣೆಯಾಗಿ ಪರಿಣಮಿಸಿದ್ದು, ಬಾಲಕನ ಪ್ರತಿಭೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Previous article‘ATM ಸರ್ಕಾರ’ದ ಭ್ರಷ್ಟರಿಗೆ ಕಾಂಗ್ರೆಸ್ ಹೈಕಮಾಂಡ್ ರಕ್ಷಣೆ: R ಅಶೋಕ್
Next articleಮೀಟರ್ ಹೆಚ್ಚಾದರೆ ಮೋದಿ – ದರ ಹೆಚ್ಚಾದರೆ ರಾಜ್ಯ ಕಾರಣ: ಇದು ಬಿಜೆಪಿ ಲಾಜಿಕ್