ಚಿತ್ರದುರ್ಗ: ‘ಕಲ್ಟ್’ ಚಿತ್ರ ಬಿಡುಗಡೆಗೂ ಮುನ್ನ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಚಿತ್ರತಂಡ ಕೋಟೆನಾಡು ಚಿತ್ರದುರ್ಗಕ್ಕೆ ಮಂಗಳವಾರ ಭೇಟಿ ನೀಡಿತ್ತು. ಸಹಸ್ರಾರು ಅಭಿಮಾನಿಗಳು ಬೈಕ್ ರ‍್ಯಾಲಿ ಮೂಲಕ ಸ್ವಾಗತಿಸಿ, ಅಂಬೇಡ್ಕರ್, ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಪುತ್ರ, ಚಿತ್ರದ ನಾಯಕ ಜೈದ್‌ಖಾನ್ ಮಾತನಾಡಿ, ಚಿತ್ರ ಕುಟುಂಬ ಸದಸ್ಯರೆಲ್ಲರೂ ಕುಳಿತು ಮುಜುಗರವಿಲ್ಲದೆ ನೋಡಬಹುದಾಗಿದೆ ಎಂದರು.
ಪ್ರೀತಿ-ಪ್ರೇಮ ಎಂಬು ಹುಚ್ಚು ಹಚ್ಚಿಕೊಂಡು ಯುವಕ-ಯುವತಿಯರು ಸಾಗುತ್ತಾರೆ. ಇದರಲ್ಲಿ ಯಾವ ರೀತಿ ಮೋಸ ಆಗುತ್ತದೆ ಎಂಬ ಎಚ್ಚರಿಕೆ ಸಂದೇಶ ನೀಡಲಾಗಿದೆ. ರಚಿತಾ ರಾಮ್, ಮಲೈಕಾ ಇಬ್ಬರು ನಾಯಕಿಯರಲ್ಲಿ ಯಾರೂ ವಂಚನೆಗೆ ಒಳಗಾಗುತ್ತಾರೆಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಿ. ರೋಮ್ಯಾಂಟಿಕ್ ಥ್ರಿಲ್ ಜೊತೆಗೆ ಉತ್ತಮ ಕತೆ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: ಹೊಸ ವರ್ಷಾಚರಣೆಗೆ ರಾಜ್ಯದ ರೆಸಾರ್ಟ್‌ಗಳು ಬಹುತೇಕ ಭರ್ತಿ!
ನನಗೆ ರಾಜಕಾರಣದಲ್ಲಿ ಎಳ್ಳಷ್ಟು ಆಸಕ್ತಿ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಸಿದ್ದರಾಮಯ್ಯ ಸಾಹೇಬ್ರು ಟಿಕೆಟ್ ಕೊಡ್ತಿವಿ ಸ್ಪರ್ಧೆ ಮಾಡು ಅಂತ ಹೇಳಿದ್ರು. ಆದರೆ, ನನಗೆ ರಾಜಕೀಯ ಜ್ಞಾನದ ಜೊತೆಗೆ ಆಸೆಯೂ ಇಲ್ಲ. ಆದ್ದರಿಂದ ಬೇಡ ಎಂದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ನಮ್ಮ ಕುಟುಂಬದಲ್ಲಿ ಅಪ್ಪಾಜಿ ಅವರಿಗಷ್ಟೇ ರಾಜಕಾರಣ ಸೀಮಿತ. ನಮಗೆ ಇಷ್ಟ ಇಲ್ಲ. ರಾಜಕೀಯ ಪ್ರವೇಶ ಮಾಡಲು ಚಿತ್ರರಂಗದ ಮೂಲಕವೇ ಬರಬೇಕೆಂಬುದು ಇಲ್ಲ. ನೇರವಾಗಿಯೇ ಬರುತ್ತಿದ್ದೇ ಎಂದರು.
ರಾಜ್ಯದ ಅರ್ಧಭಾಗ ಚಿತ್ರತಂಡ ಪ್ರವಾಸ ಮಾಡಿದೆ. ಜ. 23ಕ್ಕೆ ಚಿತ್ರ ಬಿಡುಗಡೆಗೊಳ್ಳಲಿದೆ. ಎಲ್ಲೆಡೆಯೂ ನಿರೀಕ್ಷೆಗೂ ಮೀರಿ ಚಿತ್ರ ರಸಿಕರ ಬೆಂಬಲ ದೊರೆಯುತ್ತಿದೆ. ಚಿತ್ರದುರ್ಗದಲ್ಲೂ ಅಭಿಮಾನಿಗಳು ಹೆಚ್ಚು ಸ್ಪಂದಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ನಾಯಕಿ ಮಲೈಕಾ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ಜೈದ್‌ಖಾನ್ ಉತ್ತಮ ಕೊಡುಗೆ ಆಗಲಿದ್ದಾರೆ. ಅವರೊಂದಿಗೆ ಕೆಲಸ ಮಾಡುವ ವೇಳೆ ಅವರಲ್ಲಿನ ಬದ್ಧತೆ ನನ್ನಲ್ಲಿ ಖುಷಿ ತರಿಸಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಅವರು ಕನ್ನಡವನ್ನು ಬಹಳ ಸ್ಪಷ್ಟವಾಗಿ ಮಾತನಾಡುವುದು ನನಗೆ ಬಹಳ ಇಷ್ಟವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.























