Home Advertisement
Home ವೈರಲ್ ಪ್ರಕೃತಿಯ ಮಡಿಲಲ್ಲಿ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಅರಮನೆ: ಕೊಡಗಿನ ಐಷಾರಾಮಿ ಬಂಗಲೆ ಇಲ್ಲಿದೆ ಡಿಟೇಲ್ಸ್..!‌

ಪ್ರಕೃತಿಯ ಮಡಿಲಲ್ಲಿ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಅರಮನೆ: ಕೊಡಗಿನ ಐಷಾರಾಮಿ ಬಂಗಲೆ ಇಲ್ಲಿದೆ ಡಿಟೇಲ್ಸ್..!‌

0
25

ಮಡಿಕೇರಿ: ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ಸಂಚಲನ ಮೂಡಿಸಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ, ತಮ್ಮ ನಟನೆಯ ಜೊತೆಗೆ ಜೀವನಶೈಲಿಯಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ರಶ್ಮಿಕಾ ಮದುವೆ ನಂತರ ಪತಿಯ ಜೊತೆ ಮೊದಲ ಬಾರಿಗೆ ತನ್ನ ಹುಟ್ಟುರಿನಲ್ಲಿ ಅದ್ದೂರಿ ಆರಕ್ಷತೆಯ ಜೊತೆಗೆ, ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಕೊಂಡರು. ಹಾಗೇ ವಿವಾಹವಾಗಿ ವಿಜಯ್‌ ಜೊತೆಗೆ ರಶ್ಮಿಕಾ ತನ್ನ ಸ್ವಂತ ಮನೆಗೆ ಕಾಲಿಟಿದ್ದರು.

ನಟಿ ರಶ್ಮಿಕಾ ಮಂದಣ್ಣ ಮದುವೆಯಾಗಿ ತವರು ಮನೆಗೆ ಕಾಲಿಟ್ಟಾಗಿನಿಂದ, ಆ ಬಂಗಲೆಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೊಡಗಿನ ವಿರಾಜಪೇಟೆ ಸಮೀಪದ ಕದನೂರು ಗ್ರಾಮದಲ್ಲಿರುವ ಐಷಾರಾಮಿ ಬಂಗಲೆ ಎಲ್ಲರ ಗಮನ ಸೆಳೆಯುತ್ತಿದೆ. ಇದು ಕುದ್ದ್‌ ಅರಮನೆಯಂತೆ ಜನರಿಗೆ ಕಂಗೂಳಿಸುತ್ತಿದೆ. ಈ ಕುರಿತು ತಿಳಿಯಲು ಇಲ್ಲಿದೆ ಡಿಟೇಲ್ಸ್.

ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಲನ: ಮಡಿಕೇರಿಯ ಹಸಿರು ಪರಿಸರದ ನಡುವೆ ಇರುವ ನಟಿಯ ಈ ಏಕ ಅಂತಸ್ತಿನ ಬಂಗಲೆಯು ಅತ್ಯಂತ ಶ್ರೀಮಂತ ಹಾಗೂ ರಾಯಲ್ ಲುಕ್ ಹೊಂದಿದೆ. ಮನೆಯ ಒಳಾಂಗಣಕ್ಕೆ ಸಾಂಪ್ರದಾಯಿಕ ಸ್ಪರ್ಶ ನೀಡಲು ಮರದ ಕೆತ್ತನೆಯ ಕೆಲಸಗಳನ್ನು ಮಾಡಿಸಲಾಗಿದೆ. ಹಳೆಯ ಕಾಲದ ಶೈಲಿ ಮತ್ತು ಇಂದಿನ ಆಧುನಿಕ ಜೀವನಶೈಲಿಯ ಸಂಯೋಜನೆಯಂತೆ ಕಾಣುವ ಈ ಮನೆಯಲ್ಲಿ ಆಧುನಿಕ ಎಸಿ ಮತ್ತು ಸ್ಮಾರ್ಟ್ ಲೈಟಿಂಗ್ ವ್ಯವಸ್ಥೆಗಳೂ ಮಾಡಿಸಲಾದೆ.

ಪ್ರಕೃತಿಯ ನಡುವೆ ಪ್ರಶಾಂತ ತಾಣ: ಮನೆಯ ಸುತ್ತಮುತ್ತ ದಟ್ಟವಾದ ಸಸ್ಯವರ್ಗ ಮತ್ತು ಎತ್ತರದ ಮರಗಳಿದ್ದು, ಇದು ಮನೆಯ ಅಂದವನ್ನು ಹೆಚ್ಚಿಸುವುದಲ್ಲದೆ ಬೇಸಿಗೆಯಲ್ಲಿ ತಂಪಾದ ವಾತಾವರಣ ನೀಡುತ್ತದೆ. ಫ್ರೆಂಚ್ ಶೈಲಿಯ ಬಾಗಿಲುಗಳು ಮನೆಯೊಳಗೆ ನೈಸರ್ಗಿಕ ಬೆಳಕು ಹರಿಯುವಂತೆ ಮಾಡುತ್ತವೆ. ಇಲ್ಲಿನ ಲಿವಿಂಗ್ ರೂಮ್ ಬೀಜ್ ಸ್ಯೂಡ್ ಸೋಫಾಗಳು, ಕ್ರಿಸ್ಟಲ್ ಚ್ಯಾಂಡಲಿಯರ್ ಲೈಟ್‌ಗಳು ಮತ್ತು ಅದ್ಭುತ ಕಲಾಕೃತಿಗಳಿಂದ ಅಲಂಕೃತಗೊಂಡಿದ್ದು, ಬರುವ ಅತಿಥಿಗಳಿಗೆ ರಾಜಾತಿಥ್ಯದ ಅನುಭವ ನೀಡುತ್ತವೆ.

ಮನಮೋಹಕ ಬಾಲ್ಕನಿ: ಈ ಬಂಗಲೆಯ ಪ್ರಮುಖ ಆಕರ್ಷಣೆ ಎಂದರೆ ಅಲ್ಲಿನ ಬಾಲ್ಕನಿ. ಇಲ್ಲಿಂದ ಕೊಡಗಿನ ಸುಂದರ ಗುಡ್ಡಗಾಡುಗಳ ವಿಹಂಗಮ ನೋಟ ಕಾಣಸಿಗುತ್ತದೆ. ಪುಟ್ಟ ಉದ್ಯಾನದಂತೆ ಕಂಗೊಳಿಸುವ ಈ ಬಾಲ್ಕನಿಯು ರಶ್ಮಿಕಾಳ ನೆಚ್ಚಿನ ತಾಣವಾಗಿದ್ದು, ಪ್ರಕೃತಿಯ ನಾದವನ್ನು ಆಸ್ವಾದಿಸಲು ಇದು ಹೇಳಿಮಾಡಿಸಿದಂತಿದೆ. ಒಟ್ಟಾರೆಯಾಗಿ, ಸಾಮಾನ್ಯ ಹಿನ್ನೆಲೆಯಿಂದ ಬಂದು ಇಂದು ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ರಶ್ಮಿಕಾ ಯಶಸ್ಸಿಗೆ ಈ ಸುಂದರ ಬಂಗಲೆಯು ಸಾಕ್ಷಿಯಂತಿದೆ.