ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸೇರಿದಂತೆ ನಟ ದರ್ಶನ್ ಮತ್ತು ಧ್ರುವ ಸರ್ಜಾ ಅವರುಗಳ ಬಗ್ಗೆ ಕಿರುತೆರೆ ರಿಯಾಲಿಟಿ ಶೋ ಖ್ಯಾತಿಯ ಮಡೆನೂರು ಮನು ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ಇದರಿಂದಾಗಿ ಸಾಕಷ್ಟು ಟೀಕೆ, ಆಕ್ರೋಶ ಎದುರಿಸಿದ್ದ ನಟ ಮಡೆನೂರು ಮನು ಇಂದು ಶಿವಣ್ಣನ ಕಾಲಿಗೆ ಬಿದ್ದು ಕ್ಷಮೆ ಕೋರಿ ತಾವು ನಟಿಸಿದ ಚಿತ್ರ ʻಕುಲದಲ್ಲಿ ಕೀಳ್ಯಾವುದೋʼ ಸಿನಿಮಾವನ್ನ ಮತ್ತೆ ಬಿಡುಗಡೆ ಮಾಡುವುದಕ್ಕೆ ಕೇಳಿಕೊಂಡಿದ್ದಾರೆ.
ಸಹ ನಟಿಯ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಡೆನೂರು ಮನು ಜೈಲಿನಿಂದ ಆಚೆ ಬಂದ ಬಳಿಕ ನಟ ಶಿವರಾಜ್‌ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಅವರನ್ನ ನೇರವಾಗಿ ಭೇಟಿ ಮಾಡಿ ಕ್ಷಮೆ ಕೇಳಲು ಪ್ರಯತ್ನ ಪಟ್ಟಿದ್ದರು. ಅದು ಸಾಧ್ಯವಾಗಿರಲಿಲ್ಲ. ಮೈಸೂರಿನಲ್ಲಿ ಡ್ಯಾಡಿ ಸಿನಿಮಾ ಶೂಟಿಂಗ್ ಸ್ಥಳಕ್ಕೆ ಆಗಮನಿಸಿದ ನಟ ಶಿವರಾಜಕುಮಾರ್ ಕಾರಿನಿಂದ ಇಳಿಯುತ್ತಿದ್ದಂತೆ, ಮನು ಶಿವಣ್ಣ ಕಾಲಿಗೆ ಬಿದ್ದು ಮಡೆನೂರು ಮನು ನಾನು ಆಡಿದ ಮಾತು ತಪ್ಪು ಎಂದು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.
ಈ ಸಂಧರ್ಭದಲ್ಲಿ ಹೃದಯ ವೈಶಾಲ್ಯ ಮೆರೆದ ನಟ ಶಿವಣ್ಣ, ‘ನನ್ನ ಬಗ್ಗೆ ಯಾರು ಬೈದ್ರು ನಾನು ತಲೆಕೆಡಿಸಿ ಕೊಳ್ಳಲ್ಲ ಎಂದು ನಗುತ್ತಲ್ಲೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಡೆನೂರು ಮನು, ‘ನನ್ನ ಕ್ಷಮಿಸಿ, ಮತ್ತೆ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ರೀ ರಿಲೀಸ್ ಮಾಡ್ತಿವಿ, ನೀವು ನಮ್ಮ ಸಿನಿಮಾಗೆ ಸಪೋರ್ಟ್ ಮಾಡಿ ಎಂದು ಹೇಳಿದ್ದಾರೆ. ಒಳ್ಳೆ ಟೈಟಲ್ ಸಿನಿಮಾ ಮತ್ತೆ ರೀ ರಿಲೀಸ್ ಮಾಡಿ ಒಳ್ಳೆದಾಗಲಿ ಎಂದು ಶಿವಣ್ಣ ಶುಭ ಹಾರೈಸಿದ್ದಾರೆ.