ಬೆಂಗಳೂರು: ಕಲ್ಯಾಣಿ ಪ್ರಿಯದರ್ಶನ್ ನಟನೆಯ ಮಲಯಾಳಂ ಸಿನಿಮಾ ‘ಲೋಕಾ ಚಾಪ್ಟರ್-1 ಸಿನಿಮಾದಲ್ಲಿ ಬಳಕೆಯಾದ ಸಂಭಾಷಣೆ ಕನ್ನಡಿಗರನ್ನು, ಕರ್ನಾಟಕವನ್ನು ಅವಮಾನಿಸುತ್ತಿದೆ ಎಂಬ ಅಂಶ ವಿವಾದಕ್ಕೆ ಕಾರಣವಾಗಿದೆ. ವಿವಾದ ಸೃಷ್ಟಿಯಾಗುತ್ತಿದ್ದಂತೆ ಕನ್ನಡಿಗರನ್ನು ಈ ಕುರಿತು ಚಿತ್ರತಂಡವು ಕ್ಷಮೆಯಾಚನೆ ಸಲ್ಲಿಸಿದೆ.
ವಿವಾದದ ಹಿನ್ನೆಲೆ: ಸ್ಟಾರ್ ನಟ ದುಲ್ಕರ್ ಸಲ್ಮಾನ್ ನಿರ್ಮಾಣ ಮಾಡಿರುವ ‘ಲೋಕಾ ಚಾಪ್ಟರ್-1’ ಹೆಸರಿನ ಸಿನಿಮಾನಲ್ಲಿ ಬೆಂಗಳೂರಿನ ಜನರ ಬಗ್ಗೆ ಅವಾಚ್ಯವಾಗಿ ನಿಂದಿಸಲಾಗಿದೆ. ಅದರಲ್ಲೂ ಬೆಂಗಳೂರಿನ ಮಹಿಳೆಯರ ಬಗ್ಗೆ ಅವಾಚ್ಯ ಪದ ಬಳಕೆ ಆಗಿತ್ತು. ಕನ್ನಡಿಗರನ್ನು ಮತ್ತು ಕರ್ನಾಟಕವನ್ನು ಅವಮಾನಿಸುವ ರೀತಿಯಲ್ಲಿ ಬಳಕೆಯಾದವು. ಈ ವಿಚಾರವು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಯಿತು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದಲ್ಲಿನ ಸಂಭಾಷಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೆ ಇದೀಗ ನಟ, ನಿರ್ಮಾಪಕ ದುಲ್ಕರ್ ಸಲ್ಮಾನ್ ಕ್ಷಮೆ ಕೇಳಿದ್ದಾರೆ.
ಚಿತ್ರತಂಡದ ಪ್ರತಿಕ್ರಿಯೆ: ವಿವಾದವು ಹೆಚ್ಚಾಗುತ್ತಿದ್ದಂತೆ, ಚಿತ್ರತಂಡವು ಸಾರ್ವಜನಿಕವಾಗಿ ಕ್ಷಮೆಯಾಚನೆ ಸಲ್ಲಿಸಿತು. ಚಿತ್ರದಲ್ಲಿ ವಿವಾದಕ್ಕೆ ಕಾರಣವಾದ ಡೈಲಾಗ್‌ನ್ನು ತೆಗೆದುಹಾಕುವುದಾಗಿ ತಂಡ ತಿಳಿಸಿದೆ. “ನಾವು ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಹೊಂದಿರಲಿಲ್ಲ. ಕನ್ನಡಿಗರ ಆಕ್ಷೇಪವನ್ನು ಗಂಭೀರವಾಗಿ ಪರಿಗಣಿಸಿ, ಆ ಡೈಲಾಗ್‌ನ್ನು ಚಿತ್ರದಿಂದ ತೆಗೆದುಹಾಕುತ್ತಿದ್ದೇವೆ. ತಪ್ಪನ್ನು ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.
ದುಲ್ಕರ್ ಸಲ್ಮಾನ್ ನಿರ್ಮಾಣದ ಲೋಕ ಚಾಪ್ಟರ್ 1 ಕಲ್ಯಾಣಿ ಪ್ರಿಯದರ್ಶನ್ ಅವರು ನಟಿಸಿರುವ ಮೂವಿ. ಕರ್ನಾಟಕದಲ್ಲಿ ರಾಜ್ ಬಿ ಶೆಟ್ಟಿ ಈ ಸಿನಿಮಾವನ್ನು ವಿತರಣೆ ಮಾಡಿದ್ದಾರೆ.