ಕ್ರಿಸ್ಮಸ್ ರೇಸ್‌ನಲ್ಲಿ ಹೆಚ್ಚು ‘ಮಾರ್ಕ್’

0
4

ಬೆಂಗಳೂರು: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಮಾರ್ಕ್’ ಕ್ರಿಸ್‌ಮಸ್ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ರಂಗು ತುಂಬಿದೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಈ ಸಿನಿಮಾ ಪ್ರೇಕ್ಷಕರ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡು, ಕ್ರಿಸ್‌ಮಸ್ ಬ್ಲಾಕ್‌ಬಸ್ಟರ್‌ಗಳ ಪಟ್ಟಿಗೆ ಸೇರಿಕೊಂಡಿದೆ.

ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿಯೇ ಸುಮಾರು ₹25 ಕೋಟಿ ಬಾಕ್ಸ್‌ಆಫೀಸ್ ಸಂಗ್ರಹ ಮಾಡುವ ಮೂಲಕ ‘ಮಾರ್ಕ್’ ಸಿನಿಮಾ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ವೀಕೆಂಡ್ ದಿನಗಳಲ್ಲಷ್ಟೇ ಅಲ್ಲದೆ, ಸೋಮವಾರವೂ ಅನೇಕ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನಗಳು ನಡೆದಿರುವುದು ಚಿತ್ರದ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ರಾಜಕಾರಣ ಅಪ್ಪನಿಗಷ್ಟೇ ಸೀಮಿತ, ನನಗಿಲ್ಲ ಆಸಕ್ತಿ

ರಾಜ್ಯದಾದ್ಯಂತ ಹೌಸ್‌ಫುಲ್ ಪ್ರದರ್ಶನ: ಮೈಸೂರು, ಶಿವಮೊಗ್ಗ, ತುಮಕೂರು, ಬೆಂಗಳೂರು, ದಾವಣಗೆರೆ ಹಾಗೂ ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಲವಾರು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ನಾಲ್ಕನೇ ದಿನವೂ ಹೌಸ್‌ಫುಲ್ ಪ್ರದರ್ಶನಗಳು ಕಂಡುಬಂದಿವೆ. ಇದು ಸುದೀಪ್ ಅವರ ಫ್ಯಾನ್‌ಫಾಲೋಯಿಂಗ್‌ ಮತ್ತು ಚಿತ್ರದ ಕಂಟೆಂಟ್‌ಗೆ ಸಿಕ್ಕಿರುವ ಬೆಂಬಲವನ್ನು ಸ್ಪಷ್ಟಪಡಿಸುತ್ತದೆ.

ಕಿಚ್ಚನ ಸ್ವಾಗ್‌ಗೆ ಫಿದಾ ಆದ ಸಿನಿರಸಿಕರು: ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಸ್ವಾಗ್, ಸ್ಟೈಲ್ ಹಾಗೂ ಆಟಿಟ್ಯೂಡ್ ಸಿನಿರಸಿಕರನ್ನು ಮನಮಾಡಿದೆ. ‘ಮ್ಯಾಕ್ಸ್’ ಚಿತ್ರದ ಬಳಿಕ ಮತ್ತೊಮ್ಮೆ ಸುದೀಪ್ – ವಿಜಯ್ ಕಾರ್ತಿಕೇಯ ಜೋಡಿ ಬೆಳ್ಳಿತೆರೆಯಲ್ಲಿ ಮಿಂಚಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಕಾಂಬಿನೇಷನ್, ಆಕ್ಷನ್ ದೃಶ್ಯಗಳು ಹಾಗೂ ನಿರೂಪಣಾ ಶೈಲಿ ಚಿತ್ರದ ಪ್ರಮುಖ ಹೈಲೈಟ್‌ಗಳಾಗಿವೆ.

ಇದನ್ನೂ ಓದಿ: ಸೀಟ್ ಎಡ್ಜ್ ಹಾಡಿಗೆ ಹೆಜ್ಜೆ ಹಾಕಿದ ಸಿದ್ದು ಮೂಲಿಮನಿ

ಮುಂದಿನ ದಿನಗಳಿಗೂ ಬಲವಾದ ನಿರೀಕ್ಷೆ: ಪ್ರಸ್ತುತ ಟ್ರೆಂಡ್ ನೋಡಿದರೆ, ‘ಮಾರ್ಕ್’ ಸಿನಿಮಾ ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ. ಹಬ್ಬದ ಸೀಸನ್ ಲಾಭವನ್ನು ಸದುಪಯೋಗಪಡಿಸಿಕೊಂಡಿರುವ ಈ ಸಿನಿಮಾ, ಕಿಚ್ಚ ಸುದೀಪ್ ಅವರ ಬಾಕ್ಸ್‌ಆಫೀಸ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Previous articleಮಾಜಿ ಸಚಿವ ನಾಗೇಂದ್ರ ಆಪ್ತರ ಮನೆಗಳ ಮೇಲೆ CBI ದಾಳಿ