Home Advertisement
Home ಸಿನಿ ಮಿಲ್ಸ್ ‘KD’ ಸರ್ಪ್ರೈಸ್: ಕಿಚ್ಚ ಸುದೀಪ್ ‘ಕಾಲ ಭೈರವ’ ಪಾತ್ರ ಬಹಿರಂಗ

‘KD’ ಸರ್ಪ್ರೈಸ್: ಕಿಚ್ಚ ಸುದೀಪ್ ‘ಕಾಲ ಭೈರವ’ ಪಾತ್ರ ಬಹಿರಂಗ

0
71

ಬೆಂಗಳೂರು: ಬಹುನಿರೀಕ್ಷಿತ ಕೆಡಿ ಸಿನಿಮಾದಿಂದ ಮತ್ತೊಂದು ದೊಡ್ಡ ಅಪ್ಡೇಟ್ ಹೊರಬಿದ್ದಿದ್ದು, ನಟ ಕಿಚ್ಚ ಸುದೀಪ್ ಅವರ ಪಾತ್ರವನ್ನು ಅಧಿಕೃತವಾಗಿ ಪರಿಚಯಿಸಲಾಗಿದೆ. ನಿರ್ದೇಶಕ ಪ್ರೇಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಘೋಷಣೆ ಮಾಡಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಪ್ರೇಮ್ ಹಂಚಿಕೊಂಡ ಪೋಸ್ಟರ್‌ನಲ್ಲಿ ಸುದೀಪ್ ಅವರು ‘ಕಾಲ ಭೈರವ’ ಎಂಬ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಕೆಲವು ಹೆಸರುಗಳು ಆತಂಕ ಮೂಡಿಸುತ್ತವೆ, ಆದರೆ ಈ ಹೆಸರು ತಬ್ಬಿಬ್ಬಾಗಿಸುತ್ತದೆ” ಎಂದು ಬರೆದುಕೊಂಡಿರುವ ಪ್ರೇಮ್, ಈ ಪಾತ್ರ ಚಿತ್ರದ ಪ್ರಮುಖ ತಿರುವಾಗಿರಲಿದೆ ಎಂಬ ಸುಳಿವು ನೀಡಿದ್ದಾರೆ.

ಈ ಚಿತ್ರದ ನಾಯಕನಾಗಿ ಧ್ರುವ ಸರ್ಜಾ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ತಿಳಿದ ಸಂಗತಿ. ಇದಕ್ಕೆ ಸೇರ್ಪಡೆಯಾಗಿ ವಿ. ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ, ರೀಷ್ಮಾ ನಾಣಯ್ಯ ಸೇರಿದಂತೆ ಭಾರೀ ತಾರಾಗಣವೇ ಚಿತ್ರದಲ್ಲಿದೆ.

ಇತ್ತೀಚಿನ ಅಪ್ಡೇಟ್ ಪ್ರಕಾರ, ಚಿತ್ರದ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ವೇಗವಾಗಿ ಸಾಗುತ್ತಿದ್ದು, ಪ್ರಚಾರ ಕಾರ್ಯಗಳನ್ನು ಹಂತ ಹಂತವಾಗಿ ಆರಂಭಿಸಲು ಚಿತ್ರತಂಡ ಸಜ್ಜಾಗಿದೆ. ವಿಶೇಷವಾಗಿ ಸುದೀಪ್ ಅವರ ‘ಕಾಲ ಭೈರವ’ ಪಾತ್ರದ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಚಿತ್ರದ ಮೇಲೆ ಇನ್ನಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಚಿತ್ರವು 2026ರ ಏಪ್ರಿಲ್ 30ರಂದು ಬಿಡುಗಡೆಯಾಗಲಿದ್ದು, ಭಾರೀ ಬಜೆಟ್ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.