Home Advertisement
Home ಸಿನಿ ಮಿಲ್ಸ್ ಕಾಪಿರೈಟ್ ವಿವಾದಕ್ಕೆ ತೆರೆ: ಸುಜೋಯ್ ಘೋಷ್‌ಗೆ ಸುಪ್ರೀಂ ಬಿಗ್ ರಿಲೀಫ್

ಕಾಪಿರೈಟ್ ವಿವಾದಕ್ಕೆ ತೆರೆ: ಸುಜೋಯ್ ಘೋಷ್‌ಗೆ ಸುಪ್ರೀಂ ಬಿಗ್ ರಿಲೀಫ್

0
75

ನವದೆಹಲಿ: ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರಕಥೆಗಾರ ಮತ್ತು ನಿರ್ದೇಶಕ ಸುಜಯ್ ಘೋಷ್ ಅವರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು (ಮಾರ್ಚ್ 20, 2026) ಮಹತ್ವದ ತೀರ್ಪು ನೀಡಿದೆ. ಅವರ 2016ರ ಚಿತ್ರ ‘ಕಹಾನಿ 2’ (Kahaani 2) ಗೆ ಸಂಬಂಧಿಸಿದ ಕೃತಿಸ್ವಾಮ್ಯ ಉಲ್ಲಂಘನೆಯ (Copyright Infringement) ಕ್ರಿಮಿನಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಜಾರ್ಖಂಡ್‌ನ ಹಜಾರಿಬಾಗ್ ನ್ಯಾಯಾಲಯದಲ್ಲಿ ಬಾಕಿ ಇದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ನ್ಯಾಯಮೂರ್ತಿಗಳಾದ ಪಮಿದಿಘಂಟಮ್ ಶ್ರೀ ನರಸಿಂಹ ಮತ್ತು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಪೀಠ ವಜಾಗೊಳಿಸಿದೆ. ಈ ಮೂಲಕ ಸುಜೋಯ್ ಘೋಷ್ ವಿರುದ್ಧ ಹಲವು ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ತೆರೆ ಬಿದ್ದಿದೆ.

ಪ್ರಕರಣದ ಹಿನ್ನೆಲೆ: ಉಮೇಶ್ ಪ್ರಸಾದ್ ಮೆಹ್ತಾ ಎಂಬುವವರು ತಮ್ಮ ‘ಸಬಕ್’ (Sabak) ಎಂಬ ಚಿತ್ರಕಥೆಯನ್ನು ಸುಜೋಯ್ ಘೋಷ್ ಅವರು ಅನುಮತಿಯಿಲ್ಲದೆ ‘ಕಹಾನಿ 2’ ಚಿತ್ರಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ 1957ರ ಕಾಪಿರೈಟ್ ಕಾಯ್ದೆಯ ಸೆಕ್ಷನ್ 63 ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಹೈಕೋರ್ಟ್ ಆದೇಶ ರದ್ದು: ಈ ಮೊದಲು ಜಾರ್ಖಂಡ್ ಹೈಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿತ್ತು. ಈಗ ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ಆ ಆದೇಶವನ್ನು ಮತ್ತು ಹಜಾರಿಬಾಗ್ ಮ್ಯಾಜಿಸ್ಟ್ರೇಟ್ ನೀಡಿದ್ದ ಸಮನ್ಸ್ ಅನ್ನು ಸಹ ವಜಾಗೊಳಿಸಿದೆ.

ಈ ತೀರ್ಪಿನಿಂದ ಸುಜೋಯ್ ಘೋಷ್ ಅವರಿಗೆ ಸಂಪೂರ್ಣ ರಿಲೀಫ್ ದೊರೆತಿದ್ದು, ಹಲವು ವರ್ಷಗಳಿಂದ ಮುಂದುವರಿದಿದ್ದ ಕಾಪಿರೈಟ್ ವಿವಾದಕ್ಕೆ ಅಂತ್ಯ ಕಂಡಿದೆ.