Home Advertisement
Home ಸಿನಿ ಮಿಲ್ಸ್ ದರ್ಶನ್ ಹುಟ್ಟುಹಬ್ಬಕ್ಕೆ ‘ಹಯಗ್ರೀವ’ ಟೀಸರ್ ಉಡುಗೊರೆ

ದರ್ಶನ್ ಹುಟ್ಟುಹಬ್ಬಕ್ಕೆ ‘ಹಯಗ್ರೀವ’ ಟೀಸರ್ ಉಡುಗೊರೆ

0
21

ನಟ ದರ್ಶನ ಅವರ 49ನೇ ಹುಟ್ಟುಹಬ್ಬದ ಪ್ರಯುಕ್ತ, ಹಯಗ್ರೀವ ಚಿತ್ರತಂಡವು ಇಂದು ವಿಶೇಷ ಆಕ್ಷನ್ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಈ ಟೀಸರ್ ಬಿಡುಗಡೆಯೊಂದಿಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿದ್ದು, ವಾರಾಂತ್ಯದಲ್ಲಿ ಟ್ರೇಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

ಗಿಲ್ಲಿ ಡೈಲಾಗ್‌ಗೆ ಫ್ಯಾನ್ ಫಿದಾ: ಟೀಸರ್‌ನಲ್ಲಿ ದರ್ಶನ್ ಅವರ ಪ್ರಭಾವ ಮತ್ತು ಸ್ಟಾರ್ ಇಮೇಜ್‌ಗೆ ಸಮರ್ಪಿತ ಡೈಲಾಗ್‌ಗಳು ಗಮನ ಸೆಳೆಯುತ್ತಿವೆ. ವಿಶೇಷವಾಗಿ, ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ನಟ ಹೇಳುವ “ಒಬ್ಬ ಮನುಷ್ಯನನ್ನು ಬಂಧಿಸಬಹುದು, ಆದರೆ ಒಂದು ಪ್ರಭಾವವನ್ನಲ್ಲ” ಎಂಬ ಖಡಕ್ ಡೈಲಾಗ್ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.

ಧನ್ವೀರ್ ಅವರ ಮಾಸ್ ಆಕ್ಷನ್ ಝಲಕ್: ಟೀಸರ್‌ನಲ್ಲಿ ನಟ ಧನ್ವೀರ್ ಅವರು ಶರ್ಟ್‌ಲೆಸ್ ಆಗಿ ಸಿಕ್ಸ್‌ಪ್ಯಾಕ್ ಪ್ರದರ್ಶಿಸುತ್ತಾ, ಕಿಡಿಗೇಡಿಗಳನ್ನು ಬೆಂಡೆತ್ತುವ ಮಾಸ್ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರ, “ನನಗೆ ತಾಳ್ಮೆ ಸ್ವಲ್ಪ ಕಮ್ಮಿ… ಯಾಕಂದ್ರೆ ಚಾಮುಂಡೇಶ್ವರಿ ತಾಯಿ ನಮ್ಮ ಮಮ್ಮಿ” ಎಂಬ ಡೈಲಾಗ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಡೈಲಾಗ್ ಮತ್ತು ಆಕ್ಷನ್ ದೃಶ್ಯಗಳು ಚಿತ್ರಕ್ಕೆ ಭರ್ಜರಿ ಹೈಪ್ ತಂದಿವೆ.

ಇದನ್ನೂ ಓದಿ: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ: ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ

ದರ್ಶನ್‌ಗೆ ಅಭಿಮಾನಿ ನಮನ: ಸದ್ಯ ನಟ ದರ್ಶನ್ ಅವರು ಜೈಲಿನಲ್ಲಿದ್ದರೂ, ಅವರ ಆಪ್ತ ಧನ್ವೀರ್ ಹಾಗೂ ಚಿತ್ರತಂಡವು ಈ ವಿಶೇಷ ಟೀಸರ್ ಮೂಲಕ ದರ್ಶನ್ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದೆ. ದರ್ಶನ್ ಅವರ ಹುಟ್ಟುಹಬ್ಬಕ್ಕೆ ಸಮರ್ಪಿತ ಈ ವಿಡಿಯೋ, ಅಭಿಮಾನಿಗಳಿಗೆ ಭಾವನಾತ್ಮಕ ಅನುಭವ ನೀಡುತ್ತಿದೆ.

ಕೆವಿಸಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಹಯಗ್ರೀವ’ನಿಗೆ ಪದ್ಮಾ ಸಮೃದ್ಧಿ ಮಂಜುನಾಥ್ ಬಂಡವಾಳ ಹೂಡಿದ್ದಾರೆ. ವಿರಾಟ್ ಸಾಯಿ ಕ್ರಿಯೇಷನ್ಸ್ ಅರ್ಪಿಸುವ ಈ ಚಿತ್ರಕ್ಕೆ ಮಹೇಶ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಚಿತ್ರಕ್ಕೆ ರಘುಕುಮಾರ್ ಓ.ಆರ್. ನಿರ್ದೇಶನ ಮಾಡಿದ್ದು, ಈ ಚಿತ್ರದ ಮೂಲಕ ಅವರು ನಿರ್ದೇಶನ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಧನ್ವೀರ್, ಸಂಜನಾ ಆನಂದ್, ಸಾಧು ಕೋಕಿಲ, ರವಿಶಂಕರ್, ಶರತ್ ಲೋಹಿತಾಶ್ವ, ರಂಗಾಯಣ ರಘು ಮತ್ತು ಶೃತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಶಬರಿಮಲೆ ಮಹಿಳೆಯರ ಪ್ರವೇಶ: ಏ. 7ರಿಂದ ಅಂತಿಮ ವಿಚಾರಣೆ

ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ: ಆಕ್ಷನ್, ಡೈಲಾಗ್, ಸ್ಟಾರ್ ಪವರ್ ಮತ್ತು ದರ್ಶನ್‌ಗೆ ಸಲ್ಲಿಸಿದ ಗೌರವದ ಕಾರಣದಿಂದ ‘ಹಯಗ್ರೀವ’ ಚಿತ್ರವು ಈಗಾಗಲೇ ಸಿನಿಪ್ರೇಮಿಗಳ ಗಮನ ಸೆಳೆದಿದೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಟ್ರೇಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಟೀಸರ್ ಆರಂಭದಲ್ಲಿ: “ಕಬ್ಬಿಣದ ಬಾಗಿಲುಗಳು ನಿಮ್ಮನ್ನು ದೂರ ಮಾಡಿರಬಹುದು, ಆದರೆ ಈ ಜನರ ಹೃದಯಗಳಲ್ಲಿ ನೀವು ಇಂದಿಗೂ ನಮ್ಮ ಹೆಮ್ಮೆಯಾಗಿ ಉಳಿದಿದ್ದೀರಿ. ಒಬ್ಬ ಮನುಷ್ಯನನ್ನು ಗೋಡೆಗಳ ಹಿಂದೆ ಇಡಬಹುದು, ಆದರೆ ಒಂದು ಹೆಸರನ್ನು, ಒಂದು ಪ್ರಭಾವವನ್ನು ಯಾರೂ ಬಂಧಿಸಲು ಸಾಧ್ಯವೇ? ನೀವು ಇಂದು ಹೋರಾಟದಲ್ಲಿದ್ದೀರಿ, ಆದರೆ ಈ ಜನ, ಈ ಪ್ರೀತಿ ಮತ್ತು ಈ ನಂಬಿಕೆಯೇ ನಿಮಗೆ ಕವಚವಾಗಿದೆ. ಕಾಲ ಪರೀಕ್ಷಿಸಬಹುದು, ಆದರೆ ಇತಿಹಾಸವೇ ತೀರ್ಪು ನೀಡುತ್ತದೆ. ಇದು ಅಂತ್ಯವಲ್ಲ, ಬದಲಿಗೆ ಮಹಾ ಆರಂಭ! ದರ್ಶನ್ ಅಣ್ಣ ಎಂದರೆ ಕೇವಲ ಹೆಸರಲ್ಲ; ಲಕ್ಷಾಂತರ ಜನರಿಗೆ ಸ್ಫೂರ್ತಿ, ಧೈರ್ಯ, ಪ್ರೀತಿ ಮತ್ತು ನಂಬಿಕೆ. ಈ ಹುಟ್ಟುಹಬ್ಬದಲ್ಲಿ ನಿಮಗೆ ಕಾಣದ ಪ್ರಪಂಚವೇ ನಿಮ್ಮ ಜಯಘೋಷದಿಂದ ತುಂಬಿದೆ. ಶುಭಾಶಯಗಳು ಅಣ್ಣ, ನೀವು ಕೇವಲ ನಟನಲ್ಲ, ನೀವು ನಮ್ಮ ಹೆಮ್ಮೆ.” ಎಂದು ಟೀಸರ್ ಆರಂಭಕ್ಕೂ ಮುನ್ನ ದರ್ಶನ್‌ಗೆ ಜನ್ಮದಿನದ ಶುಭಾಶಯ ಹೇಳಲಾಗಿದೆ.

Previous articleಬಿಜೆಪಿ ಜತೆ ಜೆಡಿಎಸ್‌ ವಿಲೀನವಾಗಲ್ಲ
Next articleಹಂಪಿಯ ವಿರೂಪಾಕ್ಷೇಶ್ವರ ದೇಗುಲದ ಬಳಿ ಚಿರತೆ ಪ್ರತ್ಯಕ್ಷ