ಬಾಲಿವುಡ್‌ನ ಖ್ಯಾತ ಹಾಸ್ಯನಟ ಗೋವರ್ಧನ್ ಅಸರಾನಿ ನಿಧನ

0
23

ಮುಂಬೈ: ಬಾಲಿವುಡ್‌ನ ಖ್ಯಾತ ಹಾಸ್ಯನಟ ಹಾಗೂ ನಟನ ಕ್ಷೇತ್ರದಲ್ಲಿ ಅರುಣೋದಯವಾದ ಗೋವರ್ಧನ್ ಅಸರಾನಿ (Asrani) ಅವರು ಶನಿವಾರ ವಯೋಸಹಜ ಕಾಯಿಲೆಯಿಂದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಅಸರಾನಿ ಅವರು ಹಿಂದಿ ಚಿತ್ರರಂಗದಲ್ಲಿ ಐದು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದು, ತಮ್ಮ ಹಾಸ್ಯಭರಿತ ಅಭಿನಯದ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದರು. 1975ರ ‘ಶೋಲೆ’ ಚಿತ್ರದಲ್ಲಿ ಅವರು ಮಾಡಿದ “ಜೈಲ್ ಸಿಪೆರಿಂಟೆಂಡೆಂಟ್” ಪಾತ್ರವು ಇಂದಿಗೂ ಜನಮನದಲ್ಲಿ ಉಳಿದಿದೆ. “ಹಮಾರಾ ನಾಂ ಶರ್‍ಮಾ ಹೈ, ಆಊರ್ ಹಮೇ ಶರ್ಮಾ ಆತಿ ಹೈ!” ಎಂಬ ಅವರ ಸಂಭಾಷಣೆ ಭಾರತೀಯ ಸಿನೆಮಾ ಇತಿಹಾಸದಲ್ಲಿ ಅಜರಾಮರವಾಗಿದೆ.

ಅವರ ನಿಧನದ ಸುದ್ದಿ ಹರಡುತ್ತಿದ್ದಂತೆಯೇ ಚಿತ್ರರಂಗ ಹಾಗೂ ರಾಜಕೀಯ ವಲಯಗಳಿಂದ ಸಂತಾಪದ ಅಲೆ ಹರಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಶೋಕ ವ್ಯಕ್ತಪಡಿಸಿ, “ಗೋವರ್ಧನ್ ಅಸರಾನಿ ಜಿ ಅವರ ನಿಧನದಿಂದ ತುಂಬಾ ದುಃಖವಾಗಿದೆ. ಪ್ರತಿಭಾನ್ವಿತ, ಮನರಂಜನೆ ಮತ್ತು ಬಹುಮುಖ ಕಲಾವಿದರಾಗಿದ್ದ ಅವರು ತಲೆಮಾರುಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅವರ ಕೊಡುಗೆ ಯಾವಾಗಲೂ ಸ್ಮರಣೀಯವಾಗಿರುತ್ತದೆ. ಕುಟುಂಬ ಹಾಗೂ ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ,” ಎಂದು ಹೇಳಿದ್ದಾರೆ.

ಇದಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸದೀಯ ಸಚಿವ ಕಿರಣ್ ರಿಜಿಜು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್, ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್, ಪರೇಶ್ ರಾವಲ್, ರಿತೇಶ್ ದೇಶ್ಮುಖ್, ಅನುಪಮ್ ಖೇರ್ ಮುಂತಾದ ಗಣ್ಯರು ತಮ್ಮ ಸಂತಾಪ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.

ಅಸರಾನಿ ಅವರು ನೂರಾರು ಚಿತ್ರಗಳಲ್ಲಿ ನಟಿಸಿದ್ದು, ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಸ್ಯನಟರಷ್ಟೇ ಅಲ್ಲದೆ ಗಂಭೀರ ಪಾತ್ರಗಳಲ್ಲಿಯೂ ತಮಗಿಷ್ಟವಾದ ಗುರುತು ಮೂಡಿಸಿದ್ದರು.

Previous articleಬಾಬರ್‌ಗೆ ಸಾವಿರ ದಿನಗಳ ಶತಕದ ಬರ, ತಂಡದಿಂದಲೇ ಗೇಟ್‌ಪಾಸ್?
Next articleಚೀನಾಕ್ಕೆ ಟ್ರಂಪ್ ಶಾಕ್: ನವೆಂಬರ್ 1ರ ಗಡುವು, ಇಲ್ಲವೇ 155% ಸುಂಕದ ಬರೆ!

LEAVE A REPLY

Please enter your comment!
Please enter your name here