ಗತವೈಭವ ಚಿತ್ರದ ಮೊದಲ ಹಾಡು ವರ್ಣಮಾಲೆ ಹಾಗು ವ್ಯಾಕರಣದ ಬಂದಗಳಿಂದ ಕೂಡಿದ್ದು ಇಂದು ಲಹರಿ ಮ್ಯೂಸಿಕ್ ಚಾನಲ್‌ನಲ್ಲಿ ಬಿಡುಗಡೆಗೊಂಡಿದೆ. ಅಕ್ಷರಗಳ ಸಂಕೋಲೆಯಲ್ಲಿ, ಪದಗಳ ಸ್ವರಮಾಲೆಯಲ್ಲಿ ಬೆಸೆದ ಭಾವನೆಗಳ ಪ್ರೇಮಕಾವ್ಯ ಆಗಿದೆ.
“ಇವನೊಂಥರ ಹ್ರಸ್ವಸ್ವರ, ಅವಳೊಂಥರ ಧೀರ್ಘಸ್ವರ — ಈ ಜೋಡಿ ಮಿಲನ ಸಮೀಕರಣ, ವರ್ಣಮಾಲೆ ಕಾಗದದ ಮೇಲೆ ಭಾಷೆ ಬರವಣಿಗೆ… ಸಂಧಾನ” ಎಂಬ ಸಾಲುಗಳೊಂದಿಗೆ ಆರಂಭವಾಗುವ ಈ ಹಾಡು ಸಿನಿ ರಸಿಕರ ಗಮನ ಸೆಳೆದಿವೆ. ಹಾಡಿಗೆ ಸಿಪಂಲ್ ಸುನಿ ಸಾಹಿತ್ಯ ಬರೆದಿದ್ದಾರೆ. ಈ ಗೀತೆಯನ್ನು ಅಭಿನಂದನ್ ಮಹಿಷಾಲೆ ಹಾಗೂ ಸುನಿಧಿ ಗಣೇಶ ಹಾಡಿದ್ದಾರೆ.
ಕಥೆ-ಚಿತ್ರಕಥೆ ಜೊತೆಗೆ ಸಂಭಾಷಣೆ ಬರೆದಿರುವ ಸಿಂಪಲ್ ಸುನಿ ಈ ಚಿತ್ರವನ್ನು ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಕ್ ತಿಮ್ಮಪ್ಪ ಹಾಗೂ ಸುನಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ, ಜೂಡಾ ಸ್ಯಾಂಡಿ ಸಂಗೀತ ಈ ಚಿತ್ರಕ್ಕಿದೆ.
ನವೆಂಬರ್ 14ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಗತವೈಭವ ಚಿತ್ರದ ಮೊದಲ ಹಾಡು ನೋಡಿ ,ಕೇಳಿ….