‘ಕಲ್ಟ್‌’ನಿಂದ ದಾವಣಗೆರೆಯ ಜನರೆದುರು ‘ಹೃದಯದ’ ಹಾಡು ಅನಾವರಣ

0
5

ದಾವಣಗೆರೆ: ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ‘ಕಲ್ಟ್’ ಚಿತ್ರತಂಡ ಇದೀಗ ದಾವಣಗೆರೆ ನಗರಕ್ಕೆ ಆಗಮಿಸಿ, ಬೆಣ್ಣೆ ನಗರಿಯ ಜನರ ಎದುರು ಚಿತ್ರದ ಹೊಸ ಹಾಡು ‘ಹೃದಯವು ಕೇಳದೇ’ ಅನ್ನು ಭರ್ಜರಿಯಾಗಿ ಅನಾವರಣಗೊಳಿಸಿದೆ. ಪ್ರಚಾರದ ಭಾಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಉತ್ಸಾಹದಿಂದ ಭಾಗವಹಿಸಿದರು.

‘ಬನಾರಸ್’ ಚಿತ್ರದ ಮೂಲಕ ಗಮನ ಸೆಳೆದ ನಟ ಝೈದ್ ಖಾನ್, ಕನ್ನಡ ಸಿನಿರಸಿಕರ ಮೆಚ್ಚಿನ ನಟಿ ರಚಿತಾ ರಾಮ್, ಹಾಗೂ ಮಲೈಕಾ ವಸುಪಾಲ್ ಅಭಿನಯದ ‘ಕಲ್ಟ್’ ಸಿನಿಮಾ ಗಣರಾಜ್ಯೋತ್ಸವದ ಅಂಗವಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ನಿರ್ದೇಶಕ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಜನವರಿ 23ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಇದನ್ನೂ ಓದಿ: ‘ವಿಜಯ’ ಯಾತ್ರೆಗೆ ತೊಡಕು: ‘ನಾಯಕನ’ ದರ್ಶನ ಕೊಂಚ ತಡ

ಕಲರ್‌ಫುಲ್ ‘ಹೃದಯವು ಕೇಳದೇ’: ಬಿಡುಗಡೆಯಾಗಿರುವ ‘ಹೃದಯವು ಕೇಳದೇ’ ಹಾಡಿನಲ್ಲಿ ಝೈದ್ ಖಾನ್ ಮತ್ತು ರಚಿತಾ ರಾಮ್ ಜೋಡಿಯಾಗಿ ಕಾಣಿಸಿಕೊಂಡಿದ್ದು, ಹಾಡು ಕಲರ್‌ಫುಲ್ ಹಾಗೂ ಫ್ರೆಶ್ ವೈಬ್‌ನಲ್ಲಿ ಮೂಡಿಬಂದಿದೆ. ಈ ಹಾಡಿಗೆ ಖ್ಯಾತ ನೃತ್ಯ ನಿರ್ದೇಶಕ ಎ. ಹರ್ಷ ಅವರ ನೃತ್ಯ ಸಂಯೋಜನೆ ಇದ್ದು, ದೃಶ್ಯಾತ್ಮಕವಾಗಿ ಹಾಡು ಪ್ರೇಕ್ಷಕರ ಮನಸೆಳೆಯುತ್ತಿದೆ.

ಹಾಡಿಗೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಜೀವ ತುಂಬಿದ್ದು, ದರ್ಶನ್ ಮೇಳವಂಕಿ ಹಾಗೂ ಲಹರಿ ಮಹೇಶ್ ಅವರ ಕಂಠಸಿರಿಯಲ್ಲಿ ಹಾಡು ಇನ್ನಷ್ಟು ಮಧುರವಾಗಿದೆ. ವಿಶೇಷವೆಂದರೆ, ಈ ಹಾಡಿನ ಸಾಹಿತ್ಯವನ್ನು ನಿರ್ದೇಶಕ ಅನಿಲ್ ಕುಮಾರ್ ಅವರೇ ಬರೆದಿದ್ದಾರೆ.

ಇದನ್ನೂ ಓದಿ: Toxic ಭರ್ಜರಿ ಟೀಸರ್‌ ಬಿಡುಗಡೆ: ಯಶ್ ಅವತಾರಕ್ಕೆ ಫ್ಯಾನ್ಸ್ ಫಿದಾ

ಈಗಾಗಲೇ ಹಿಟ್ ಆಗಿರುವ ಹಾಡುಗಳು: ‘ಕಲ್ಟ್’ ಸಿನಿಮಾದಿಂದ ಈಗಾಗಲೇ ಬಿಡುಗಡೆಯಾಗಿರುವ ‘ಅಯ್ಯೋ ಶಿವನೇ’, ‘ಬ್ಲಡಿ ಲವ್’, ‘ನಿನ್ನಲ್ಲೇ ನಾನಿರೇ…’ ಹಾಡುಗಳು ಹಿಟ್ ಲಿಸ್ಟ್ ಸೇರಿದ್ದು, ಸಂಗೀತ ಪ್ರಿಯರಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಇದೀಗ ಹೊಸದಾಗಿ ಬಿಡುಗಡೆಯಾದ ‘ಹೃದಯವು ಕೇಳದೇ’ ಹಾಡು ಕೂಡ ಎಲ್ಲೆಡೆ ಸದ್ದು ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ.

ಜನವರಿ 23ಕ್ಕೆ ‘ಕಲ್ಟ್’ ರಿಲೀಸ್: ಲೋಕಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸುತ್ತಿದೆ. ಚಿತ್ರದ ಎಲ್ಲಾ ಹಾಡುಗಳು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿದ್ದು, ಸಂಗೀತದ ಮೂಲಕವೇ ‘ಕಲ್ಟ್’ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಕನ್ನಡತಿಯಿಂದ ರಾಷ್ಟ್ರಮಟ್ಟದ ಪ್ರಯತ್ನ: ‘ಆಜಾದ್ ಭಾರತ್’ ಚಿತ್ರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೆಚ್ಚುಗೆ

ಒಟ್ಟಿನಲ್ಲಿ, ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿಕೊಂಡಿರುವ ‘ಕಲ್ಟ್’ ಸಿನಿಮಾ, ಜನವರಿ 23ರಂದು ತೆರೆಗೆ ಬಂದು ಪ್ರೇಕ್ಷಕರ ಮನ ಗೆಲ್ಲುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Previous articleಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ: NCW ಸ್ವಯಂ ಪ್ರೇರಿತ ದೂರು ದಾಖಲಿಸಿ ತೀವ್ರ ಆಕ್ಷೇಪ