ಈಗಿನ ಟ್ರೆಂಡ್‌ಗೆ ತಕ್ಕಂತೆ ಸಿನಿಮಾ ಮಾಡಿದ ಖುಷಿಯಿದೆ-ಹರಿ ಸಂತೋಷ್
ಈಗಿನ ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ Congratulations ಬ್ರದರ್. ‘ಕಾಲೇಜು ಯುವಕ-ಯುವತಿಯರೆಲ್ಲ ಬಂದು ಸಿನಿಮಾ ನೋಡಿದರೆ ನಮ್ಮ ಶ್ರಮ ಸಾರ್ಥಕ. ಅವರು ಸಿನಿಮಾ ನೋಡಿದರೆ ಫ್ಯಾಮಿಲಿಯನ್ನೂ ಕರೆದುಕೊಂಡು ಬರುತ್ತಾರೆ ಎಂಬ ನಂಬಿಕೆಯಿದೆ. ಈಗಿನ ಟ್ರೆಂಡ್‌ಗೆ ತಕ್ಕಂತೆ ಸಿನಿಮಾ ಮಾಡಿದ ಖುಷಿಯಿದೆ’ ಎಂಬುದು ಕಥೆಗಾರ ಹಾಗೂ ಕ್ರಿಯೇಟಿವ್ ಹೆಡ್ ಹರಿ ಸಂತೋಷ್ ನಂಬಿಕೆ.
ನವೆಂಬರ್ 21ನೇ ತಾರೀಖು ಈ ಚಿತ್ರ ಬಿಡುಗಡೆಯಾಗಲಿದೆ. ಹೀಗಾಗಿ ಕಾಲೇಜು ವಿದ್ಯಾರ್ಥಿಗಳನ್ನು ಖುದ್ದಾಗಿ ಭೇಟಿ ಮಾಡಲೆಂದೇ ಬೀದರ್‌ನಿಂದ ಚಾಮರಾಜನಗರದವರೆಗೂ ‘ Congratulations ಬ್ರದರ್’ ತಂಡ ಪ್ರಯಾಣ ಬೆಳೆಸಿ ಈ ಚಿತ್ರದ ಬಗ್ಗೆ ಪ್ರಚಾರ ಮಾಡಿ ಬಂದಿದೆ. ಇನ್ನೇನಿದ್ದರೂ ಪ್ರೇಕ್ಷಕರು ಚಿತ್ರಮಂದಿರಗಳತ್ತ ದಾವಿಸಬೇಕಷ್ಟೇ.
ರಕ್ಷಿತ್ ನಾಗ್ ಮತ್ತು ಸಂಜನಾ ದಾಸ್ ನಾಯಕ-ನಾಯಕಿ. ಪ್ರಶಾಂತ್ ಕಲ್ಲೂರು ಈ ಸಿನಿಮಾದ ನಿರ್ಮಾಪಕ. ಪ್ರತಾಪ್ ಗಂಧರ್ವ ನಿರ್ದೇಶಕ. ಅಲೆಮಾರಿ, ಡಾರ್ಲಿಂಗ್ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಹರಿ ಸಂತೋಷ್ …ಬ್ರದರ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾಕ್ಕೂ ಅದೇ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದೆ ‘… ಬ್ರದರ್’ ಚಿತ್ರತಂಡ.


























