ಬಿಗ್‌ಬಾಸ್ ಕನ್ನಡ ಸೀಸನ್ 12 ಈಗಾಗಲೇ ಫಿನಾಲೆ ಹಂತ ತಲುಪಿದೆ. ಅಂತಿಮವಾಗಿ ಮನೆಯಲ್ಲಿ ಇರುವ ಆರು ಜನ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇಂದು ಸಂಜೆ ವಿನ್ನರ್ ಯಾರೆಂದು ಘೋಷಣೆಯಾಗುವ ಸಮಯಕ್ಕೆ ಈಗಾಗಲೇ ಜನ ಕಾತುರದಿಂದ ಕಾಯುತ್ತಿದ್ದಾರೆ.
ಮಮೆಯಲ್ಲಿ ಸ್ಪರ್ಧಿಗಳ ಆಟ ಒಂದಡೆಯಾದರೆ, ಸಾಮಾಜಿಕ ಜಾಲತಾಣದಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಅವರೇ ಟಾಪ್ ಮೂರರಲ್ಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಇನ್ನು ಗಿಲ್ಲಿ ನಟನ ಅಭಿಮಾನಿಗಳಂತೂ ಗಿಲ್ಲಿ ಈಗಾಗಲೇ ಗೆದ್ದಾಯ್ತು ಎನ್ನುತ್ತಿದ್ದಾರೆ.
ಸದ್ಯ ಮನೆಯಲ್ಲಿ ಅಂತಿಮವಾಗಿ ಗಿಲ್ಲಿ ನಟ, ಅಶ್ವಿನಿ ಗೌಡ, ರಘು, ರಕ್ಷಿತಾ ಶೆಟ್ಟಿ, ಧನುಷ್ ಮತ್ತು ಕಾವ್ಯಾ ಶೈವ ಫಿನಾಲೆ ಅಭ್ಯರ್ಥಿಗಳಾಗಿದ್ದಾರೆ. ಈ ಆರು ಜನರಲ್ಲಿ ಯಾರು ವಿನ್ನರ್ ಎಂಬುದರ ಬಗ್ಗೆ ಬಿಸಿ ಬಿಸಿ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಲೇ ಇದೆ.
ಗಿಲ್ಲಿ ಕ್ರೇಜ್ ಜೋರು: ಬಿಗ್ ಮನೆಗೆ ಗಿಲ್ಲಿ ಕಾಲಿಡುತ್ತಿದ್ದಂತೆ ತಮ್ಮದೇಯಾದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಗಿಲ್ಲಿ ನಟನ ಬಗ್ಗೆ ಹೊರಗಡೆ ಇರುವ ಕ್ರೇಜ್ ಅಸಾಧಾರಣ ಆಗಿದೆ. ಅದನ್ನು ನೋಡಿದ ಎಲ್ಲರೂ ಕೂಡ ಗಿಲ್ಲಿ ಗೆಲ್ಲೋದು ಪಕ್ಕಾ ಎನ್ನುವ ಮಾತನ್ನೇ ಹೇಳುತ್ತಿದ್ದಾರೆ. ಗಿಲ್ಲಿ ಬಿಗ್ ಬಾಸ್ ವಿನ್ನರ್ ಎನ್ನುವುದಲ್ಲೆಕ್ಕೆ ಈ ಕ್ರೇಜ್ ಸಾಕ್ಷಿ ಎನ್ನುತ್ತಿದ್ದಾರೆ ಗಿಲ್ಲಿ ಫ್ಯಾನ್ಸ್.
37+ ಕೋಟಿ ವೋಟು: ಬಿಗ್‌ಬಾಸ್ ಕನ್ನಡ ಸೀಸನ್‌ನಲ್ಲಿ ಹಿಂದೆಂದೂ ಕಾಣದ ದಾಖಲೆ ಈ ಬಾರಿ ಆಗಿದೆ. 37 ಕೋಟಿಗೂ ಅಧಿಕ ವೋಟ್ ವಿನ್ನರ್‌ಗೆ ಸಿಕ್ಕಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಆದರೆ, ಎರಡನೇ ಸ್ಥಾನಕ್ಕೆ ಬಹಳಷ್ಟು ಅಂತರವಿದೆ ಎನ್ನುವುದನ್ನೂ ಹೇಳಿದ್ದಾರೆ. ಈ ಸೀಸನ್ ವಿನ್ನರ್ ಯಾರು ಇರಬೋದು? ಯಾರಿಗೆ ಇಷ್ಟು ವೋಟ್ ಸಿಕ್ಕಿದೆ? ಎನ್ನುವದನ್ನ ತಿಳಿಯಲು ರಾತ್ರಿಯ ವರೆಗೂ ಕಾಯಬೇಕಾಗಿದೆ.























