Home ಸಿನಿ ಮಿಲ್ಸ್ Bigg Boss ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ ‘ಗಿಲ್ಲಿ’

Bigg Boss ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ ‘ಗಿಲ್ಲಿ’

0
13

ಬಿಗ್ ಬಾಸ್ ಕನ್ನಡ ಸೀಸನ್ 12ರ ಪ್ರಭಾವ | ಗಿಲ್ಲಿಗೆ 3 ತಿಂಗಳಲ್ಲಿ 1 ಲಕ್ಷದಿಂದ 10 ಲಕ್ಷ ಫಾಲೋವರ್ಸ್‌

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ಬಾರಿ ಅಖಾಡವನ್ನೇ ಆವರಿಸಿಕೊಂಡಿರುವ ಒಬ್ಬನೇ ಹೆಸರು ಅಂದ್ರೆ ಅದು ಕಾಮಿಡಿ ಕಿಲಾಡಿ ಖ್ಯಾತಿಯ ‘ಗಿಲ್ಲಿ’ ನಟ. ಬಿಗ್ ಬಾಸ್ ಮನೆಗೆ ಕಾಲಿಡುವಾಗ ಕೇವಲ 1.02 ಲಕ್ಷ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಹೊಂದಿದ್ದ ಗಿಲ್ಲಿ ನಟ, ಕೇವಲ ಮೂರು ತಿಂಗಳೊಳಗೆ 10 ಲಕ್ಷ (1 ಮಿಲಿಯನ್) ಫಾಲೋವರ್ಸ್‌ ಗಡಿ ತಲುಪಿರುವುದು ಅವರ ಅಪಾರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಇದು ಕೇವಲ ಸೋಶಿಯಲ್ ಮೀಡಿಯಾ ಸಂಖ್ಯೆಯಲ್ಲ, ಬದಲಾಗಿ ಬಿಗ್ ಬಾಸ್ ಇತಿಹಾಸದಲ್ಲೇ ಕಂಡಿರದ ಮಟ್ಟದ ಕ್ರೇಜ್ ಎಂದು ಹೇಳಬಹುದು. (ಗಿಲ್ಲಿ ದಾಖಲೆಯ ಫಾಲೋವರ್ಸ್‌ವಿಡಿಯೋ ನೋಡಿ)

ಇದನ್ನೂ ಓದಿ: ಕ್ರಿಕೆಟ್ ಹಬ್ಬ: ಮಹಿಳಾ ಪ್ರೀಮಿಯರ್ ಲೀಗ್ 4ನೇ ಸೀಸನ್‌ಗೆ ಕ್ಷಣಗಣನೆ

ಕೇವಲ ಕಾಮಿಡಿಯನ್ ಅಂದುಕೊಂಡವರಿಗೆ ಶಾಕ್!: ಬಿಗ್ ಬಾಸ್ ಮನೆಗೆ ಹೋಗುವ ಮೊದಲು ಗಿಲ್ಲಿ ನಟನನ್ನು ಹಲವರು “ಕಾಮಿಡಿ ಮಾತ್ರ ಮಾಡುವ ಸ್ಪರ್ಧಿ” ಎಂದುಕೊಂಡಿದ್ದರು. ಆದರೆ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಬಳಿಕ, ಸ್ಪಷ್ಟ ಗೇಮ್ ಪ್ಲ್ಯಾನ್. ಟಾಸ್ಕ್‌ಗಳಲ್ಲಿ ಆಕ್ರಮಣಕಾರಿ ಆಟ. ಹಳ್ಳಿ ಸೊಗಡಿನ ಸರಳ ಮಾತು. ಎದುರಾಳಿಗಳನ್ನು ಚಕಿತಗೊಳಿಸುವ ತಂತ್ರ ಇವೆಲ್ಲವೂ ಪ್ರೇಕ್ಷಕರನ್ನು ಗಿಲ್ಲಿ ಪರವಾಗಿ ನಿಲ್ಲಿಸುವಂತೆ ಮಾಡಿವೆ. ದಿನದಿಂದ ದಿನಕ್ಕೆ ಗಿಲ್ಲಿಯ ಆಟ ಮತ್ತಷ್ಟು ಸ್ಟ್ರಾಂಗ್ ಆಗುತ್ತಿದ್ದು, ಪ್ರೇಕ್ಷಕರ ಮನಸ್ಸು ಸಂಪೂರ್ಣವಾಗಿ ಅವರತ್ತ ತಿರುಗಿದೆ.

ಸೋಶಿಯಲ್ ಮೀಡಿಯಾದಲ್ಲಿ ‘ಗಿಲ್ಲಿ’ ಅಬ್ಬರ: ಗಿಲ್ಲಿ ನಟನ ಕ್ರೇಜ್ ಬಿಗ್ ಬಾಸ್ ಮನೆಯೊಳಗೆ ಮಾತ್ರವಲ್ಲ, ಮನೆಯ ಹೊರಗಡೆನೂ ಭಾರೀ ಸದ್ದು ಮಾಡುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಅವರ ಅಕೌಂಟ್ ಈಗ ಟ್ರೆಂಡಿಂಗ್‌ನಲ್ಲೇ ಟ್ರೆಂಡಿಂಗ್. ಬಿಗ್ ಬಾಸ್ ಮನೆಗೆ ಹೋಗುವಾಗ ಗಿಲ್ಲಿ ಫಾಲೋವರ್ಸ್ ಸಂಖ್ಯೆ 1.04 ಲಕ್ಷ. ಆದರೆ ಈಗ ಗಿಲ್ಲಿ ಫಾಲೋವರ್ಸ್ 10 ಲಕ್ಷಕ್ಕೂ ಅಧಿಕ. ಈ ಮಟ್ಟದ ಏರಿಕೆ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಅತ್ಯಂತ ಅಪರೂಪದ ಸಾಧನೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಕಲ್ಟ್‌’ನಿಂದ ದಾವಣಗೆರೆಯ ಜನರೆದುರು ‘ಹೃದಯದ’ ಹಾಡು ಅನಾವರಣ

ಹಂತ ಹಂತವಾಗಿ ಬೆಳೆದ ಪ್ರತಿಭೆ: ಗಿಲ್ಲಿ ನಟನ ಈ ಯಶಸ್ಸು ಒಮ್ಮೆಗೆ ಬಂದದ್ದಲ್ಲ. ಜೀ ಕನ್ನಡದ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ನಗುವಿನ ಮಳೆ ಸುರಿಸಿದ ಅವರು, ನಂತರ ‘ಭರ್ಜರಿ ಬ್ಯಾಚುಲರ್ಸ್’, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’, ವೇದಿಕೆಗಳಲ್ಲೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ಹಂತ ಹಂತವಾಗಿ ಬೆಳೆದ ಈ ಪ್ರತಿಭೆಗೆ ಈಗ ಬಿಗ್ ಬಾಸ್ ಸೀಸನ್ 12 ದೊಡ್ಡ ವೇದಿಕೆ ಒದಗಿಸಿದೆ.

10 ಲಕ್ಷ ಜನರ ವೋಟ್ ಬ್ಯಾಂಕ್!: ಈಗ ಗಿಲ್ಲಿ ಪರವಾಗಿ ಮತ ಹಾಕಲು 10 ಲಕ್ಷಕ್ಕೂ ಅಧಿಕ ಜನರ ದೊಡ್ಡ ಪಡೆ ಸಿದ್ಧವಾಗಿದೆ ಎನ್ನಲಾಗುತ್ತಿದೆ. ವಿರೋಧಿಗಳು ಎಷ್ಟೇ ಟ್ರೋಲ್ ಮಾಡಿದರೂ, ಗಿಲ್ಲಿ ಫ್ಯಾನ್ಸ್ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಪ್ರತಿ ವಾರವೂ ಗಿಲ್ಲಿಯ ವೋಟ್ ಬ್ಯಾಂಕ್ ಇನ್ನಷ್ಟು ಸ್ಟ್ರಾಂಗ್ ಆಗುತ್ತಿದ್ದು, ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.

ಇದನ್ನೂ ಓದಿ: ‘ವಿಜಯ’ ಯಾತ್ರೆಗೆ ತೊಡಕು: ‘ನಾಯಕನ’ ದರ್ಶನ ಕೊಂಚ ತಡ

ಉಳಿದ ಸ್ಪರ್ಧಿಗಳ ಫಾಲೋವರ್ಸ್ ಚಿತ್ರಣ: ಬಿಗ್ ಬಾಸ್ ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳ ಸೋಶಿಯಲ್ ಮೀಡಿಯಾ ಫಾಲೋವರ್ಸ್ ಸಹ ಜೋರಾಗಿದೆ.
ನಟಿ ರಾಶಿಕಾ ಶೆಟ್ಟಿ: 1.72 ಲಕ್ಷ, ರಕ್ಷಿತ್ ಶೆಟ್ಟಿ: 4.72 ಲಕ್ಷ, ರಘು: 2.38 ಲಕ್ಷ, ನಟ ಧನುಷ್: 2.67 ಲಕ್ಷ, ನಟಿ ಕಾವ್ಯ ಶೈವ: 4.86 ಲಕ್ಷ, ‌ನಟಿ ಅಶ್ವಿನಿ ಗೌಡ: 2.02 ಲಕ್ಷ, ಆದರೆ ಗಿಲ್ಲಿ ನಟ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದು, ಈ ಅಂಕಿ-ಅಂಶಗಳೇ ಗಿಲ್ಲಿಯ ಕ್ರೇಜ್ ಎಷ್ಟಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಟ್ರೋಫಿ ಗಿಲ್ಲಿ ಮುಡಿಗೇರುತ್ತಾ?: ದಿನದಿಂದ ದಿನಕ್ಕೆ ಗಿಲ್ಲಿಯ ಜನಪ್ರಿಯತೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಈ ಬಾರಿಯ ಬಿಗ್ ಬಾಸ್ ಟ್ರೋಫಿ ಗಿಲ್ಲಿ ಕೈ ಸೇರುತ್ತಾ? 10 ಲಕ್ಷ ಅಭಿಮಾನಿಗಳ ಪ್ರೀತಿ ಅವರನ್ನು ವಿಜೇತ ಪೀಠದಲ್ಲಿ ಕೂರಿಸುತ್ತಾ? ಎಂಬ ಪ್ರಶ್ನೆಗಳು ಈಗ ಎಲ್ಲರ ಮನಸ್ಸಲ್ಲೂ ಕಾಡುತ್ತಿವೆ. ಉತ್ತರಕ್ಕಾಗಿ ಇನ್ನೂ ಕೆಲವೇ ವಾರಗಳು ಕಾಯಬೇಕಿದೆ.