SK Home Ad
Home ಸಿನಿ ಮಿಲ್ಸ್ ಅರಮನೆಯಿಂದ ಫ್ಲೈಟ್‌ಗೆ ಬದಲಾದ ಬಿಗ್ ಬಾಸ್ ಮನೆ: ಈ ಬಾರಿ ಜಿಯೋ ಹಾಟ್‌ಸ್ಟಾರ್‌ನಲ್ಲಿ 24×7 ಉಚಿತ...

ಅರಮನೆಯಿಂದ ಫ್ಲೈಟ್‌ಗೆ ಬದಲಾದ ಬಿಗ್ ಬಾಸ್ ಮನೆ: ಈ ಬಾರಿ ಜಿಯೋ ಹಾಟ್‌ಸ್ಟಾರ್‌ನಲ್ಲಿ 24×7 ಉಚಿತ ಲೈವ್!

0
17

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ತನ್ನ 13ನೇ ಸೀಸನ್‌ಗೆ ಸಜ್ಜಾಗಿದ್ದು, ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸದ್ಯಕ್ಕೆ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕೊನೆಯ ಹಂತ ನಡೆಯುತ್ತಿದ್ದು, ಸೆಪ್ಟೆಂಬರ್ 6 ರಿಂದ ಈ ಬಾರಿಯ ಸೀಸನ್ 13 ಅಧಿಕೃತವಾಗಿ ಚಾಲನೆ ಪಡೆಯಲಿದೆ. ಬಾನಿಜೆ ಏಷ್ಯಾ ಮತ್ತು ಎಂಡೆಮೋಲ್ ಶೈನ್ ಇಂಡಿಯಾ ಜಂಟಿಯಾಗಿ ಈ ಶೋ ನಿರ್ಮಿಸುತ್ತಿವೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸತತ 13ನೇ ಸೀಸನ್‌ಗೆ ನಿರೂಪಕರಾಗಿ ಮುಂದುವರಿಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಈ ಬಾರಿಯ ಶೋ ಸಂಪೂರ್ಣವಾಗಿ ‘ಫ್ಲೈಟ್’ ಥೀಮ್‌ನೊಂದಿಗೆ ಮೂಡಿಬರಲಿರುವುದು ಪ್ರಮುಖ ಆಕರ್ಷಣೆಯಾಗಿದೆ. ಬಿಡುಗಡೆಯಾಗಿರುವ ಪ್ರೋಮೋ ಮಾತ್ರವಲ್ಲದೆ, ಇಡೀ ‘ಬಿಗ್ ಬಾಸ್’ ಮನೆಯ ವಿನ್ಯಾಸವನ್ನು ಕೂಡ ವಿಮಾನದ ಮಾದರಿಯಲ್ಲಿಯೇ ಸಿದ್ಧಪಡಿಸಲಾಗಿದೆ. ಕಳೆದ ಸೀಸನ್‌ನಲ್ಲಿ ‘ಅರಮನೆ’ ಥೀಮ್ ಇದ್ದರೆ, ಈ ಬಾರಿ ವೀಕ್ಷಕರಿಗೆ ವಿಮಾನ ಪ್ರಯಾಣದ ಅನುಭವ ನೀಡಲು ಬಿಗ್ ಬಾಸ್ ಸಜ್ಜಾಗಿದೆ.

ಮತ್ತೊಂದು ಪ್ರಮುಖ ಬದಲಾವಣೆಯೆಂದರೆ, ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಲಾಗಿದೆ. ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಮೂಲಕ ಆಯ್ಕೆಯಾಗುವ 3 ಸಾಮಾನ್ಯ ಸ್ಪರ್ಧಿಗಳು ಮನೆ ಪ್ರವೇಶಿಸಲಿದ್ದಾರೆ. ಹೊಸ ಮುಖಗಳು, ವಿಭಿನ್ನ ಸವಾಲುಗಳು ಮತ್ತು ಅನಿರೀಕ್ಷಿತ ಟ್ವಿಸ್ಟ್‌ಗಳೊಂದಿಗೆ ಸೀಸನ್ 13 ಹೆಚ್ಚು ರೋಚಕವಾಗಿರಲಿದೆ.

ಇದಷ್ಟೇ ಅಲ್ಲದೆ… ವೀಕ್ಷಕರು ಮನೆಯ ಪ್ರತಿಯೊಂದು ಕ್ಷಣವನ್ನೂ ‘ಜಿಯೋ ಹಾಟ್‌ಸ್ಟಾರ್’ ಆ್ಯಪ್‌ನಲ್ಲಿ 24×7 ಉಚಿತವಾಗಿ ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.

ಪ್ರಸಾರ ಸಮಯ: ‘ಬಿಗ್ ಬಾಸ್ ಕನ್ನಡ 13’ ಗ್ರ್ಯಾಂಡ್ ಪ್ರೀಮಿಯರ್ ಸೆಪ್ಟೆಂಬರ್ 6 ರಂದು ಸಂಜೆ 7:00 ಗಂಟೆಗೆ ಪ್ರಸಾರವಾಗಲಿದೆ. ದಿನನಿತ್ಯದ ಸಂಚಿಕೆಗಳು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಪ್ರಸಾರವಾದರೆ, ಸುದೀಪ್ ನಡೆಸಿಕೊಡುವ ವಾರಾಂತ್ಯದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಗಳು ಶನಿವಾರ ಮತ್ತು ಭಾನುವಾರ ರಾತ್ರಿ 9:00ಕ್ಕೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗಲಿದೆ.