SK Home Ad
Home ಸಿನಿ ಮಿಲ್ಸ್ BBK13 Agnipariksha: 15 ಸ್ಪರ್ಧಿಗಳಲ್ಲಿ 5 ಜನ ಮನೆಗೆ; ಸೀಸನ್ 13ರ ಗ್ರ್ಯಾಂಡ್ ಫಿನಾಲೆಗೆ 3+1...

BBK13 Agnipariksha: 15 ಸ್ಪರ್ಧಿಗಳಲ್ಲಿ 5 ಜನ ಮನೆಗೆ; ಸೀಸನ್ 13ರ ಗ್ರ್ಯಾಂಡ್ ಫಿನಾಲೆಗೆ 3+1 ಎಂಟ್ರಿ ಕ್ಷಣಗಣನೆ!

0
13

BBK13 Agnipariksha: ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ರ ಆರಂಭಕ್ಕೆ ವೇದಿಕೆ ಸಂಪೂರ್ಣ ಸಜ್ಜಾಗಿದೆ. ಈ ಬಾರಿ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ‘ಅಗ್ನಿಪರೀಕ್ಷೆ’ ಎಂಬ ವಿನೂತನ ಮತ್ತು ರೋಚಕ ಸ್ಪರ್ಧೆಯನ್ನು ಪರಿಚಯಿಸಲಾಗಿತ್ತು. ಬರೋಬ್ಬರಿ 60 ಸ್ಪರ್ಧಿಗಳಿಂದ ಆರಂಭವಾದ ‘ಅಗ್ನಿಪರೀಕ್ಷೆ’ ಈಗ ಕೊನೆಯ ಹಂತದಲ್ಲಿದೆ. ಹಾಗೇ ಪ್ರೇಕ್ಷಕರ ವೋಟಿಂಗ್ ಹಾಗೂ ಜ್ಯೂರಿ ತೀರ್ಪಿನ ಆಧಾರದ ಮೇಲೆ ಪ್ರಮುಖ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿದೆ.

ಆರಂಭಿಕ ಹಂತದಲ್ಲಿ ಆಯ್ಕೆಯಾಗಿದ್ದ 15 ಪ್ರಮುಖ ಸ್ಪರ್ಧಿಗಳ ಪೈಕಿ ವೋಟಿಂಗ್ ಕೊರತೆಯಿಂದಾಗಿ 5 ಜನ ದೊಡ್ಮನೆಯ ಪಯಣದಿಂದ ಹೊರಬಿದ್ದಿದ್ದಾರೆ. ಪ್ರಿಯಾಂಕಾ, ದೀಕ್ಷಿತ್‌, ಅನನ್ಯಾ, ದೀಪಕ್ ಹಾಗೂ ರೋಷಿಣಿ ಅತಿ ಕಡಿಮೆ ವೋಟ್ ಪಡೆದು ಅಗ್ನಿಪರೀಕ್ಷೆಯ ಹಂತದಲ್ಲೇ ಔಟ್ ಆಗಿದ್ದು, ಇದೀಗ ಅಂತಿಮವಾಗಿ 10 ಸ್ಪರ್ಧಿಗಳು ಮಾತ್ರ ರೇಸ್‌ನಲ್ಲಿ ಉಳಿದುಕೊಂಡಿದ್ದಾರೆ.

ಈ 10 ಜನರ ಪೈಕಿ ವೀಕ್ಷಕರ ಅತಿ ಹೆಚ್ಚು ವೋಟಿಂಗ್ ಗಳಿಸುವ ‘ಸಾಮಾನ್ಯ ಜನ’ (ಕಾಮನ್ ಮ್ಯಾನ್) ವಿಭಾಗದ ಅತ್ಯುತ್ತಮ 3 ಸ್ಪರ್ಧಿಗಳು ‘ ಮತ್ತು ಜ್ಯೂರಿಗಳ ಇಚ್ಛೆಯಿಂದ ಮತ್ತೊಬ್ಬ ಸ್ಪರ್ಧಿಯನ್ನು ಅಂದ್ರೆ ಒಟ್ಟು 4 ಕಾಮನ್ ಮ್ಯಾನ್‌ಗಳನ್ನು ವಿಐಪಿ ಪ್ಯಾಸೆಂಜರ್ಸ್’ ಆಗಿ ನೇರವಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲಿದ್ದಾರೆ. ಹಾಗೇ ಉಳಿದ ಅಭ್ಯರ್ಥಿಗಳಿಗೆ ಜ್ಯೂರಿ ಅಭಿಪ್ರಾಯದ ಆಧಾರದ ಮೇಲೆ ಸಿಗುವ ಸುವರ್ಣ ಅವಕಾಶ ಯಾರಿಗೆ ಲಭ್ಯವಾಗಲಿದೆ ಎನ್ನುವುದು ಕುತೂಹಲವಾಗಿದೆ.

ಒಟ್ಟಾರೆಯಾಗಿ.. ಸೆಪ್ಟೆಂಬರ್ 5ರ ಸಂಜೆ 7 ಗಂಟೆಗೆ ‘ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆ’ ಪ್ರಸಾರವಾಗಲಿದ್ದು, ದೊಡ್ಮನೆಗೆ ಎಂಟ್ರಿ ಕೊಡುವ ಆ ‘ಟಾಪ್ 3+1’ ಸ್ಪರ್ಧಿಗಳು ಯಾರೆಂಬುದು ಅಧಿಕೃತವಾಗಿ ಹೊರಬೀಳಲಿದೆ. ಭಾನುವಾರ ಸಂಜೆ 7 ಗಂಟೆಗೆ ಬಿಗ್ ಬಾಸ್ ಸೀಸನ್ 13ರ ಗ್ರ್ಯಾಂಡ್ ಟೇಕಾಫ್ ನಡೆಯಲಿದ್ದು, ಆಯ್ಕೆಯಾದ ಸಾಮಾನ್ಯ ಸ್ಪರ್ಧಿಗಳ ಜೊತೆಗೆ ಯಾವೆಲ್ಲಾ ಸೆಲೆಬ್ರಿಟಿಗಳು ಮನೆ ಪ್ರವೇಶಿಸಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬೀಳಲಿದೆ.