ವಿಮೆನ್ಸ್ ಆಫ್ ದ ಯೂನಿವರ್ಸ್ ಕಿರೀಟ ಗೆದ್ದ ಕರ್ನಾಟಕದ ನಿರ್ಮಾಪಕಿ

0
17

ಚೀನಾ: ದೇಶ ಮತ್ತು ರಾಜ್ಯಕ್ಕೆ ಹೆಮ್ಮೆಯ ಕ್ಷಣ—ಚೀನಾದಲ್ಲಿ ನಡೆದ 2025ರ Women of the Universe ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಅಮೃತ ವಿಜಯ ಟಾಟಾ ಅವರು ಪ್ರತಿಷ್ಠಿತ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಮೃತ ವಿಜಯ ಟಾಟಾ ಅವರು ಮೂಲತಃ ಪಂಜಾಬಿಗೆ ಸೇರಿದವರಾದರೂ, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿ ಕರ್ನಾಟಕವನ್ನು ಪ್ರತಿನಿಧಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿದ್ದಾರೆ. ಈ ಜಯದ ಮೊದಲ ಹೆಜ್ಜೆಯೇ ಭಾರತದ Mrs. India ಸ್ಪರ್ಧೆಯಲ್ಲಿ ಅವರು ಪಡೆದ ವಿಜಯ. Mrs. India ವೇದಿಕೆಯಲ್ಲಿ ಸಾಧನೆ ಮಾಡಿದ ನಂತರ, ಅವರು Women of the Universe 2025 ಸ್ಪರ್ಧೆಗೆ ಆಯ್ಕೆಯಾಗಿದ್ದರು.

ಚಲನಚಿತ್ರ ಕ್ಷೇತ್ರಕ್ಕೂ ಪಾದಾರ್ಪಣೆ: ಸೌಂದರ್ಯ ಕ್ಷೇತ್ರದಲ್ಲಿ ಮಾತ್ರ ಅಲ್ಲದೆ, ಕಲೆ ಮತ್ತು ಉತ್ಪಾದನಾ ಕ್ಷೇತ್ರದಲ್ಲಿಯೂ ತಮ್ಮ ಗುರುತನ್ನು ಮೂಡಿಸುತ್ತಿರುವ ಅಮೃತವರು Amrutha Cine Craft ಎಂಬ ಪ್ರೊಡಕ್ಷನ್ ಹೌಸ್ ಸ್ಥಾಪಿಸಿದ್ದಾರೆ. ಈ ಸಂಸ್ಥೆಯಡಿ ಈಗಾಗಲೇ ಹಲವಾರು ಕನ್ನಡ ಸಿನೆಮಾಗಳ ನಿರ್ಮಾಣ ಕಾರ್ಯ ಆರಂಭವಾಗಿದೆ.

ಕನ್ನಡದಲ್ಲಿ ಚಲನಚಿತ್ರ ನಿರ್ಮಾಣ ಮಾಡುತ್ತಿರುವುದು ಹಾಗೂ ಜಾಗತಿಕ ಮಟ್ಟದಲ್ಲಿ ಕಿರೀಟ ಗೆದ್ದಿರುವುದು, ಕರ್ನಾಟಕದ ಮಹಿಳಾ ಶಕ್ತಿಯನ್ನೂ ಸಂಸ್ಕೃತಿಯನ್ನೂ ಪ್ರತಿಬಿಂಬಿಸುವಂತಹ ಸಾಧನೆಯಾಗಿದೆ ಎಂದು ಹಲವರು ಪ್ರಶಂಸಿಸಿದ್ದಾರೆ.

ಕರ್ನಾಟಕದ ಕೀರ್ತಿಯನ್ನು ಜಗತ್ತಿಗೆ ತೋರಿಸಿದ ಮಹಿಳೆ: ಚೀನಾದಲ್ಲಿ ನಡೆದ Women of the Universe ವೇದಿಕೆಯಲ್ಲಿ ಅಮೃತ ವಿಜಯ ಟಾಟಾ ಅವರು ಮೈತ್ರಿ, ಸಾಂಸ್ಕೃತಿಕ ಅರ್ಥೈಸಿಕೆ ಮತ್ತು ಮಹಿಳಾ ಶಕ್ತೀಕರಣ ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ. ಪರಂಪರೆ ಮತ್ತು ಆಧುನಿಕತೆಯ ಮಿಶ್ರಣವಾಗಿರುವ ಇಂಡೋ-ಕರ್ನಾಟಕ ಸಂಸ್ಕೃತಿ ಪ್ರದರ್ಶನ ಜ್ಯೂರಿ ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಅಮೃತ ವಿಜಯ ಟಾಟಾ ಹೇಳಿಕೆ: ಈ ಕಿರೀಟ ನನ್ನದಲ್ಲ, ಇದು ಭಾರತದ ಹೆಮ್ಮೆ ಮತ್ತು ಕರ್ನಾಟಕದ ಗೌರವ. ಮಹಿಳೆಯರು ಕನಸನ್ನು ನೋಡಬೇಕು, ಮತ್ತು ಅದನ್ನು ಸಾಧಿಸಲು ಧೈರ್ಯ ಹೊಂದಬೇಕು ಎಂದಿದ್ದಾರೆ

ರಾಜ್ಯದಿಂದ ಅಭಿನಂದನೆ: ರಾಜ್ಯದ ರಾಜಕೀಯ, ಚಿತ್ರರಂಗ ಮತ್ತು ಫ್ಯಾಷನ್ ಕ್ಷೇತ್ರದ ಗಣ್ಯರು ಅಮೃತ ವಿಜಯ ಟಾಟಾ ಅವರನ್ನು ಅಭಿನಂದಿಸಿದ್ದು, “ಇದು ಕರ್ನಾಟಕದ ಮಹಿಳಾ ಶಕ್ತಿ ಮತ್ತು ಸಾಮರ್ಥ್ಯದ ಜಾಗತಿಕ ಗುರುತಾಗಿದೆ” ಎಂದು ಕೊಂಡಾಡಿದ್ದಾರೆ.

Previous articleಬೆಂಗಳೂರಿನ ಸಿನಿಮೀಯ ಲೂಟಿ: 7 ಕೋಟಿ ದರೋಡೆಗೆ ಚೆನ್ನೈನಲ್ಲಿ ರೋಚಕ ಅಂತ್ಯ!
Next articleಗಂಭೀರ್ ‘ನಂ.3’ ಪ್ರಯೋಗ: ಟೀಂ ಇಂಡಿಯಾದಲ್ಲಿ ಗೊಂದಲದ ಗೂಡು!

LEAVE A REPLY

Please enter your comment!
Please enter your name here