ಬೆಂಗಳೂರು: ನಟ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರ ‘45’ ಇದೀಗ ಮತ್ತೊಮ್ಮೆ ಸಂಚಲನ ಮೂಡಿಸಿದೆ. ಚಿತ್ರದ ಪ್ರಥಮ ಪ್ರಚಾರಗೀತೆ ‘Afro ಟಪಾಂಗ್’ ರಿಲೀಸ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.
’45’ ಚಿತ್ರವನ್ನು ಅರ್ಜುನ್ ಜನ್ಯ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದರೆ, ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ‘Afro ಟಪಾಂಗ್’ ಹಾಡು ಬಿಡುಗಡೆಗೊಂಡ ಕೆಲವೇ ಕ್ಷಣಗಳಲ್ಲಿ ಕಮಾಲ್ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸದ್ದು ಮಾಡುತ್ತಿರುವ ಹಾಡು ಬಹುಬೇಗ ಟ್ರೆಂಡ್ ಆಗಲಿದೆ.
ಹಾಡಿನಲ್ಲಿ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅವರ ನೃತ್ಯ ಶೈಲಿ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದೆ. ಇಬ್ಬರು ಹಿರಿಯ ನಟರು ತಮ್ಮ ಉತ್ಸಾಹದಿಂದ ಯುವ ನಟ ರಾಜ್ ಬಿ ಶೆಟ್ಟಿ ಅವರಿಗೆ ಸ್ಫೂರ್ತಿ ತುಂಬಿ ಅವರನ್ನು ಸ್ಟೆಪ್ ಹಾಕುವಂತೆ ಮಾಡಿದ್ದಾರೆ.
ಈ ಹಾಡಿನಲ್ಲಿ ಆಫ್ರಿಕಾದ ಘೆಟ್ಟೋ ಕಿಡ್ಸ್ ಕೂಡ ನೃತ್ಯಮಾಡಿದ್ದಾರೆ. ಆಫ್ರೋ ಟಪಾಂಗ್ ಸಾಂಗ್ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿದ್ದು ಆಫ್ರಿಕಾದ ಹೆಸರಾಂತ ಡ್ಯಾನ್ಸ್ ಟ್ರೂಮ್‌ನ ಹುಡುಗರೊಂದಿಗೆ ಹಾಡಿನಲ್ಲಿ ಶಿವಣ್ಣ ಹಾಗೂ ಉಪ್ಪಿ ಶೈಲಿಯ ನೃತ್ಯ ಸಹ ಮನಸೂರೆ ಮಾಡಿದೆ. . ಸತ್ಯ ಹೆಗಡೆ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.
ಚಿತ್ರದ ಛಾಯಾಗ್ರಹಣವನ್ನು ಸತ್ಯ ಹೆಗಡೆ ಕೈಗೊಂಡಿದ್ದಾರೆ. ಈಗಾಗಲೇ ಟ್ರೈಲರ್ ಹಾಗೂ ಈ ಹಾಡು ಬಿಡುಗಡೆಗೊಂಡಿರುವ ಹಿನ್ನೆಲೆಯಲ್ಲಿ ‘45’ ಚಿತ್ರಕ್ಕಾಗಿ ಅಭಿಮಾನಿಗಳ ನಿರೀಕ್ಷೆ ಗಗನಕ್ಕೇರಿದೆ. ‘ಲವ ಕುಶ’, ‘ಕಬ್ಬ’, ‘ಪ್ರೀತ್ಸೆ’ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಉಪ್ಪಿ ಮತ್ತು ಶಿವಣ್ಣ ಜೋಡಿ, ಮತ್ತೆ ಒಂದು ಸಲ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.
ಡಿಸೆಂಬರ್ 25 ರಂದು ದೊಡ್ಡಮಟ್ಟದಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, Afro ಟಪಾಂಗ್ ಹಾಡು ಈಗಾಗಲೇ ಅದಕ್ಕೆ ಬಣ್ಣ ತುಂಬಿದೆ.
ಹಾಡು ನೋಡಿ: Afro Tapang Song – 45 Movie


























