ಪ್ರೇಕ್ಷಕರ OTPಗಾಗಿ ನಟ, ನಿರ್ದೇಶಕ ಅನೀಶ್ ಭಾವುಕ ಸಂದೇಶ

0
37

ಬೆಂಗಳೂರು: ಲವ್ OTP ಚಿತ್ರಕ್ಕೆ ರಾಜ್ಯದಾದ್ಯಂತದಿಂದ ಉತ್ತಮ ವಿಮರ್ಶೆಗಳು ಹರಿದುಬರುತ್ತಿದ್ದರೂ, ಪ್ರೇಕ್ಷಕರು ಚಿತ್ರಮಂದಿರದತ್ತ ಮುಖ ಮಾಡದಿರುವುದು ನಟ–ನಿರ್ದೇಶಕ ಅನೀಶ್ ಅವರನ್ನು ತೀವ್ರ ಬೇಸರಕ್ಕೀಡಾಗಿಸಿದೆ. ನಟ, ನಿರ್ದೇಶಕ ಅನೀಶ್ ಬೇಸರ ಹಾಗೂ ಹತಾಶದಿಂದ ಕಣ್ಣೀರಿಟ್ಟ ಅನೀಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವುಕ ವಿಡಿಯೋದೊಂದಿಗೆ ಸಂದೇಶ ಹಂಚಿಕೊಂಡಿದ್ದಾರೆ.

ನವೆಂಬರ್ 14ರಂದು ಕರ್ನಾಟಕದಾದ್ಯಂತ ಬಿಡುಗಡೆಯಾದ ಲವ್ OTP ಚಿತ್ರಕ್ಕೆ ಪ್ರಿಮಿಯರ್ ಶೋನಲ್ಲೇ ಪತ್ರಕರ್ತರಿಂದ ಹಾಗೂ ಪ್ರೇಕ್ಷಕರಿಂದ ಪ್ರಶಂಸೆಯ ಸುರಿಮಳೆ ಬಂದಿತ್ತು. ಚಿತ್ರ ನೋಡಿದ ಪ್ರೇಕ್ಷಕರಿಂದ ಉತ್ತಮ 3.5/5 ರೇಟಿಂಗ್ ಗಳಿಸಿದ ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದರೂ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ನಿರೀಕ್ಷೆಗೆ ತೀರಾ ಕಡಿಮೆಯಾಗಿದೆ.

14 ವರ್ಷಗಳ ಹೋರಾಟ… ಮತ್ತೆ ನಿರಾಸೆ?: ನಟ, ನಿರ್ದೇಶಕ ಅನೀಶ್ ಬೇಸರದಿಂದ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ 14 ವರ್ಷಗಳ ನಿರಂತರ ಶ್ರಮ… ಏನೇ ಸೋಲು ಬಂದರೂ ಕುಗ್ಗದೆ ಕೆಲಸ ಮಾಡುತ್ತಿದ್ದೇನೆ. ನನ್ನ ವೃತ್ತಿ ಜೀವನದ The Best Reviews ಈ ಚಿತ್ರದವು. ಆದರೆ ಯಾಕೆ ಪ್ರೇಕ್ಷಕರು ಥಿಯೇಟರಿಗೂ ಬರ್ತಿಲ್ಲ? ನನಿಂದ ಇನ್ನೇನು ಮಾಡ್ಬೇಕು ಗೊತ್ತಾಗ್ತಿಲ್ಲ…”

ಅವರು ಪ್ರಿಮಿಯರ್ ಶೋನಿಂದ ಹಿಡಿದು ಸಾಮಾನ್ಯ ಪ್ರೇಕ್ಷಕರವರೆಗೆ ಎಲ್ಲರೂ ಚಿತ್ರವನ್ನು ಹೊಗಳಿರುವುದನ್ನು ನೆನಪಿಸಿಕೊಂಡಿದ್ದಾರೆ, ಆದರೂ ಖಾಲಿ ಹಾಲ್‌ಗಳು ಮನಸ್ಸಿಗೆ ನೋವು ತರುತ್ತಿವೆ ಎಂದು ತಿಳಿಸಿದರು. ಅನೀಶ್ ಅವರು ತಮ್ಮ ವಿಡಿಯೋದಲ್ಲಿ ಭಾವುಕರಾಗಿ ಮನವಿ ಮಾಡಿದ್ದಾರೆ: “ಇವತ್ತು, ನಾಳೆ — ಈ ಎರಡು ದಿನಗಳಲ್ಲಿ ಪ್ರೇಕ್ಷಕರು ಕೈ ಹಿಡಿದರೆ ಮುಂದಿನ ದಾರಿ ಇದೆ. ಇಲ್ಲದಿದ್ದರೆ, ಇಲ್ಲಿಯೇ ನನ್ನ ಸಿನಿಮಾ ಪ್ರಯತ್ನವನ್ನು ನಿಲ್ಲಿಸುತ್ತೇನೆ ಎಂದಿದ್ದಾರೆ.

ಅವರ ಕಣ್ಣೀರು ಬೇಸರಕ್ಕಾಗಿ ಅಲ್ಲ, ಹಾಗೂ ಪ್ರಚೋದನೆಗಾಗಿ ಅಲ್ಲ… ಸಿಂಪತಿಹಾಗಿಯೂ ಅಲ್ಲ.. ಅವರ ಅಂತರಾಳದ ನಿಜವಾದ ನೋವು ಎಂದು ಸ್ಪಷ್ಟಪಡಿಸಿದ್ದಾರೆ. ಅನೀಶ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವಾರು ಸಿನಿಪ್ರೇಮಿಗಳು ಹಾಗೂ ಸಿನಿ ತಾರೆಗಳು ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ.

ಇದೀಗ, ಆ ಚಿತ್ರಕ್ಕೆ ಪ್ರೇಕ್ಷಕರು ಕೈ ಜೋಡಿಸುವರೇ ಎಂಬ ನಿರೀಕ್ಷೆಯಲ್ಲಿ ಸಂಪೂರ್ಣ ತಂಡ ಕಂಡುಬರುತ್ತಿದೆ.

Previous articleKSRTC ಬಸ್ ಹರಿದು 2 ವರ್ಷದ ಬಾಲಕಿ ದುರ್ಮರಣ
Next articleದಾಂಡೇಲಿ: ನಗರಸಭೆಯ ಬೆಲೆಬಾಳುವ ನಿವೇಶನ ಉಳಿಸಲು ಪೌರಾಯುಕ್ತರ ದಿಟ್ಟ ಹೆಜ್ಜೆ

LEAVE A REPLY

Please enter your comment!
Please enter your name here