Home Advertisement
Home ನಮ್ಮ ಜಿಲ್ಲೆ ಯಾದಗಿರಿ ಮದ್ಯ ಸೇವಿಸಬೇಡ ಎಂದಿದ್ದಕ್ಕೆ ಮಗಳ ಕತ್ತು ಹಿಸುಕಿ ಕೊಲೆಗೈದ ತಾಯಿ

ಮದ್ಯ ಸೇವಿಸಬೇಡ ಎಂದಿದ್ದಕ್ಕೆ ಮಗಳ ಕತ್ತು ಹಿಸುಕಿ ಕೊಲೆಗೈದ ತಾಯಿ

0
266

ಯಾದಗಿರಿ: ಹೆತ್ತ ತಾಯಿಯೇ ತನ್ನ ಮಗಳ ಕತ್ತು ಹಿಸುಕಿ ಕೊಲೆ ಮಾಡಿರುವ ಅಮಾನುಷ ಘಟನೆ ಇಲ್ಲಿಯ ರಾಜೀವ್‌ಗಾಂಧಿ ನಗರದಲ್ಲಿ ನಡೆದಿದೆ.

11 ವರ್ಷದ ಬಾಲಕಿ ಪ್ರತಿಭಾ ಎಂಬಾಕೆ ಮೃತಪಟ್ಟಿದ್ದು ಆಕೆಯ ತಾಯಿಯೇ ಸಾಯಿಸಿದ್ದಾಳೆಂದು ಹೇಳಲಾಗುತ್ತಿದೆ. ತಾಯಿಗೆ ಮದ್ಯ ಸೇವಿಸುವ ಅಭ್ಯಾಸವಿತ್ತು. ಸೋಮವಾರ ಸಂಜೆ ಆಕೆ ಎಂದಿನಂತೆ ಮದ್ಯ ಸೇವಿಸಿ ಮನೆಗೆ ಬಂದಿದ್ದಳು. ಇದನ್ನು ನೋಡಿದ ಮಗಳು ತನ್ನ ತಾಯಿಯನ್ನು ಈ ಕುರಿತು ಪ್ರಶ್ನಿಸಿದ್ದೇ ಇಬ್ಬರ ನಡುವೆ ಜಗಳ ನಡೆದಿದೆ.

ಈ ವೇಳೆ ಪಾನಮತ್ತಳಾಗಿದ್ದ ತಾಯಿ ಆಕ್ರೋಶಗೊಂಡು ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.