Home Advertisement
Home ನಮ್ಮ ಜಿಲ್ಲೆ ಯಾದಗಿರಿ ಅಜ್ಞಾತ ಸ್ಥಳದಿಂದ ಮಲ್ಲಿಕಾರ್ಜುನ ಮುತ್ಯಾ ವಿಡಿಯೋ ರಿಲೀಸ್

ಅಜ್ಞಾತ ಸ್ಥಳದಿಂದ ಮಲ್ಲಿಕಾರ್ಜುನ ಮುತ್ಯಾ ವಿಡಿಯೋ ರಿಲೀಸ್

0
35

ಯಾದಗಿರಿ: ಪೋಕ್ಸೋ ಕೇಸ್​ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯ ಪರಾರಿಯಾಗಿರುವ ಶಹಾಪುರ ತಾಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಮುತ್ಯಾ, “ಶ್ರೀಮಠದ ಭಕ್ತಾದಿಗಳೇ ಇದು ಆತಂಕ ಪಡುವ ವಿಷಯವೇ ಅಲ್ಲ, ಯಾವುದೇ ಆತಂಕ ಪಡಬೇಡಿ, ನಾನು ಇಲ್ಲೇ ಲೋಕಲ್ ಇದ್ದೀನಿ, ಮಠದಲ್ಲಿ ಸಾಮೂಹಿಕ ಮದುವೆ ಕಾರ್ಯಕ್ರಮ ಇದ್ದ ಕಾರಣ ಕಾರ್ಡ್ ಕೊಡಲು ಬಂದಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

ʼಪೊಲೀಸ್ ಸಿಬ್ಬಂದಿ ಕೇಳಿರುವ ಬಗ್ಗೆ ತಿಳಿದಿದೆ. ಖಂಡಿತ ಪೊಲೀಸ್​ ಅಧಿಕಾರಿಗಳು ಯಾವಾಗ ಬಾ ಅಂತಾರೆ ಆಗ ನಾನು ಹೋಗಲು ಸಿದ್ಧನಿದ್ದೇನೆ. ಈ ವಿಷಯದ ಬಗ್ಗೆ ಭಕ್ತರು ಆತಂಕ ಪಡುವ ಅಗತ್ಯವಿಲ್ಲ, ಯಾರೂ ಆತಂಕಪಡಬೇಡಿ ಎಂದು ಹೇಳಿರುವ ವಿಡಿಯೋವನ್ನು ಮುತ್ಯಾ ಬಿಡುಗಡೆ​ ಮಾಡಿದ್ದಾರೆ.

ಘಟನೆ ಹಿನ್ನಲೆ: ಅಪ್ರಾಪ್ತ ಬಾಲಕಿ ಜತೆ ಅನುಚಿತ ವರ್ತನೆ ತೋರಿದ ಹಿನ್ನಲೆಯಲ್ಲಿ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಗೋಗಿ ಪೊಲೀಸ್ ಠಾಣೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೂರು ನೀಡಿದ್ದು, ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ.

ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿಜಯ್-ರಶ್ಮಿಕಾ: ಹನಿಮೂನ್‌ಗೆ ಈ ಜೋಡಿ ಆಯ್ದುಕೊಂಡ ತಾಣ ಯಾವುದು ಗೊತ್ತಾ?

7 ವರ್ಷದ ಬಾಲಕಿಯ ಜೊತೆ ಮಲ್ಲಿಕಾರ್ಜುನ ಮುತ್ಯಾ ಅನುಚಿತವಾಗಿ ವರ್ತನೆ ತೋರಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಎಲ್ಲಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿ, ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿತ್ತು.

Previous articleವೈವಾಹಿಕ ಜೀವನಕ್ಕೆ ಕಾಲಿಟ್ಟ ವಿಜಯ್-ರಶ್ಮಿಕಾ: ಹನಿಮೂನ್‌ಗೆ ಈ ಜೋಡಿ ಆಯ್ದುಕೊಂಡ ತಾಣ ಯಾವುದು ಗೊತ್ತಾ?
Next articleʻನಂದಗೋಕುಲʼ ಧಾರಾವಾಹಿಗೆ ಹಿರಿ ಸೊಸೆ ಪ್ರಿಯಾ ಎಂಟ್ರಿ: ನಂದಕುಮಾರ್ ಮನೆಯಲ್ಲಿ ಶುರುವಾಗಲಿದೆಯೇ ವಾರಗಿತ್ತಿಯರ ಮುನಿಸು?