ಉತ್ತರ ಕನ್ನಡ: ಸೆಲ್ಫಿ ಹುಚ್ಚಿಗೆ ಪ್ರಾಣ ತೆತ್ತ ಪ್ರವಾಸಿಗ

0
36

ಗೋಕರ್ಣ: ಸಮುದ್ರದ ಅಂಚಿನ ಕಲ್ಲುಬಂಡೆಯ ಮೇಲೆ ನಿಂತು ಸೆಲ್ಫಿ ಫೋಟೋ ತೆಗೆಯಲು ಹೋದ ಪ್ರವಾಸಿಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಓಂ ಕಡಲತೀರದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

ಶಿವಮೊಗ್ಗದ ಅಸ್ಲಾಂ (45) ಮೃತ ವ್ಯಕ್ತಿ. ಒಟ್ಟು 10 ಜನರು ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು, ಬಂಡೆಯ ಮೇಲೆ ನಿಂತು ಫೋಟೋ ತೆಗೆಯುವ ವೇಳೆ ಈ ಅವಘಡ ನಡೆದಿದೆ. ಜೀವರಕ್ಷಕ ಸಿಬ್ಬಂದಿ ಅಸ್ಲಾಂ ದೇಹವನ್ನು ದಡಕ್ಕೆ ತಂದಿದ್ದು, ಅಷ್ಟರಲ್ಲೇ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.

ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಮುದ್ರದಂಚಿನ ಬಂಡೆಯ ಮೇಲೆ ನಿಲ್ಲದಂತೆ ನಾಮಫಲಕ ಅಳವಡಿಸಿ, ಅಪಾಯದ ಗುರುತು ಹಾಕಿದರು ಸಹ ಪ್ರವಾಸಿಗರು ಇದನ್ನ ಕಡೆಗಣಿಸಿ ಹುಚ್ಚಾಟ ಮೆರೆದು ಪ್ರಾಣ ಕಳೆದುಕೊಳ್ಳುತ್ತಿರುವುದು ದುರಂತವಾಗಿದೆ.

Previous articleಕಾಂತಾರ ನೋಡಲು ಇಡೀ ಥಿಯೇಟರ್‌ ಬುಕ್ ಮಾಡಿದ ಮಾಜಿ ಸಂಸದ
Next articleಸಿಎಂ ಸಿದ್ದರಾಮಯ್ಯ ಗೃಹಪ್ರವೇಶ: ಯಾರಿಗೂ ಆಹ್ವಾನವಿಲ್ಲ!

LEAVE A REPLY

Please enter your comment!
Please enter your name here