Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಉತ್ತರ ಕನ್ನಡ ರೈತರಿಗೆ ಡಬಲ್ ಲಾಭ: ಕಬ್ಬಿನ ಪ್ರೋತ್ಸಾಹ ಧನ ಜಮೆ

ಉತ್ತರ ಕನ್ನಡ ರೈತರಿಗೆ ಡಬಲ್ ಲಾಭ: ಕಬ್ಬಿನ ಪ್ರೋತ್ಸಾಹ ಧನ ಜಮೆ

0
102

ದಾಂಡೇಲಿ (ಉತ್ತರ ಕನ್ನಡ): ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸರ್ಕಾರದಿಂದ ಮಹತ್ವದ ಆರ್ಥಿಕ ನೆರವು ದೊರೆತಿದೆ. ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ₹50ರಂತೆ ಪ್ರೋತ್ಸಾಹ ಧನ ನೀಡಲು ಸರ್ಕಾರ ಆದೇಶಿಸಿದ್ದು, ಜೊತೆಗೆ ಸಂಬಂಧಿತ ಸಕ್ಕರೆ ಕಾರ್ಖಾನೆಗಳೂ ತಮ್ಮ ಭಾಗದಿಂದ ಪ್ರತಿ ಮೆಟ್ರಿಕ್ ಟನ್‌ಗೆ ₹50 ಹೆಚ್ಚುವರಿ ಪಾವತಿಸಬೇಕೆಂದು ಸೂಚಿಸಲಾಗಿದೆ. ಇದರಿಂದ ಒಟ್ಟು ಪ್ರತಿ ಟನ್‌ಗೆ ₹100 ರೈತರಿಗೆ ಲಭಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಕಬ್ಬು ಬೆಳೆದ ರೈತರಿಗೆ ಈ ಯೋಜನೆಯ ಪ್ರಯೋಜನ ನೇರವಾಗಿ ಲಭಿಸಿದ್ದು, ದಿ.15 ಫೆಬ್ರವರಿ 2026 ರವರೆಗೆ ಅರೆದ ಕಬ್ಬಿನ ಪ್ರಮಾಣಕ್ಕೆ ಸಂಬಂಧಿಸಿದಂತೆ ₹5,57,39,531 ಹಾಗೂ ನಂತರದ ಅವಧಿಗೆ ₹59,055 ಹಣ ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಒಟ್ಟು 11,15,971.72 ಮೆಟ್ರಿಕ್ ಟನ್ ಕಬ್ಬು ಸರಬರಾಜು ಮಾಡಿದ್ದ 14,082 ರೈತರಿಗೆ ಸರ್ಕಾರವು ₹5,57,98,586 ಮೊತ್ತವನ್ನು ಬಿಡುಗಡೆ ಮಾಡಿದೆ. ಅದೇ ಪ್ರಮಾಣದ ಹಣವನ್ನು ಕಾರ್ಖಾನೆ ತನ್ನ ಪಾಲಿನಿಂದ ಪಾವತಿಸಿದ್ದು, ಒಟ್ಟಾರೆ ₹11,15,97,172 ಮೊತ್ತವನ್ನು ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಪ್ರಕಟಣೆ ನೀಡಿದ್ದು, ಕಬ್ಬು ಸರಬರಾಜು ಮಾಡಿದ ರೈತರು ತಮ್ಮ ಖಾತೆಗಳಲ್ಲಿ ಹಣ ಜಮೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.