Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಸಂಯುಕ್ತ ಕರ್ನಾಟಕದ ಉಳವಿ ಜಾತ್ರೆ ವಿಶೇಷ ಪುರವಣಿ ಬಿಡುಗಡೆ

ಸಂಯುಕ್ತ ಕರ್ನಾಟಕದ ಉಳವಿ ಜಾತ್ರೆ ವಿಶೇಷ ಪುರವಣಿ ಬಿಡುಗಡೆ

0
337

ಉತ್ತರ ಕನ್ನಡ(ದಾಂಡೇಲಿ): ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿಯ ಶ್ರೀ ಚೆನ್ನಬಸವೇಶ್ವರ ಜಾತ್ರೆಯ ಕುರಿತು ಸಂಯುಕ್ತ ಕರ್ನಾಟಕ ಪ್ರಕಟಿಸಿದ ವಿಶೇಷ ಪುರವಣಿಯನ್ನು ರಥೋತ್ಸವದಂದು ಉಳವಿ ಶ್ರೀ ಚೆನ್ನಬಸವೇಶ್ವರ ಟ್ರಸ್ಟ್ ಕಮಿಟಿಯಿಂದ ಅಧ್ಯಕ್ಷ ಸಂಜಯ ಕಿತ್ತೂರು ಲೋಕಾರ್ಪಣೆಗೊಳಿಸಿದರು.

ಸಂಯುಕ್ತ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಷಣ್ಮುಖ ಕೋಳಿವಾಡ, ಜಾಹೀರಾತು ವ್ಯವಸ್ಥಾಪಕರಾದ ವಿಘ್ನೇಶ ಭಟ್ಟ, ಹಿರಿಯ ವರದಿಗಾರ ಎನ್. ಜಯಚಂದ್ರನ್, ಜಿಲ್ಲಾ ಜಾಹೀರಾತು ಪ್ರತಿನಿಧಿ ಚಂದ್ರಶೇಖರ ನಾವಳ್ಳಿ, ಪಾಂಡುರಂಗ ಪಟಗಾರ, ಉಳವಿ ಚೆನ್ನಬಸವೇಶ್ವರ ಟ್ರಸ್ಟ್‌ನ ಪದಾಧಿಕಾರಿಗಳಾದ ಪ್ರಕಾಶ ಕಿತ್ತೂರು, ಬಿ.ಸಿ. ಉಮಾಪತಿ, ವೀರೇಶ ಕಂಬಳಿ, ಅಶ್ವಿನ್ ಕೊತಂಬರಿ, ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಮೊಕಾಶಿ ಹಾಗೂ ಭಕ್ತರು ಇದ್ದರು.

ಈ ವಿಶೇಷ ಪುರವಣಿಯಲ್ಲಿ ಉಳವಿಯ ಇತಿಹಾಸ, ಶರಣರ ಬದುಕಿನ ಮಹತ್ವಗಳ ಕುರಿತಾದ ಮಾಹಿತಿಗಳಿವೆ. ಜಾತ್ರೆಗೆ ಬಂದ ಭಕ್ತರಿಗೆ ವಿಶೇಷ ಪುರವಣಿಯನ್ನು ವಿತರಿಸಲಾಯಿತು.