ಉತ್ತರ ಕನ್ನಡ: ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕ ಲಕ್ಷಾಂತರ ಅಭಿಮಾನಿಗಳ ಪ್ರೀತಿಯನ್ನು ಗಳಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೆರೆಹೊಸಳ್ಳಿಯ ಲಕ್ಷ್ಮಿ ನಾಯ್ಕ (93) ನಿಧನರಾದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಮೃತಪಟ್ಟಿದ್ದಾರೆ. ಅವರ ಮೊಮ್ಮಗ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಸೂರಜ್ ಜತೆಗೆ ರೀಲ್ಸ್ ಮಾಡುತ್ತ ರಾಜ್ಯಾದ್ಯಂತ ಅಭಿಮಾನಿಗಳ ಮೆಚ್ಚಿಗೆ ಗಳಿಸಿದ್ದರು.
ರೀಲ್ಸ್ ಅಜ್ಜಿ ಎಂದೇ ಹೆಸರು ಪಡೆದಿದ್ದ ಲಕ್ಷ್ಮಿ ಅವರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.























