ಉತ್ತರ ಕನ್ನಡ(ದಾಂಡೇಲಿ): ಸಿದ್ದಾಪುರ ಪಟ್ಟಣದ ಬಸವನಗಲ್ಲಿಯ ಪಿಗ್ಮಿ ಕಲೆಕ್ಟರ್ ಗೀತಾ ಹುಂಡೇಕರ್ ಕೊಲೆ ಮಾಡಿದ ಅಪರಾಧಿ ಅಭಿಜಿತ್‌ಗೆ ಜೀವಾವಧಿ ಶಿಕ್ಷೆ ಹಾಗೂ 32 ಸಾವಿರ ರೂ. ದಂಡ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿರಸಿ ಪೀಠದ ನ್ಯಾಯಾಧೀಶರಾದ ಕಿರಣ್ ಕಿಣಿ ತೀರ್ಪು ನೀಡಿದ್ದಾರೆ.
ಸಿದ್ದಾಪುರದಲ್ಲಿ ಪಿಗ್ಮಿ ಕಲೆಕ್ಟರ್ ಗೀತಾ ಹುಂಡೇಕರ್ ಅವರ ಮನೆಯ ಹಿಂಭಾಗದ ಹಂಚು ತೆಗೆದು ಪ್ರವೇಶಿಸಿ, ಕತ್ತು ಹಿಚುಕಿ ಕೊಲೆ ಮಾಡಿದ್ದ. 2024ರ ಡಿಸೆಂಬರ್ 23ರ ರಾತ್ರಿ ಗೀತಾ ಅವರ ಕೊಲೆ ನಡೆದಿತ್ತು. ಗೀತಾ ಅವರನ್ನು ಕೊಲೆ ಮಾಡಿದ ನಂತರ ಕಿವಿಯೋಲೆ ಹಾಗೂ 21,680 ರೂ. ನಗದು ದೋಚಿ ಪರಾರಿಯಾಗಿದ್ದ.
ಇದನ್ನೂ ಓದಿ: ಶಿರಸಿಯ ಈ ಯುವಕ 25ನೇ ವಯಸ್ಸಿನಲ್ಲೇ ನ್ಯಾಯಾಧೀಶ!
ಸಿದ್ದಾಪುರ ಪೊಲೀಸರ ಅಭಿಜಿತ್ ಗಣೇಶ್ ಮಡಿವಾಳನನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಮಳಗೀಕರ್ ವಾದ ಮಂಡಿಸಿ, ಆರೋಪಿ ಮೇಲಿನ ಅಪರಾಧವನ್ನು ಸಾಬೀತು ಮಾಡಿದ್ದರು.





















