ಗೃಹಲಕ್ಷ್ಮೀ ಹಣದಲ್ಲಿ ಧ್ವಜಸ್ತಂಭ ನಿರ್ಮಾಣ

0
26

ಅಂಕೋಲಾ: ಸರ್ಕಾರದ ಗ್ಯಾರಂಟಿ ಯೋಜನೆಯಡಿ ನೀಡಲಾದ ಗೃಹಲಕ್ಷ್ಮೀ ಹಣವನ್ನು ಒಟ್ಟೂಗೂಡಿಸಿ ಅಂಬುಕೋಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಧ್ವಜಸ್ತಂಭವನ್ನು ನಿರ್ಮಿಸಿ ಕೊಡುವ ಮೂಲಕ ಶ್ಯಾಮಲಾ ತಿಮ್ಮಪ್ಪಗೌಡ ಅವರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲೂಕಾ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಇಒ ಮಂಗಲಲಕ್ಷ್ಮೀ ಪಾಟೀಲ್ ಅವರು ಶ್ಯಾಮಲಾ ಅವರ ಮಾದರಿ ಕಾರ್ಯವನ್ನು ಶ್ಲಾಘಿಸಿದರು.

ಇದನ್ನೂ ಓದಿ: ಮೋದಿಯನ್ನೂ ಟ್ರಂಪ್ ಅಪಹರಿಸುತ್ತಾರಾ? ಚೌಹಾಣ್ ವಿವಾದ

ಬಡಕುಟುಂಬದ ಶ್ಯಾಮಲಾಗೌಡ ಅವರು ಗೃಹಲಕ್ಷ್ಮೀ ಯೋಜನೆಯಡಿ ಸರ್ಕಾರ ನೀಡಿದ ಹಣವನ್ನು ಸ್ವಂತಕ್ಕೆ ಉಪಯೋಗಿಸಿಕೊಳ್ಳದೇ ಸಮಾಜಕ್ಕೆ ವಿನಿಯೋಗಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ ನೇತೃತ್ವದಲ್ಲಿ ಶ್ಯಾಮಲಾ ತಿಮ್ಮಪ್ಪಗೌಡ ದಂಪತಿಯನ್ನು ಸನ್ಮಾನಿಸಿದರು.

Previous articleಮೋದಿಯನ್ನೂ ಟ್ರಂಪ್ ಅಪಹರಿಸುತ್ತಾರಾ? ಚೌಹಾಣ್ ವಿವಾದ