Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ದೇಶಪಾಂಡೆ ಮನವಿಗೆ ಸ್ಪಂದನೆ: ಅಳ್ನಾವರ–ದಾಂಡೇಲಿ DEMU ರೈಲು ಸೇವೆ ಸಮಯ ಪರಿಷ್ಕರಣೆ

ದೇಶಪಾಂಡೆ ಮನವಿಗೆ ಸ್ಪಂದನೆ: ಅಳ್ನಾವರ–ದಾಂಡೇಲಿ DEMU ರೈಲು ಸೇವೆ ಸಮಯ ಪರಿಷ್ಕರಣೆ

0
133

ದಾಂಡೇಲಿ ಪ್ರವಾಸಿಗರಿಗೆ ಸಿಹಿಸುದ್ದಿ: ಬೇಡಿಕೆಗೆ ಸ್ಪಂದಿಸಿದ ರೈಲ್ವೆ ಇಲಾಖೆ – DEMU ರೈಲು ಸೇವೆ ವಾರದ ಆರು ದಿನ ಸಂಚಾರ

ದಾಂಡೇಲಿ: ಅಳ್ನಾವರ–ದಾಂಡೇಲಿ ನಡುವಿನ DEMU ಪ್ರಯಾಣಿಕ ರೈಲು ಸೇವೆ ಆರಂಭವಾಗಿರುವುದು ಈ ಭಾಗದ ಜನರ ಹಲವು ವರ್ಷಗಳ ಕನಸನ್ನು ನನಸಾಗಿಸಿದೆ ಇನ್ನು ಈ ರೈಲು ಭಾನುವಾರವೂ ಸಂಚರಿಸಲಿದೆ ಎಂದು ಆರ್.ವಿ . ದೇಶಪಾಂಡೆ ತಿಳಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ 2026ರ ಫೆಬ್ರವರಿ 9ರಂದು ಆರಂಭವಾದ DEMU ರೈಲು ಸೇವೆಯಿಂದ ಸ್ಥಳೀಯ ಜನತೆ, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಪ್ರಯಾಣದ ಸೌಲಭ್ಯ ಹೆಚ್ಚಲಿದೆ ಎಂದು ಹೇಳಿದ್ದಾರೆ.

ಭಾನುವಾರವೂ ರೈಲು ಸಂಚಾರ: ರೈಲು ಸೇವೆ ಪ್ರಾರಂಭವಾದ ಸಂದರ್ಭದಲ್ಲಿ ನಡೆದ ಲೋಕಾರ್ಪಣೆ ಕಾರ್ಯಕ್ರಮದಲ್ಲಿಯೇ ಭಾನುವಾರವೂ ಈ ರೈಲು ಸಂಚರಿಸುವಂತೆ ರೈಲ್ವೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು, ಈ ಕುರಿತು ಪತ್ರದ ಮೂಲಕವೂ ಮನವಿ ಸಲ್ಲಿಸಲಾಗಿತ್ತು, ದೂರದ ರೈಲುಗಳೊಂದಿಗೆ ಉತ್ತಮ ಸಂಪರ್ಕ ಕಲ್ಪಿಸುವಂತೆ ಬೆಳಿಗ್ಗೆ ಹಾಗೂ ಸಂಜೆ ಸಮಯಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂಬುದನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು, ವಾರದ ಗುರುವಾರವನ್ನು ಹೊರತುಪಡಿಸಿ ಭಾನುವಾರದಂದು ಕೂಡ DEMU ರೈಲು ಸೇವೆಯನ್ನು ಆರಂಭಿಸುವ ಕುರಿತು ಆದೇಶ ಹೊರಡಿಸಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಪ್ರವಾಸಿಗರಿಗೆ ವಿಶೇಷ ಅನುಕೂಲ: ದಾಂಡೇಲಿ ಪ್ರಮುಖ ಪ್ರವಾಸಿ ತಾಣವಾಗಿರುವುದರಿಂದ ವಾರಾಂತ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಭಾನುವಾರವೂ DEMU ರೈಲು ಸಂಚಾರ ಅಗತ್ಯವಿದೆ ಎಂದು ಅವರು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ ರೈಲು ಸೇವೆಯ ವೇಳಾಪಟ್ಟಿಯನ್ನು ಪುನರ್ ಪರಿಶೀಲಿಸಿ, ವಾರದ ಗುರುವಾರವನ್ನು ಹೊರತುಪಡಿಸಿ ಭಾನುವಾರವೂ DEMU ರೈಲು ಸೇವೆ ಸಂಚರಿಸುವಂತೆ ಆದೇಶ ಹೊರಡಿಸಿದೆ.

ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ : ಈ ನಿರ್ಧಾರದಿಂದ ದಾಂಡೇಲಿ ಹಾಗೂ ಅಳ್ನಾವರ ಭಾಗದ ಜನತೆಗೆ ಮಾತ್ರವಲ್ಲದೆ ಉದ್ಯೋಗ, ವಿದ್ಯಾಭ್ಯಾಸ ಹಾಗೂ ಪ್ರವಾಸಕ್ಕಾಗಿ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಮುಂದಿನ ದಿನಗಳಲ್ಲಿ ಈ ರೈಲು ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ತ್ವರಿತ ಕ್ರಮ ಕೈಗೊಂಡ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.