ಲಖ್ನೋ: ಉತ್ತರ ಪ್ರದೇಶ ಸರ್ಕಾರವು ಗ್ರಾಹಕರ ಆರೋಗ್ಯ ಮತ್ತು ಆಹಾರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ನಿರ್ಧಾರ ಕೈಗೊಂಡಿದೆ. 2026ರ ಏಪ್ರಿಲ್ 1ರಿಂದ ರಾಜ್ಯದಲ್ಲಿ ಮಾರಾಟವಾಗುವ ಪ್ರತಿಯೊಂದು ಮೊಟ್ಟೆಯ ಮೇಲೂ ಅದರ ಉತ್ಪಾದನಾ ದಿನಾಂಕ (Laying Date) ಮತ್ತು ಮುಕ್ತಾಯ ದಿನಾಂಕ (Expiry Date) ಮುದ್ರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಈ ಕ್ರಮವು ಆಹಾರದ ಗುಣಮಟ್ಟ ಮತ್ತು ತಾಜಾತನವನ್ನು ಖಚಿತಪಡಿಸಲು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನು ಹೊಸ ನಿಯಮ?: ಪ್ರತಿಯೊಂದು ಮೊಟ್ಟೆಯ ಮೇಲೂ ಉತ್ಪಾದನಾ ದಿನಾಂಕ ಮತ್ತು ಎಕ್ಸ್ಪೈರಿ ದಿನಾಂಕ ಸ್ಪಷ್ಟವಾಗಿ ಮುದ್ರಿಸಬೇಕು, ಕೋಳಿ ಸಾಕಣೆದಾರರು, ಪೂರೈಕೆದಾರರು ಮತ್ತು ವ್ಯಾಪಾರಿಗಳು ಈ ನಿಯಮ ಪಾಲಿಸಬೇಕು ಇದರಿಂದ ಗ್ರಾಹಕರು ಮೊಟ್ಟೆಯ ತಾಜಾತನವನ್ನು ಸುಲಭವಾಗಿ ಗುರುತಿಸಬಹುದಾಗಿದೆ.
ನಿಯಮ ಉಲ್ಲಂಘನೆ ಮಾಡಿದರೆ ಏನು?: ದಿನಾಂಕ ಇಲ್ಲದ ಮೊಟ್ಟೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಹಾಗೂ ಅವುಗಳನ್ನು ನಾಶಪಡಿಸಲಾಗುತ್ತದೆ ಅಥವಾ “ಮಾನವ ಬಳಕೆಗೆ ಯೋಗ್ಯವಲ್ಲ” ಎಂದು ಮುದ್ರೆ ಹಾಕಲಾಗುತ್ತದೆ.
ಈ ಕಟ್ಟುನಿಟ್ಟಿನ ಕ್ರಮವನ್ನು ಮುಕೇಶ್ ಮೆಶ್ರಾಮ್ (ಪಶುಸಂಗೋಪನೆ ಮತ್ತು ಡೈರಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ) ಇತ್ತೀಚಿನ ತಪಾಸಣೆಗಳ ನಂತರ ಘೋಷಿಸಿದ್ದಾರೆ.
ಈ ನಿಯಮವನ್ನು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಮತ್ತು Food Safety and Drug Administration ಇಲಾಖೆಗಳ ನಿರ್ದೇಶನದ ಮೇರೆಗೆ ಜಾರಿಗೆ ತರಲಾಗಿದೆ.
ಸಂಗ್ರಹಣೆ ಕುರಿತು ಮಹತ್ವದ ಮಾಹಿತಿ: ಇನ್ನು ಈ ಕುರಿತಂತೆ ತಜ್ಞರು ಮೊಟ್ಟೆಗಳನ್ನು 30°C ತಾಪಮಾನದಲ್ಲಿ ಸುಮಾರು 2 ವಾರಗಳವರೆಗೆ ಸುರಕ್ಷಿತ, ಫ್ರಿಡ್ಜ್ (2–8°C) ನಲ್ಲಿ 5 ವಾರಗಳವರೆಗೆ ತಾಜಾ ಇರುತ್ತವೆ
ಗ್ರಾಹಕರಿಗೆ ಲಾಭವೇನು?: ಮೊಟ್ಟೆಗಳ ತಾಜಾತನ ತಿಳಿದುಕೊಳ್ಳಲು ಸುಲಭ, ಕೆಟ್ಟ ಅಥವಾ ಹಳೆಯ ಮೊಟ್ಟೆ ಬಳಕೆ ತಪ್ಪಿಸಬಹುದು, ಆಹಾರ ಸುರಕ್ಷತೆ ಹೆಚ್ಚಾಗುತ್ತದೆ, ಬ್ರೆಡ್ ಅಥವಾ ಹಾಲಿನ ಪ್ಯಾಕೆಟ್ಗಳಂತೆ ಮೊಟ್ಟೆಗಳಿಗೂ ದಿನಾಂಕ ವ್ಯವಸ್ಥೆ ಜಾರಿಗೆ ಬರುತ್ತಿರುವುದು ಮಹತ್ವದ ಬದಲಾವಣೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜಾರಿಗೆ ಬರುವ ದಿನಾಂಕ: ಈ ನಿಯಮವು ಉತ್ತರ ಪ್ರದೇಶ ರಾಜ್ಯದಲ್ಲಿ ಏಪ್ರಿಲ್ 1, 2026ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ.





















