Home Advertisement
Home ನಮ್ಮ ಜಿಲ್ಲೆ ಶಿವಮೊಗ್ಗ ಶಿವಮೊಗ್ಗದಲ್ಲಿ ಹತ್ಯೆಗೀಡಾದ ವಿದ್ಯಾರ್ಥಿ ಸಂಕೇತ್ ಮನೆಗೆ ಸಂಸದ ಬಿ.ವೈ. ರಾಘವೇಂದ್ರ ಭೇಟಿ

ಶಿವಮೊಗ್ಗದಲ್ಲಿ ಹತ್ಯೆಗೀಡಾದ ವಿದ್ಯಾರ್ಥಿ ಸಂಕೇತ್ ಮನೆಗೆ ಸಂಸದ ಬಿ.ವೈ. ರಾಘವೇಂದ್ರ ಭೇಟಿ

0
70

ಸಂಸದರಿಂದ ಬಾಲಕನ‌ ಕುಟುಂಬಕ್ಕೆ ₹1 ಲಕ್ಷ ರೂ. ನೆರವು

ಶಿವಮೊಗ್ಗ : ನಗರದ ಊರಗಡೂರಿನಲ್ಲಿ ಹತ್ಯೆಗೀಡಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ ನಿವಾಸಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅವರು ಬುಧವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮಗನನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿದ್ದ ಪೋಷಕರಿಗೆ ಧೈರ್ಯ ತುಂಬಿದ ಅವರು, ವೈಯಕ್ತಿಕವಾಗಿ ₹1 ಲಕ್ಷ ರೂಪಾಯಿ ಆರ್ಥಿಕ ನೆರವನ್ನು ಹಸ್ತಾಂತರಿಸಿದರು.

ಈ ವೇಳೆ ಸಂಕೇತ್ ಅವರ ಅಕ್ಕನಿಗೆ ಉದ್ಯೋಗ ಕಲ್ಪಿಸಲು ಪ್ರಯತ್ನಿಸುವ ಭರವಸೆಯನ್ನೂ ಸಂಸದರು ನೀಡಿದರು. “ಕುಟುಂಬದೊಂದಿಗೆ ನಾವು ಇದ್ದೇವೆ” ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅಗ್ನಿ ಅವಘಡ

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ: ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಘವೇಂದ್ರ, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಡುತ್ತಿರುವುದಾಗಿ ಆರೋಪಿಸಿದರು. “ಕ್ಷುಲ್ಲಕ ಕಾರಣಕ್ಕೆ ಜಗಳ ಬಿಡಿಸಲು ಹೋದ ಅಮಾಯಕ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಪೈಶಾಚಿಕ ಕೃತ್ಯ. ಸಣ್ಣ ವಯಸ್ಸಿನ ಹುಡುಗರನ್ನು ಮುಂದಿಟ್ಟು ಇಂತಹ ರಾಕ್ಷಸಿ ಕೃತ್ಯಗಳನ್ನು ಪದೇ ಪದೇ ಎಸಗಲಾಗುತ್ತಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಿಡಿಗೇಡಿಗಳಿಗೆ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಬಂದಿದೆ,” ಎಂದು ಟೀಕಿಸಿದರು.

ಇದನ್ನೂ ಓದಿ: ಲಂಚ ಪ್ರಕರಣ: ಗಣಿ ಉಪನಿರ್ದೇಶಕ ಬಂಧನ – ದಾಳಿಯಲ್ಲಿ ₹4 ಕೋಟಿಗೂ ಹೆಚ್ಚು ನಗದು ಪತ್ತೆ

ಹೆಚ್ಚುತ್ತಿರುವ ಅಶಾಂತಿ ಕುರಿತು ಆತಂಕ: ಶಿವಮೊಗ್ಗದಲ್ಲಿ ಬೈಕ್ ತ್ರಿಪಲ್ ರೈಡ್ ಹೋಗುವುದು, ಕೈಯಲ್ಲಿ ಕೋಲು ಹಿಡಿದು ಜನರನ್ನು ಹೆದರಿಸುವ ಘಟನೆಗಳು ಸಾಮಾನ್ಯವಾಗುತ್ತಿರುವುದಾಗಿ ಅವರು ಹೇಳಿದರು. ಶಿರಾಳಕೊಪ್ಪದಲ್ಲಿಯೂ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿರುವುದನ್ನು ಉಲ್ಲೇಖಿಸಿದ ಅವರು, “ಸರ್ಕಾರದ ಓಲೈಕೆ ರಾಜಕಾರಣವೇ ಇಂತಹ ಘಟನೆಗಳಿಗೆ ಪ್ರೇರಣೆ ನೀಡುತ್ತಿದೆ. ಇನ್ನೆಷ್ಟು ಅಮಾಯಕರ ಬಲಿ ತೆಗೆದುಕೊಳ್ಳುತ್ತೀರಿ?” ಎಂದು ಪ್ರಶ್ನಿಸಿದರು.

ಗಾಯಗೊಂಡ ಬಾಲಕನ ಮನೆಗೂ ಭೇಟಿ: ಘಟನೆಯಲ್ಲಿ ಗಾಯಗೊಂಡಿರುವ ಮತ್ತೊಬ್ಬ ಬಾಲಕನ ಮನೆಗೂ ಸಂಸದರು ಭೇಟಿ ನೀಡಿ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

Previous article‘VIROSH’ ಹಬ್ಬ: ಎರಡು ಸಂಪ್ರದಾಯಗಳಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹ?
Next articleಕಾರ್ಮಿಕರ ಬೇಡಿಕೆ ಈಡೇರಿಕೆಗೆ BMS ಪ್ರತಿಭಟನೆ: ಪ್ರಧಾನಮಂತ್ರಿಗೆ ಮನವಿ