ಶಿವಮೊಗ್ಗ: ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿರುವ ಸಿಎಂ ಕುರ್ಚಿ ಕದನಕ್ಕೆ ಸದ್ಯ ತಾತ್ಕಾಲಿಕವಾಗಿ ತೆರೆಬಿದ್ದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕದನ ವಿರಾಮದ ಬೆಳವಣಿಗೆಯನ್ನು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ತಮ್ಮದೇ ಶೈಲಿಯಲ್ಲಿ ಲೇವಡಿ ಮಾಡಿದ್ದಾರೆ.
“ಸರ್ಕಾರಕ್ಕೆ ಹೃದಯಾಘಾತವಾಗಿದ್ದು, ಸದ್ಯಕ್ಕೆ ‘ಸ್ಟಂಟ್’ (Stent) ಅಳವಡಿಸಿ ಜೀವ ಉಳಿಸಲಾಗಿದೆ,” ಎಂದು ಮಾರ್ಮಿಕವಾಗಿ ಟೀಕಿಸಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ಪ್ರದರ್ಶನವನ್ನು ‘ನಾಟಕ’ ಎಂದು ಜರಿದರು.
“ಪವರ್ ಶೇರಿಂಗ್ ವಿಚಾರದಲ್ಲಿ ನಡೆದಿರುವ ಈ ಹೊಂದಾಣಿಕೆ ಕೇವಲ ತಾತ್ಕಾಲಿಕ. ಬೆಳಗಾವಿ ಅಧಿವೇಶನ ಮುಗಿಯುತ್ತಿದ್ದಂತೆ ಈ ಕಿತ್ತಾಟದ ಮುಂದಿನ ಅಂಕ ಮತ್ತೆ ಶುರುವಾಗಲಿದೆ. ಅಲ್ಲಿಯವರೆಗೂ ಕಷ್ಟಪಟ್ಟು ಬ್ರೇಕ್ ಹಾಕಿದ್ದಾರೆ ಅಷ್ಟೇ,” ಎಂದು ಭವಿಷ್ಯ ನುಡಿದರು.
ಕಳೆದ ಒಂದು ತಿಂಗಳಿಂದ ಕುರ್ಚಿ ಆಸೆಗಾಗಿ ಕಾದಾಟ ನಡೆಸಿದ್ದು ಇದೇ ಕಾಂಗ್ರೆಸ್ ನಾಯಕರು. ಬೀದಿರಂಪಾಟ ಮಾಡಿ ಈಗ ಇಬ್ಬರೂ ಒಟ್ಟಿಗೆ ಕುಳಿತು ಪತ್ರಿಕಾಗೋಷ್ಠಿ ನಡೆಸುವ ಮೂಲಕ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ.
ಈ ಹೈಡ್ರಾಮಕ್ಕೆ ಮಾಧ್ಯಮಗಳನ್ನು ಮೊದಲ ಆರೋಪಿ ಮಾಡುತ್ತಿದ್ದಾರೆ, ನಂತರ ವಿರೋಧ ಪಕ್ಷಗಳ ಕಡೆ ಬೊಟ್ಟು ಮಾಡುತ್ತಿದ್ದಾರೆ. ಸರ್ಕಾರ ಮಾಡಿರುವ ಎಡವಟ್ಟುಗಳಿಗೆ ಬೇರೆಯವರನ್ನು ಹೊಣೆ ಮಾಡುವುದು ಇವರ ಚಾಳಿಯಾಗಿದೆ ಎಂದು ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರ್ಚಿ ಕಾಳಗದಿಂದಾಗಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಅಧಿಕಾರಿಗಳಲ್ಲಿ ಅಭದ್ರತೆ ಮತ್ತು ಗೊಂದಲ ಮನೆಮಾಡಿದ್ದು, ಯಾರು ಯಾರ ಮಾತು ಕೇಳಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದರ ನೇರ ಪರಿಣಾಮ ಅನ್ನದಾತನ ಮೇಲಾಗುತ್ತಿದೆ.
ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ವಿಳಂಬವಾಗಿದ್ದು, ರೈತರು ಕಡಿಮೆ ಬೆಲೆಗೆ ಬೆಳೆ ಮಾರಿ ನಷ್ಟ ಅನುಭವಿಸುತ್ತಿದ್ದಾರೆ. ರಾಜ್ಯದ ರೈತರು ಸಂಕಷ್ಟದಲ್ಲಿದ್ದರೆ, ಸಿಎಂ ಮತ್ತು ಡಿಸಿಎಂ ಪರಸ್ಪರ ತೇಪೆ ಹಚ್ಚುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಸಂಸದರು ಸರ್ಕಾರದ ವಿರುದ್ಧ ಕಿಡಿಕಾರಿದರು.
























bet9jach, yet another avenue within the Bet9ja universe. Could be worth checking out to see what’s on offer. bet9jach